Olave Mandara 2 Review : ಪ್ರೀತಿಯ ಸಾಕ್ಷಾತ್ಕಾರ ಒಲವೇ ಮಂದಾರ2

ಚಿತ್ರ: ಒಲವೇ ಮಂದಾರ2

ನಿರ್ದೇಶಕ: ಎಸ್ ಆರ್ ಪಾಟೀಲ್
ನಿರ್ಮಾಣ: ರಮೇಶ್ ಮರಗೋಳ, ಟಿ ಎಂ ಸತೀಶ್
ಪಾತ್ರ ವರ್ಗ: ಸನತ್, ಪ್ರಜ್ಞ ಭಟ್, ಅನುಪ ಸತೀಶ್, ಭವ್ಯ, ಶಿವಾನಂದ ಸಿಂದಗಿ ಇತರರು.

ರೇಟಿಂಗ್ : 3/5

ಪರಿಶುದ್ಧ ಪ್ರೇಮಕಥೆಯ ಜೊತೆಗೆ ನೋವು, ನಲಿವು, ತ್ಯಾಗ ಎಲ್ಲವನ್ನು ಬೆಸೆದಿರುವ ಕಥೆಯಾಗಿ ಒಲವೇ ಮಂದಾರ2 ತೆರೆಯ ಮೇಲೆ ಮೂಡಿ ಬಂದಿದೆ.

ಚಿತ್ರದ ಕಥೆ ತ್ರಿಕೋನ ಪ್ರೇಮದ ರೀತಿ ಅನಿಸಿದರೂ, ಇಲ್ಲಿ ನಿಷ್ಕಲ್ಮಶವಾದ ಪ್ರೀತಿಗೆ ಅರ್ಥವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಲಾಗಿದೆ.

ನಾಯಕ ಸನತ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ವೇಳೆಗೆ ಅನುಪ ಸತೀಶ್ ಅವನನ್ನು ಇಷ್ಟ ಪಡುತ್ತಾಳೆ. ಈ ಸಂದರ್ಭದಲ್ಲಿ ನಾಯಕ ತನ್ನ ಪ್ರೀತಿಯ ಫ್ಲಾಶ್ ಬ್ಯಾಕ್ ಹೇಳುತ್ತಾನೆ.

ರಾಜಕೀಯ ಮುಖಂಡನ ಮಗಳಾದ ಪ್ರಜ್ಞಾ ಭಟ್ ಅವಳನ್ನು ಪ್ರೀತಿಸುವ ಸನತ್ ಗೆ ಪ್ರಜ್ಞಾ ಭಟ್ ತಂದೆಯಿಂದ ವಿರೋಧ ವ್ಯಕ್ತವಾಗುತ್ತದೆ. ಆದರೆ ಮನೆಯಿಂದ ಹೊರ ನಡೆಯುವ ಪ್ರಜ್ಞಾ ಭಟ್, ಸನತ್ ಜೊತೆಗೆ ವಿವಾಹವಾಗುತ್ತಾಳೆ. ಮುಂದೆ ಅವಳ ಬದುಕಿನಲ್ಲಿ ದುರಂತ ನಡೆಯುತ್ತದೆ. ನಂತರ ನಾಯಕನ ಬದುಕು ಏನಾಗುತ್ತದೆ, ಈ ಎಲ್ಲಾ ಕ್ಲೈಮ್ಯಾಕ್ಸ್ ಗೆ ಚಿತ್ರವನ್ನು ನೋಡಬೇಕು.

ಚಿತ್ರದ ನಾಯಕನಾಗಿ ನಟಿಸಿರುವ ಸನತ್ ಪ್ರೇಮಿಯಾಗಿ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಸುವ ಮೂಲಕ ನ್ಯಾಯ ಒದಗಿಸಿದ್ದಾರೆ. ನಾಯಕಿ ಪಾತ್ರದಲ್ಲಿ ನಟಿಸಿರುವ ಪ್ರಜ್ಞಾ ಭಟ್ ಲೀಲಾಜಾಲವಾಗಿ ತನ್ನ ಪಾತ್ರವನ್ನು ನಿರ್ವಹಿಸುವ ಮೂಲಕ ಗಮನ ಸೆಳೆಯುತ್ತಾರೆ. ಇನ್ನೊಬ್ಬ ನಾಯಕಿ ಅನುಪ ಸತೀಶ್ ಕೂಡ ತಮ್ಮ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.

ಚಿತ್ರವನ್ನು ನಿರ್ದೇಶಿಸಿರುವ ಎಸ್ ಆರ್ ಪಾಟೀಲ್ ಅವರು ಪರಿಶುದ್ಧ ಪ್ರೇಮಕಥೆಯನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಚಿತ್ರಕಥೆ ಒಂದಷ್ಟು ಬಿಗಿಯಾಗಿದ್ದರೆ ಚಿತ್ರ ಪ್ರೇಕ್ಷಕರಿಗೆ ಸಿನಿಮಾ ಇನ್ನಷ್ಟು ಹತ್ತಿರವಾಗುವ ಸಾಧ್ಯತೆ ಇತ್ತು.

ಡಾ. ಕಿರಣ್ ತೋಂಟಬೈಲ್ ಅವರ ಸಂಗೀತ ಚೆನ್ನಾಗಿ ಮೂಡಿ ಬಂದಿದೆ. ಚಿತ್ರದ ಛಾಯಾಗ್ರಹಣ ಉತ್ತಮವಾಗಿದ್ದು ಪ್ರೇಕ್ಷಕರಿಗೆ ಖುಷಿ ಅನಿಸುತ್ತದೆ.

ಪ್ರೇಮಿಗಳು, ಪ್ರೀತಿಸುವ ಮನಸ್ಸುಗಳು ಸೇರಿದಂತೆ ಒಟ್ಟಾರೆ ಕುಟುಂಬವರ್ಗ ಒಟ್ಟಾಗಿ ಕುಳಿತು ಚಿತ್ರ ನೋಡುವಂತಿದೆ.
_____

Be the first to comment

Leave a Reply

Your email address will not be published. Required fields are marked *

Translate »
error: Content is protected !!