ನ. 11ಕ್ಕೆ ಬರುತ್ತಿದೆ ‘ಯೆಲ್ಲೋ ಗ್ಯಾಂಗ್‌’

ಕ್ರೈಮ್ ಜಗತ್ತಿನ ಕಥೆಯನ್ನು ಹೇಳಹೊರಟಿರುವ ‘ಯೆಲ್ಲೋ ಗ್ಯಾಂಗ್‌’ ಚಿತ್ರ ನ.11ರಂದು ಬೆಳ್ಳಿತೆರೆಯ ಮೇಲೆ ಬರಲಿದೆ.

‘ಯಲ್ಲೋ ಗ್ಯಾಂಗ್ಸ್‌’ ಕ್ರೈಂ ಥ್ರಿಲ್ಲರ್‌ ಜಾನರ್‌ನ ಚಿತ್ರ ಆಗಿದೆ. ಚಿತ್ರತಂಡ ಕೇವಲ 35 ದಿನಗಳಲ್ಲಿ ಶೂಟಿಂಗ್‌ ಮುಗಿಸಿದ್ದು, ಅದ್ಭುತ ಕಥೆಯ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ.

ಡರ್ಟಿ ಮನಿ ಎನ್ನುವುದು ಚಿತ್ರದ ಮುಖ್ಯ ಕಥೆಯಾಗಿ ಸಾಗುತ್ತದೆ. ಗುರುತು ಪರಿಚಯವಿಲ್ಲದವರು ಕಾರಣಾಂತರಗಳಿಂದ ಮುಖಾಮುಖಿಯಾಗುವ ಸನ್ನಿವೇಶ ಎದುರಾಗುತ್ತದೆ. ಅಂತಹ ಅಂಶವನ್ನು ಸಿನಿಮಾದಲ್ಲಿ ಹೇಳಲಾಗುತ್ತಿದೆ.

ಚಿತ್ರದಲ್ಲಿ ದೇವ ದೇವಯ್ಯ, ಅರ್ಚನಾ ಕೊಟ್ಟಿಗೆ, ಸತ್ಯ ಪಿ ಜಿ, ಅರುಣ್‌, ನಾಟ್ಯರಂಗ, ಹರ್ಷ ಮುಂತಾದವರು ನಟಿಸಿದ್ದಾರೆ.

‘ವಿಭಿನ್ನ ಸ್ಟುಡಿಯೋಸ್‌’ ಬ್ಯಾನರ್‌ನಲ್ಲಿ ಮನೋಜ್‌ ಕುಮಾರ್‌ ನಿರ್ಮಿಸುತ್ತಿರುವ “ಯಲ್ಲೋ ಗ್ಯಾಂಗ್ಸ್‌’ ಚಿತ್ರಕ್ಕೆ ರವೀಂದ್ರ ಪರಮೇಶ್ವರಪ್ಪ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!