ಉಪೇಂದ್ರ ಓಂ, ಸ್ವಸ್ತಿಕ್ ಚಿತ್ರಗಳನ್ನು ಚಿಹ್ನೆಯ ಮೂಲಕ ಶೀರ್ಷಿಕೆಯಾಗಿ ಬಳಸಿಕೊಂಡಿದ್ದರು. ಇದರಲ್ಲಿ ಒಂದು ಹೆಸರು ಮಾಡಿದರೆ, ಮತ್ತೋಂದು ಸಾಧಾರಣ ಅನಿಸಿಕೊಂಡಿತ್ತು. ಈಗ ಹಿರಿಯ ನಿರ್ದೇಶಕ ಪುಟಾಣೆ ರಾಮರಾವ್ ಇನ್ನೋಂದು ಹೆಜ್ಜೆ ಮುಂದಕ್ಕೆ ಹೋಗಿ ‘ಓಂ ಶ್ರೀ ಸ್ವಸ್ತಿಕ್’ ಹೆಸರುಗಳನ್ನು ಚಿಹ್ಮೆಗಳೊಂದಿಗೆ ಹೆಸರಿನಲ್ಲಿ ಗುರುತಿಸಿಕೊಂಡು ನಿರ್ಮಾಣ ಮಾಡಿದ್ದಾರೆ.
ತ್ರಿಸಂಗಮ ಹಂಗಾಮವೆಂದು ಉಪಶೀರ್ಷಿಕೆಯಾಗಿ ಹೇಳಿಕೊಂಡಿದೆ. ಹೊಸಕೋಟೆ, ರಾಮೋಹಳ್ಳಿ ಕಡೆಗಳಲ್ಲಿ ಶೇಕಡ 75ರಷ್ಟು ಚಿತ್ರೀಕರಣ ಮುಗಿಸಿ, ಎರಡು ಹಾಡುಗಳು, ಸಾಹಸ ಮತ್ತು ಮಾತಿನ ಭಾಗದ ಕೆಲಸವನ್ನು ಉಳಿಸಿಕೊಂಡಿದೆ.
ಅಡಿಬರಹದಲ್ಲಿ ಹೇಳಿರುವಂತೆ ಕಮರ್ಷಿಯಲ್, ಕಲಾತ್ಮಕ ಹಾಗೂ ಇವರೆಡು ಮಿಶ್ರಣಹೊಂದಿರುವ ಮೂರು ಕತೆಗಳು ಬೇರೆ ಬೇರೆ ತರದಲ್ಲಿ ಹೊಸತನದಿಂದ ಕೂಡಿದ್ದು, ನವರಸಗಳಿಂದ ತುಂಬಿಕೊಂಡಿದೆ. ಪುಣಾಣೆ ಫಿಲಿಂ ಇನ್ಸಿಟ್ಯೂಟ್‍ದಲ್ಲಿ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳು ನಟಿಸಿದ್ದು, ಅವರಿಂದಲೇ ಡಬ್ಬಿಂಗ್ ಮಾಡಿಸಿರುವುದು ವಿಶೇಷ.
ಇಬ್ಬರು ನಾಯಕರು, ಒಬ್ಬಳು ನಾಯಕಿ, ಇಬ್ಬರು ಖಳನಾಯಕರು, ಮೂರು ಸಾಹಸಗಳು ಇರಲಿದೆ. ತಾರಗಣದಲ್ಲಿ ಸಂತೋಷ್‍ಬಾರ್ಕಿ, ಯತೀಶ್, ನಿತಿನ್, ರಾಹುಲ್, ಅಜಯ್, ರಂಜಿತ, ಸ್ನೇಹ, ವಿನಯ್, ಶೃತಿಶೆಟ್ಟಿ ಮತ್ತು ಮಾಸ್ಟರ್ ಚಿರಂಜೀವಿ ಎಲ್ಲರೂ ಪಾತ್ರದ ಸಲುವಾಗಿ ತಾಲೀಮು ನಡೆಸಿ ಅನುಭೂತಿಯಿಂದ ಕ್ಯಾಮಾರ ಮುಂದೆ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.
ತಮ್ಮೇನಹಳ್ಳಿದಾಸ್-ನಾಗಮುಖ ಸಾಹಿತ್ಯದ ನಾಲ್ಕು ಹಾಡುಗಳಿಗೆ ಲೋಕಿ ಸಂಗೀತವಿದೆ. ರಚನೆ,ಚಿತ್ರಕಥೆ, ಸಂಭಾಷಣೆ ಭೋಗೇಶ್.ಎಸ್.ಕಾರಟಕಿ, ಛಾಯಾಗ್ರಹಣ ಧನರಾಜ್‍ಚೌಹಾಣ್, ಸಂಕಲನ ಸುಮಂತ್, ಹಿನ್ನಲೆ ಶಬ್ದ ಸತೀಶ್‍ಬಾಬು ನಿರ್ವಹಿಸಿದ್ದಾರೆ.ತಂಡಕ್ಕೆ ಶುಭಹಾರೈಸಲು ಆಗಮಿಸಿದ್ದ ರಂಗಿತರಂಗ ಖ್ಯಾತಿಯ ಅರವಿಂದ್‍ರಾವ್ ಮಾತನಾಡಿ ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಬೇಡಿ. ಪ್ರವೃತ್ತಿಯಾಗಿ ಬೆಳಸಿಕೊಳ್ಳುವುದು ಸೂಕ್ತ. ರೀಲ್,ರಿಯಲ್‍ಗೂ ವ್ಯತ್ಯಾಸವಿದೆ. ಮೊದಲು ನಿಮ್ಮ ನೆಲವನ್ನು ಗಟ್ಟಿ ಮಾಡಿಕೊಳ್ಳಬೇಕು. ಸರಸ್ವತಿ ಎಲ್ಲರನ್ನು ಆರಿಸಿಕೊಳ್ಳುವುದಿಲ್ಲ.
ನೀವುಗಳು ಪ್ರತಿಭೆಯನ್ನು ತೋರಿಸಿದಾಗ ಮಾತ್ರ ಉದ್ಯಮದಲ್ಲಿ ಉಳಿಯಲು ಸಾಧ್ಯವೆಂದು ಕಿವಿಮಾತು ಹೇಳಿದರು. ನಿರ್ದೇಶಕರುಗಳಾದ ವಿಶಾಲ್‍ರಾಜ್ ಮತ್ತು ಹರಿಸಂತೋಷ್ ಅನಾಗತ ಕಲಾವಿದರಿಗೆ ಒಳ್ಳೆಯದಾಗಲೆಂದು ಹರಸಿದರು. ಇದಕ್ಕೂ ಮುನ್ನ ತುಣುಕುಗಳು ದೊಡ್ಡ ಪರದೆ ಮೇಲೆ ಪ್ರದರ್ಶನಗೊಂಡಿತು.
Be the first to comment