ಓ ಮೈ ಲವ್ ಚಿತ್ರಕ್ಕೆ ಸಚಿವ ಶ್ರೀರಾಮುಲು ಚಾಲನೆ

ಈ ಹಿಂದೆ ತೂಫಾನ್, ಬಳ್ಳಾರಿ ದರ್ಬಾರ್, 18 ಟು 25 ಎನ್ನುವ ವಿಭಿನ್ನ ಶೈಲಿಯ ಚಲನಚಿತ್ರಗಳನ್ನು ಮಾಡಿದ್ದ ನಿರ್ದೇಶಕ ಸ್ಮೈಲ್ ಶ್ರೀನು ಅವರೀಗ ಮತ್ತೊಂದು ಬಿಗ್ ಪ್ರಾಜೆಕ್ಟ್  ಗೆ ಕೈ ಹಾಕಿದ್ದಾರೆ. ಅವರ ಈ  ಸಾಹಸಕ್ಕೆ ಸಾಬಳ್ಳಾರಿ ಮೂಲದ ಜಿ.ರಾಮಾಂಜಿನಿ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭ ಕಳೆದ ಶುಕ್ರವಾರ ರಾಜರಾಜೇಶ್ವರಿ ನಗರದ ಶ್ರೀ ಷಣ್ಮುಖ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.  ಸಚಿವ ಶ್ರೀರಾಮುಲು ಅವರು ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡುವುದರ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ಹಿರಿಯ ನಟ ಶಶಿಕುಮಾರ್ ಅವರ ಪುತ್ರ ಅಕ್ಷಿತ್ ಶಶಿಕುಮಾರ್ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು, ಪ್ರಾರಂಭ ಖ್ಯಾತಿಯ ಕೀರ್ತಿ ಕಲಕೇರಿ ಅವರು ನಾಯಕಿಯಾಗಿ  ಕಾಣಿಸಿಕೊಳ್ಳುತ್ತಿದ್ದಾರೆ. ದೀಪಿಕಾ ಆರಾದ್ಯ ಕೂಡ ಚಿತ್ರದಲ್ಲಿದ್ದಾರೆ.

ಸೀತಾಯಣ ಎನ್ನುವ ಚಿತ್ರದ ಮೂಲಕ ಸಿನಿಮಾರಂಗಕ್ಕ ಎಂಟ್ರಿಕೊಟ್ಟ ಅಕ್ಷಿತ್ ಶಶಿಕುಮಾರ್ ನಾಯಕನಾಗುತ್ತಿರುವ ಮೂರನೇ ಚಿತ್ರವಿದು.  ಆರಂಭದಿಂದಲೂ ವಿಭಿನ್ನ ಶೈಲಿಯ ಚಿತ್ರಗಳನ್ನೇ ನಿರ್ದೇಶಿಸುತ್ತ ಬಂದಿರುವ  ಸ್ಮೈಲ್ ಶ್ರೀನು ಈಗ ಎಲ್ಲಾ ವರ್ಗದ ಜನರಿಗೂ ಇಷ್ಟವಾಗುವಂಥ ಚಿತ್ರವನ್ನು ನಿರೂಪಿಸುತ್ತಿದ್ದಾರೆ.

ಉದ್ಯಮಿ ಜಿ.ರಾಮಾಂಜಿನಿ ಅವರೇ ಈ ಚಿತ್ರದ ಕಥೆಯನ್ನು  ಬರೆದಿದ್ದಾರೆ. ಅಲ್ಲದೆ ಜಿಸಿಬಿ ಪ್ರೋಡಕ್ಷನ್ ಮೂಲಕ ಈ ಚಿತ್ರವನ್ನು ಅದ್ದೂರಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ. ತಾನು ಹೇಗೆ ನಿರ್ಮಾಪಕನಾದೆ ಎನ್ನುವ  ಕುರಿತಂತೆ ಮಾತನಾಡುತ್ತ ಈ ಚಿತ್ರದಲ್ಲಿ ಬರೀ ಲವ್ ಮಾತ್ರವಲ್ಲದೆ ಫ್ಯಾಮಿಲಿ, ಆಕ್ಷನ್, ಸೆಂಟಿಮೆಂಟ್ ಎಲ್ಲಾ ಥರದ ಎಲಿಮೆಂಟ್ಸ್ ಇದೆ. ಚಿಕ್ಕಂದಿನಿಂದಲೂ ನನಗೆ ಸಿನಿಮಾರಂಗದಲ್ಲಿ ತೊಡಗಿಕೊಳ್ಳಬೇಕು, ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಎಂಬ ಆಸೆಯಿತ್ತು.

ಒಮ್ಮೆ ನಿರ್ದೇಶಕ ಶ್ರೀನು ಅವರು ಚಿತ್ರ ಮಾಡಬೇಕೆಂಬ ಉದ್ದೇಶದಿಂದ ನನ್ನ ಬಳಿ ಬಂದು ತಾವು ಮಾಡಿಕೊಂಡಿದ್ದ ಒಂದಷ್ಟು ಕಥೆಗಳನ್ನು ಹೇಳಿದರು. ಆಗ ನಾನು ಮಾಡಿದ್ದ ಒಂದು ಕಥೆಯನ್ನೂ ಅವರಿಗೆ ಹೇಳಿದೆ, ಆಗವರು ಇದೇ ಕಥೆ ಚೆನ್ನಾಗಿದೆ ಎಂದು ಇಷ್ಟಪಟ್ಟು ಇದನ್ನೇ ಚಿತ್ರ ಮಾಡೋಣ ಅಂತ ಹೇಳಿದರು, ಸ್ಕ್ರಿಪ್ಟ್ ಕೂಡ ರೆಡಿಮಾಡಿಕೊಂಡರು. ನಮ್ಮ ಪ್ರೊಡಕ್ಷನ್‍ನ ಮೊದಲಚಿತ್ರ ಅದ್ದೂರಿಯಾಗಿ ಮೂಡಿಬರಬೇಕು ಎಂಬ ಉದ್ದೇಶದಿಂದ ಚಿತ್ರಕ್ಕೇನು ಬೇಕೋ ಅದನ್ನೆಲ್ಲ ಯಾವುದಕ್ಕೂ ಕೊರತೆಮಾಡದೆ ಒದಗಿಸುತ್ತಿದ್ದೇನೆ ಎಂದು ಹೇಳಿದರು. ಅದಕ್ಕೆ ತಕ್ಕಂತೆ ಒಂದಷ್ಟು ಅದ್ದೂರಿಯಾಗೇ ಚಿತ್ರದ ಮುಹೂರ್ತ ಸಮಾರಂಭ ಏರ್ಪಡಿಸಿದ್ದ ಅವರು, ಚಿತ್ರತಂಡದವರಿಗೆಂದೇ ಸಿನಿಮಾ ಟೈಟಲ್ ಹಾಕಿಸಿದ್ದ ಡೈರಿಯನ್ನು ಮಾಡಿಸಿದ್ದರು.
ಇಲ್ಲಿ ಚಿತ್ರಕಥೆಯ ಜೊತೆಗೆ ಸಂಭಾಷಣೆಯನ್ನೂ ನಿರ್ದೇಶಕರೇ ಹೆಣೆದಿದ್ದಾರೆ. ಚಿತ್ರದ ವಿಶೇಷತೆಗಳ ಕುರಿತಂತೆ ಅವರು ಮಾತನಾಡುತ್ತ ಇದೊಂದು ಲವ್ ಸಬ್ಜೆಕ್ಟೇ ಆದರೂ ಸಹ ಒಂದೊಳ್ಳೇ ಮೆಸೇಜ್ ಇದರಲ್ಲಿದೆ. ಈ ಟೈಟಲ್ ಕೂಡ ಚಿತ್ರದ ಕಥೆಯನ್ನು ಹೇಳುತ್ತದೆ. ಇವತ್ತಿನ ಹುಡುಗರೆಲ್ಲ ವೈಫೈ ಪ್ರೀತಿಯ ಹಿಂದೆ ಬಿದ್ದಿದ್ದಾರೆ, ಮೊಬೈಲ್, ಇಂಟರ್‍ನೆಟ್ ಅಂತ ಸಂಬಂದಗಳ ಮಹತ್ವವನ್ನು ಮರೆಯುತ್ತಿದ್ದಾರೆ, ಅದೆಲ್ಲಕ್ಕಿಂತ ನಮ್ಮ ನಡುವಿನ ಸಂಬಂಧ, ಪ್ರೀತಿಯೇ ಮುಖ್ಯ ಅಂತ ಈ ಚಿತ್ರದ ಮೂಲಕ ಹೇಳಹೊರಟಿದ್ದೇನೆ.

ಚಿತ್ರವನ್ನು ಒಟ್ಟು ಮೂರು ಷೆಡ್ಯೂಲ್‍ಗಳಲ್ಲಿ ಚಿತ್ರೀಕರಿಸಬೇಕು ಎಂದು ಯೋಜನೆ ಹಾಕಿಕೊಂಡಿದ್ದೇವೆ. ಅಲ್ಲದೆ ಹಾಡುಗಳಿಗೆ ವಿದೇಶಕ್ಕೆ ಹೋಗುವ ಪ್ಲಾನ್ ಕೂಡ ಇದೆ ಎಂದರು. ಅಲ್ಲದೆ ಏಕೆ ಹೊಸಬರನ್ನೇ ಹಾಕಿಕಕೊಂಡು ಚಿತ್ರ ಮಾಡುತ್ತಿದ್ದೀರಿ ಎಂದಾಗ ಹೊಸಬರಾದರೆ ನಾವು ಅಂದುಕೊಂಡದ್ದನ್ನು ತೆರೆಮೇಲೆ ತರುವುದು ಸುಲಭವಾಗಿರುತ್ತದೆ ಎಂದು ಹೇಳಿದರು.

ಲವ್, ಫ್ಯಾಮಿಲಿ ಎಂಟರ್‍ಟೈನರ್ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಈಗಿನ ವೈಫೈ ಯುಗದಲ್ಲಿ ಕಣ್ಮರೆಯಾಗುತ್ತಿರುವ ಭಾವನಾತ್ಮಕ ಸಂಬಂಧಗಳ ಮಹತ್ವವನ್ನು ನಿರ್ದೇಶಕ ಸ್ಮೈಲ್‍ಶ್ರೀನು ಅವರು ಹೇಳಲು ಪ್ರಯತ್ನಿಸಿದ್ದಾರೆ. ಚಿತ್ರದ ಮೇಕಿಂಗ್, ಸಾಂಗ್, ಸ್ಟಾರ್‍ಕಾಸ್ಟ್ ಯಾವುದರಲ್ಲೂ ಕಾಂಪ್ರಮೈಸ್ ಆಗದೆ  ಅದ್ದೂರಿಯಾಗಿಯೇ ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿದೆ. ಮಗಧೀರ ಚಿತ್ರದಲ್ಲಿ ವಿಲನ್ ಆಗಿದ್ದ  ದೇವ್‍ಗಿಲ್ ಅವರು ಈ ಚಿತ್ರದಲ್ಲಿ  ಖಳನಾಯಕನಾಗಿ  ಬಣ್ಣ ಹಚ್ಚಲಿದ್ದಾರೆ.

ಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್ ಅವರು ಈ ಚಿತ್ರದ 6 ಹಾಡುಗಳಿಗೆ  ಸಾಹಿತ್ಯ ರಚಿಸುತ್ತಿದ್ದು,  ಚರಣ್ ಅರ್ಜುನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.  ಚಿತ್ರದ 6 ಆ್ಯಕ್ಷನ್‍ಗಳಿಗೆ ಇಸ್ಮಾರ್ಟ್ ಶಂಕರ್, ಅಲಾ ವೈಕುಂಠಪುಲೋ ಖ್ಯಾತಿಯ ರಿಯಲ್‍ಸತೀಶ್ ಅವರು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.  ಹೆಸರಾಂತ ಕೊರಿಯೋಗ್ರಾಫರ್ ಮುರುಳಿ ಎಲ್ಲಾ ಹಾಡುಗಳಿಗೆ ನೃತ್ಯನಿರ್ದೇಶನ ಮಾಡುತ್ತಿದ್ದಾರೆ.  ಆಕಾಶ್‍ಕುಮಾರ್ ಚವನ್ ಅವರ ಸಹನಿರ್ದತೊಡಗಿಕೊಂಡಿರುವ

Be the first to comment

Leave a Reply

Your email address will not be published. Required fields are marked *

Translate »
error: Content is protected !!