ಗುರುಮೂರ್ತಿ ಸುನಾಮಿ ನಿರ್ದೇಶನ, ಆಕ್ಷನ್ ಕ್ವೀನ್ ಮಾಲಾಶ್ರೀ ಮುಖ್ಯ ಪಾತ್ರದಲ್ಲಿರುವ ಚಿತ್ರ ‘ಮಾರಕಾಸ್ತ್ರ’ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ.ಇಂದಿನಿಂದಲೇ ಬುಕ್ ಮೈ ಶೋ ನಲ್ಲಿ ಚಿತ್ರದ ಟಿಕೇಟ್ ಬುಕಿಂಗ್ ಕೂಡಾ ಓಪನಾಗಿದೆ ಟಿಕೇಟ್ ಬುಕ್ ಮಾಡಿಕೊಳ್ಳಿ ಎಂದು ನಿರ್ದೇಶಕರು ಹೇಳಿದರು.
ಕಾವೇರಿ ಹೋರಾಟ ಬೆಂಬಲಿಸಿ ಚಿತ್ರ ಈಗ ಅದ್ದೂರಿಯಾಗಿ ಬಿಡುಗಡೆ ಸಜ್ಜಾಗಿದೆ.
ಈ ಹಿಂದೆ ಅಕ್ಟೋಬರ್ 6ರಂದು ಚಿತ್ರವನ್ನು ಬಿಡುಗಡೆ ಮಾಡುವ ಆಶಯ ತಂಡಕ್ಕಿತ್ತು. ಆದರೆ ನಾಡು ನುಡಿ ಹೋರಾಟದಲ್ಲಿ ಕೈ ಜೋಡಿಸಬೇಕು ಎಂಬ ಕಾರಣದಿಂದ ಚಿತ್ರದ ಬಿಡುಗಡೆಯನ್ನು ಚಿತ್ರತಂಡ ಒಂದು ವಾರ ಮುಂದಕ್ಕೆ ಹಾಕಿ ಹೋರಾಟದ ಬೆಂಬಲ ಕ್ಕೆ ಚಿತ್ರ ತಂಡ ನಿಂತ್ತಿತ್ತು.
ಚಿತ್ರದಲ್ಲಿ ಹೊಸ ಪ್ರತಿಭೆ ಆರ್ಯ ಹಾಗೂ ಹರ್ಷಿಕಾ ಪೂಣಚ್ಚ ಅವರ ಪಾತ್ರದ ದೃಶ್ಯಗಳು ರೋಚಕವಾಗಿವೆ ಎಂದು ಚಿತ್ರತಂಡ ಹೇಳಿದೆ. ನೃತ್ಯ ನಿರ್ದೇಶಕ ಧನುಕುಮಾರ್ ಚಿತ್ರದ ಕ್ರಿಯೇಟಿವ್ ಹೆಡ್ ಆಗಿರುವುದು ವಿಶೇಷ ಆಗಿದೆ.
ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಮೈ ನವಿರೇಳಿಸುವ ಸಾಹಸ ದೃಶ್ಯಗಳಿವೆ. ಮಾಲಾಶ್ರೀ ಅವರ ಹೊಡೆದಾಟದ ದೃಶ್ಯಗಳು ಗಮನ ಸೆಳೆಯಲಿದೆ. ಈಗಾಗಲೇ ಚಿತ್ರದ ಹಿಂದಿ ರೈಟ್ಸ್ ಹೆಚ್ಚಿನ ಬೆಲೆಗೆ ಮಾರಾಟ ಆಗಿದೆ.
____

Be the first to comment