ನವಂಬರ್‌ನಲ್ಲೇ ‘ನ್ಯೂರಾನ್’ ಬಿಡುಗಡೆ

ಪ್ರೇಂಡ್ಸ್ ಪ್ರೊಡಕ್ಷನ್ ಲಾಂಛನದಲ್ಲಿ ವಿನಯ್‌ಕುಮಾರ್.ವಿ.ಆರ್ ಅವರು ನಿರ್ಮಿಸಿರುವ `ನ್ಯೂರಾನ್` ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ನವಂಬರ್‌ನಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ನೈಜ ಘಟನೆ ಆಧಾರಿತ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ವಿಕಾಸ್ ಪುಷ್ಪಗಿರಿ. ಇದು ಅವರಿಗೆ ಚೊಚ್ಚಲ ನಿರ್ದೇಶನದ ಚಿತ್ರ. ಯುವ ಈ ಚಿತ್ರದ ಮೂಲಕ ನಾಯಕನಟನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಇನ್ನುಳಿದಂತೆ ನೇಹಾ ಪಾಟೀಲ್ ನಾಯಕಿಯಾಗಿ ಕಾಣಿಸಿಕೊಂಡಿದ್ಧಾರೆ. ವೈಷ್ಣವಿ ಮೆನನ್ ಪ್ರಮುಖ ಪಾತ್ರದಲ್ಲಿದ್ದಾರೆ. ಜೈಜಗದೀಶ್, ಶಿಲ್ಪಾ ಶೆಟ್ಟಿ, ವರ್ಷ, ಅರವಿಂದ್ ರಾವ್, ಕಬೀರ್ ಸಿಂಗ್(ಬಾAಬೆ), ರಾಕ್‌ಲೈನ್ ಸುಧಾಕರ್, ಕಾರ್ತಿಕ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಗುರುಕಿರಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಹೈದರಾಬಾದ್‌ನ ಶೋಯಬ್ ಅಹಮದ್ ಛಾಯಾಗ್ರಹಣ, ಶ್ರೀಧರ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಶಿವಕುಮಾರ್ ಅವರ ಕಲಾ ನಿರ್ದೇಶನವಿದೆ. ಡಾ|| ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಡುಗಳನ್ನು ರಚಿಸಿದ್ದಾರೆ. ಶ್ರೀಹರ್ಷ ಸಂಭಾಷಣೆ ಬರೆದಿದ್ದಾರೆ.
ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ `ಕೈಟ್ ಬ್ರದರ್ಸ್` ಚಿತ್ರದ ಲಿರಿಕಲ್ ಸಾಂಗ್

ಭಜರಂಗ ಸಿನೆಮಾ ಲಾಂಛನದಲ್ಲಿ ರಜನಿಕಾಂತ್ ರಾವ್ ದಳ್ವಿ, ಮಂಜುನಾಥ್ ಬಿ.ಎಸ್ ಹಾಗೂ ಮಂಜುನಾಥ್ ಬಗಾಡೆ ಅವರು ನಿರ್ಮಿಸಿರುವ `ಕೈಟ್ ಬ್ರದರ್ಸ್` ಚಿತ್ರದ `ಆ ಅರಸ ಆ ಆನೆ…..` ಎಂಬ ಹಾಡಿನ ಲಿರಿಕಲ್ ಸಾಂಗ್ ರಾಜ್ಯೋತ್ಸವದಂದು ಲಹರಿ ಆಡಿಯೋ ಮೂಲಕ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು, ವಿರೇನ್ ಸಾಗರ್ ಬಗಾಡೆ ಬರೆದಿರುವ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಧಿಕ ಸಂಖ್ಯೆಯಲ್ಲಿ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಅನನ್ಯ ಭಟ್ ಹಾಗೂ ವಿರೇನ್ ಸಾಗರ್ ಬಗಾಡೆ ಈ ಹಾಡನ್ನು ಹಾಡಿದ್ದಾರೆ
ವಿರೇನ್ ಸಾಗರ್ ಬಗಾಡೆ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಹಳ್ಳಿಗಾಡಿನ ಬದುಕು ಮತ್ತು ಅಲ್ಲಿಯ ಮಕ್ಕಳ ಬಾಲ್ಯದ ಸಹಜ, ಸರಳ ನೈಜ ರೀತಿಯ ಚಿತ್ರಣ ಈ ಚಿತ್ರದ ಮುಖ್ಯ ಆಕರ್ಷಣೆ. ಶಿಕ್ಷಣ ಹಕ್ಕು, ಘನವಾದ ಸ್ನೇಹ ಮತ್ತು ಮಕ್ಕಳ ಸಾಹಸಗಾಥೆಯ ಕಥೆಯನ್ನು ಮನೋರಂಜನಾತ್ಮಕ ಹಾಗೂ ರೋಚಕರೀತಿಯಲ್ಲಿ ಹೇಳಲಾಗಿದೆ ಎನ್ನುತ್ತಾರೆ ನಿರ್ದೇಶಕ ವಿರೇನ್ ಸಾಗರ್ ಬಗಾಡೆ.

ಅನೀಶ್ ಚೆರಿಯನ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ವಿಜಯ್ ಭರಮಸಾಗರ, ಸುನಿ ಹಾಗೂ ವಿರೇನ್ ಸಾಗರ್ ಬಗಾಡೆ ರಚಿಸಿದ್ದಾರೆ. ಅಶೋಕ್ ಕಶ್ಯಪ್ ಛಾಯಾಗ್ರಹಣ, ಸಂತೋಷ್ ರಾಧಕೃಷ್ಣನ್ ಸಂಕಲನ ಹಾಗೂ ವಿನೋದ್ ಬಗಾಡೆ ಅವರ ನಿರ್ಮಾಣ ಸಮನ್ವಯ ಈ ಚಿತ್ರಕ್ಕಿದೆ. ವಿನೋದ್ ಬಗಾಡೆ, ಅನಂತ್ ದೇಶಪಾಂಡೆ, ಸಮರ್ಥ್ ಆಶಿ, ಪ್ರಣೀಲ್ ನಾಡಿಗೇರ, ಶ್ರೇಯ ಹರಿಹರ, ಅಭೀಷೇಕ್ ಮದರ್ಡಿ್ದ, ಪ್ರಭು ಹಂಚಿನಾಳ, ಅನಸೂಯ ಹಂಚಿನಾಳ, ರಾಜೀವ್ ಸಿಂಗ್ ಹಲವಾಯಿ, ಮುಕುಂದ ಮೈಗೂರು, ಕಿರಣ್ ಬಗಾಡೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

@Bcinemas.in

Be the first to comment

Leave a Reply

Your email address will not be published. Required fields are marked *

Translate »
error: Content is protected !!