ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯ’ಡಿಸೆಂಬರ್ 12ರಂದು ತೆರೆಗೆ

ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಪೆÇ್ರಡಕ್ಷನ್ಸ್ ಲಾಂಛನದಲ್ಲಿ ಎನ್.ಸಂದೇಶ್ ಅವರು ನಿರ್ಮಿಸಿರುವ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಒಡೆಯ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಡಿಸೆಂಬರ್ 12ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಸಂದೇಶ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಹಲವು ವಿಶೇಷಗಳ ಸಂಗಮ. ಈ ಹಿಂದೆ ಸಂದೇಶ್ ಪೆÇ್ರಡಕ್ಷನ್ಸ್‍ನಿಂದ ದರ್ಶನ್ ಅವರು ಅಭಿನಯಿಸಿದ್ದ `ಪ್ರಿನ್ಸ್’ ಹಾಗೂ `ಐರಾವತ’ ಚಿತ್ರಗಳನ್ನು ನಿರ್ಮಿಸಲಾಗಿತ್ತು. ದರ್ಶನ್ ಅವರ ಅಭಿನಯದಲ್ಲಿ ಈ ಸಂಸ್ಥೆ ನಿರ್ಮಿಸಿರುವ ಮೂರನೇ ಚಿತ್ರ `ಒಡೆಯ’. ಹಾಗೂ ನಿರ್ದೇಶಕ ಎಂ.ಡಿ.ಶ್ರೀಧರ್ ಈ ಹಿಂದೆ ದರ್ಶನ್ ಅವರ ನಟನೆಯಲ್ಲಿ `ಬುಲ್‍ಬುಲ್’ ಹಾಗೂ `ಪೆÇರ್ಕಿ’ ಚಿತ್ರಗಳನ್ನು ನಿರ್ದೇಶಿಸಿದ್ದರು. ಶ್ರೀಧರ್ ಹಾಗೂ ದರ್ಶನ್ ಅವರ ಕಾಂಬಿನೇಶನ್‍ನಲ್ಲಿ ಮೂದಿಬರುತ್ತಿರುವ ಮೂರನೇ ಚಿತ್ರ `ಒಡೆಯ’. ಇದೇ ವರ್ಷದಲ್ಲಿ ದರ್ಶನ್ ಅವರು ಅಭಿನಯಿಸಿದ್ದ `ಸಂಗೊಳ್ಳಿ ರಾಯಣ್ಣ’ ಹಾಗೂ `ಯಜಮಾನ’ ಚಿತ್ರಗಳು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದು, `ಒಡೆಯ’ ಚಿತ್ರ ಕೂಡ ಇದೇ ವರ್ಷದಲ್ಲೇ ಬಿಡುಗಡೆಯಾಗುತ್ತಿದ್ದು, ದರ್ಶನ್ ಅವರ ಒಟ್ಟು ಮೂರು ಚಿತ್ರಗಳು ಈ ವರ್ಷದಲ್ಲೇ ಬಿಡುಗಡೆಯಾದಂತಾಗುತ್ತದೆ.

ಎಂ.ಡಿ.ಶ್ರೀಧರ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಜಯಂತ ಕಾಯ್ಕಿಣಿ, ಡಾ||ವಿ.ನಾಗೇಂದ್ರಪ್ರಸಾದ್, ಕವಿರಾಜ್ ಹಾಗೂ ಬಹದ್ದೂರ್ ಚೇತನ್ ಕುಮಾರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಕೆ.ಕೃಷ್ಣಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಕಲೈ ನೃತ್ಯ ನಿರ್ದೇಶನ ಹಾಗೂ ವಿಜಯ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಶಾಂತ್ ರಾಚಪ್ಪ ಸಂಭಾಷಣೆ ಬರೆದಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ರಾಘವಿ ತಿಮ್ಮಯ್ಯ ಅಭಿನಯಿಸಿದ್ದಾರೆ. ಯಶಸ್ ಸೂರ್ಯ, ಪಂಕಜ್, ನಿರಂಜನ್, ಸಮರ್ಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಚಂದನವನಕ್ಕೆ ಮತ್ತೊಂದು ಡಾ.ರಾಜ್‍ಕುಮಾರ್ ಕುಟುಂಬದ ಕುಡಿ
ನೂತನ ಚಿತ್ರಕ್ಕೆ ಚಾಲನೆ ನೀಡಿದ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್
ಕನ್ನಡ ಚಿತ್ರರಂಗಕ್ಕೆ ಡಾ.ರಾಜ್‍ಕುಮಾರ್ ಹತ್ತಿರದ ಸಂಬಂಧಿ ಧ್ರುವನ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇವರು ಪಾರ್ವತಮ್ಮರಾಜ್‍ಕುಮಾರ್ ಅವರ ತಮ್ಮನ ಮಗ. ನೀನಾಸಂ ಸಂಸ್ಥೆಯಿಂದ ತರಭೇತಿ ಪಡೆದುಕೊಂಡಿರುವ ಧ್ರುವನ್, ಸುಮಾರು ಐದಾರು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ.

ಪ್ರೊಡಕ್ಷನ್ ನಂ.3 ಇನ್ನೂ ಹೆಸರಿಡದ ಈ ಚಿತ್ರವನ್ನು ಬಿ.ಎಸ್.ಸುಧೀಂದ್ರ ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಆರಂಭ ಫಲಕ ತೋರಿದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಮೆರಾ ಚಾಲನೆ ಮಾಡಿ ತಂಡಕ್ಕೆ ಶುಭ ಕೋರಿದರು.

ಚಿತ್ರದ ಕತೆಯು 2017ರಲ್ಲಿ ಆಂದ್ರಪ್ರದೇಶದಲ್ಲಿ ನಡೆದ ನೈಜಘಟನೆಯಾಗಿದೆ. ಪ್ರೀತಿ ಎನ್ನುವುದು ಅಂತ್ಯಕ್ಕೆ ಹೋದಾಗ ಏನಾಗುತ್ತದೆ ಎಂಬುದು ಒಂದು ಎಳೆಯ ಸಾರಾಂಶವಾಗಿದೆ. ನಕರಾತ್ಮಕ-ಸಂತೋಷ ಎರಡರ ಮಧ್ಯೆ ಸನ್ನಿವೇಶಗಳು ದಾಖಲಿಸುತ್ತಾ ಹೋಗುತ್ತದೆ. ಪ್ರೀತಿಯಲ್ಲಿ ಯಾವುದು ಪ್ರಾಮುಖ್ಯತೆ ಬರುತ್ತದೆ ಎನ್ನುವುದನ್ನು ಹಂತ ಹಂತವಾಗಿ ಅರ್ಥ ಮಾಡಿಸಲಾಗುವುದು.ಇದರಿಂದ ಯಾವುದನ್ನು ಸ್ವೀಕರಿಸಬಹುದು ಎನ್ನುವ ಅಂಶಗಳು ಇರಲಿದೆ.

ರಾಜ್ಯ ಪ್ರಶಸ್ತಿ ವಿಜೇತ, ಬರಹಗಾರ ಹಾಗೂ ಜೋಗಿ ಪ್ರೇಮ್ ಅವರ `ಏಕ್‍ಲವ್‍ಯಾ` ಚಿತ್ರಕ್ಕೆ ಕತೆ ಬರೆದಿರುವ ರಘುಕೋವಿ ಹದಿನೈದು ವರ್ಷಗಳ ಕಾಲ ಸಹಾಯಕ ನಿರ್ದೇಶಕನಾಗಿ ಅನುಭವ ಪಡೆದುಕೊಂಡು ಮೊದಲಬಾರಿ ಆಕ್ಷನ್‍ಕಟ್ ಹೇಳುತ್ತಿದ್ದಾರೆ. ಅನಾಥ, ಪ್ರಕೃತಿ ಪ್ರೇಮಿಯಾಗಿ ಧ್ರುವನ್, ಕಣ್ಸನ್ನೆ ಬೆಡಗಿ ಪ್ರಿಯಾಪ್ರಕಾಶ್ ವಾರಿಯಾರ್ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಇವರೊಂದಿಗೆ ಶಕ್ತಿಶಾಲಿಯಾದ ತಿರುವುಕೊಡುವ ಎಸಿಪಿ ಪಾತ್ರಕ್ಕೆ ಅನುರಾಗ್ ಕಶ್ಯಪ್ ಅಥವಾ ಜೆ.ಡಿ.ಚಕ್ರವರ್ತಿ ನಟಿಸಬಹುದು. ಬಹುಪಾಲು ಚಿತ್ರೀಕರಣ ಕಾಶಿಯಲ್ಲಿ ನಡೆಯಲಿದ್ದು, ಉಳಿದುದನ್ನು ಬೆಂಗಳೂರು, ಜಮ್ಮು ಮತ್ತು ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರಿಸಲಾಗುವುದು. ನಾಲ್ಕು ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ, ಸತ್ಯಹೆಗಡೆ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ ಹಾಗೂ ವಿಕ್ರಂಮೋರ್ ಸಾಹಸ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ

This Article Has 1 Comment
  1. Pingback: sextant definition in dentistry

Leave a Reply

Your email address will not be published. Required fields are marked *

Translate »
error: Content is protected !!