ಸುನೀಲ್ ಕುಮಾರ್ ಬಸವಂತಪ್ಪ ಚೊಚ್ಚಲ ನಿರ್ದೇಶನದ ‘ನೀ ಮಾಯೆಯೊಳಗೊ ಮಾಯೆ ನೀನೊಳಗೊ’ ಚಿತ್ರ ನವೆಂಬರ್ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.
ಚೇತನ್ ಗಂದರ್ವ ಹಾಡಿರುವ ‘ಹೇ ಯಾ’, ಸಖತ್ ಸಿನಿಮಾ ಖ್ಯಾತಿಯ ಪಂಚಮ್ ಜೀವ ಹಾಡಿರುವ ‘ತಂದಾರಿ ನಾರೇ’ ಹಾಡುಗಳು ಕೇಳುಗರ ಮನಸೂರೆ ಗೊಂಡಿವೆ. ಈ ಎರಡೂ ಹಾಡುಗಳಿಗೆ ನಿರ್ದೇಶಕ ಸುನೀಲ್ ಕುಮಾರ್ ಬಸವಂತಪ್ಪ ಸಾಹಿತ್ಯ ಬರೆದಿದ್ದಾರೆ.
ಬಿಡುಗಡೆಗೂ ಮುನ್ನವೇ ಮೆಲ್ಬರ್ನ್ ಹಾಗೂ ಬೆಂಗಳೂರಿನಲ್ಲಿ ಪ್ರೀಮಿಯರ್ ಆಗಿರುವ ಈ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಚಿತ್ರತಂಡಕ್ಕೆ ಉತ್ಸಾಹ ತುಂಬಿದೆ.
ಈ ಚಿತ್ರವನ್ನು ಧ್ವನಿ ಸಿನಿ ಕ್ರಿಯೇಷನ್ನಡಿ ದರ್ಶನ್ ರಾಘವಯ್ಯ ನಿರ್ಮಾಣ ಮಾಡಿ, ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಬಾಲರಾಜ್ ವಾಡಿ, ಮನಸ್ ಗೇಬ್ರಿಯಲ್, ರೇವತಿ ಹೊಳ್ಳ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸುಮಂತ್ ಬದ್ರಿ ಛಾಯಾಗ್ರಹಣ, ಯತೀಶ್ ವೈಡಿ ಸಂಕಲನ, ಶ್ರೀಹರಿ ಸಂಗೀತ ಚಿತ್ರಕ್ಕಿದೆ. ಕಥೆ, ಚಿತ್ರಕಥೆ, ಸಾಹಿತ್ಯ ಸಂಭಾಷಣೆ ಬರೆದಿರುವ ನಿರ್ದೇಶಕ ಸುನೀಲ್ ಕುಮಾರ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
___

Be the first to comment