ನಗ್ನ ಚಿತ್ರಗಳನ್ನು ತಯಾರಿ ಮಾಡಿ ಪ್ರಸಾರ ಮಾಡುತ್ತಿದ್ದ ಆರೋಪದ ಮೇಲೆ ಕೊಲ್ಕತ್ತಾದಲ್ಲಿ ಮಾಡೆಲ್ ಹಾಗೂ ಒಬ್ಬ ಪಾಲುದಾರನನ್ನು ಪೊಲೀಸರು ಬಂಧಿಸಿದ್ದಾರೆ.
ನಟಿ, ಮಾಡೆಲ್ ನಂದಿತಾ ದತ್ತಾ, ಪಾಲುದಾರ ಮಾಣಿಕ್ ಘೋಷ್ ಅವರನ್ನು ಕೊಲ್ಕತ್ತ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ನಂದಿತಾ ಹಾಗೂ ಮಾಣಿಕ್ ಕೊಲ್ಕತ್ತದ ಹೋಟೆಲ್ ನಲ್ಲಿ ನಗ್ನ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ ಈ ಕೃತ್ಯದಲ್ಲಿ ಇನ್ನಷ್ಟು ಜನರ ಹೆಸರುಗಳು ಹೊರ ಬೀಳುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಫೊಟೊಗ್ರಾಫರ್ ಆಗಿರುವ ಮಾಣಿಕ್, ಮಾಡೆಲ್ ಆಗಿರುವ ನಂದಿತಾ ಅವರು ಫೇಸ್‌ಬುಕ್ ಮೂಲಕ ಯುವತಿಯರಿಗೆ ಮಾಡೆಲ್, ನಟಿಯರನ್ನಾಗಿ ಮಾಡುವ ಆಸೆ ತೋರಿಸುತ್ತಿದ್ದರು. ಬಳಿಕ ನಗ್ನ ವಿಡಿಯೋಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ವಿಡಿಯೋಗಳನ್ನು ನಿಯೋಫ್ಲಿಕ್ಸ್, ರೆಡ್‌ವ್ಯಾಪ್ ಟು ವೆಬ್‌ಸೈಟ್, ಅಪ್ಲಿಕೇಶನ್‌ಗಳಲ್ಲಿ ಪ್ರದರ್ಶನ ಮಾಡಿ ದೊಡ್ಡ ಮೊತ್ತದ ಹಣ ಸಂಪಾದನೆ ಮಾಡುತ್ತಿದ್ದರು ಎನ್ನಲಾಗಿದೆ. ವಿಡಿಯೋಗಳನ್ನು ವಿದೇಶದಿಂದ ಅಪ್‌ಲೋಡ್ ಮಾಡುತ್ತಿದ್ದ ಮಾಹಿತಿ ಲಭಿಸಿದೆ. ಈ ತಂಡ ನಗ್ನ ವಿಡಿಯೋಗಳನ್ನು ಮಾತ್ರ ಚಿತ್ರೀಕರಿಸಿ ಭಿತ್ತರಿಸುತ್ತಿತ್ತು.
ಕೊಲ್ಕತ್ತದಲ್ಲಿ ಹಲವು ಮಾಡೆಲ್‌ಗಳು ಹಣಕ್ಕಾಗಿ ಅರೆ ಬೆತ್ತಲೆಯಾಗಿ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ನಂದಿತಾ ಹಾಗೂ ಮಾಣಿಕ್ ಘೋಷ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಇಬ್ಬರನ್ನೂ ಪೊಲೀಸರ ವಶಕ್ಕೆ ನೀಡಲಾಗಿದೆ.
Be the first to comment