ಜುಲೈ 19ರಂದು ನಾಟ್ ಔಟ್ ರಿಲೀಸ್

ಅಂಬರೀಷ ನಿರ್ದೇಶನದ ‘ನಾಟ್ ಔಟ್’ ಸಿನಿಮಾ ಜುಲೈ 19ರಂದು ರಿಲೀಸ್ ಆಗಲಿದೆ.

ಅಜಯ ಪೃಥ್ವಿ, ರಚನಾ ಇಂದರ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ‘ನಾಟ್​ ಔಟ್​’ ಸಿನಿಮಾದಲ್ಲಿ ನಟಿಸಿದ್ದಾರೆ.  ಚಿತ್ರದಲ್ಲಿ ಅಜಯ್ ಪೃಥ್ವಿ ಆಂಬ್ಯುಲೆನ್ಸ್ ಡ್ರೈವರ್ ಆಗಿ ನಟಿಸಿದ್ದಾರೆ. ರಚನಾ ಇಂದರ್ ನರ್ಸ್ ಪಾತ್ರ ನಿರ್ವಹಿಸಿದ್ದಾರೆ. ಮನರಂಜನಾ ಕಾಮಿಡಿಯಾಗಿರುವ ಚಿತ್ರದಲ್ಲಿ ರವಿಶಂಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವು ‘ಅದೃಶ್ಯ ಅಂಪೈರ್‌ನಿಂದ ತೀರ್ಪು’ ಎಂಬ ಅಡಿಬರಹವನ್ನು ಹೊಂದಿದೆ. ಕರ್ನಾಟಕ, ತಮಿಳುನಾಡು ಮತ್ತು ಆಂಧ್ರದ ಗಡಿಯಲ್ಲಿರುವ ಹಳ್ಳಿಯಲ್ಲಿ ಜನಪ್ರಿಯವಾಗಿರುವ ಹುಲಿ-ಕುರಿ ಆಟವನ್ನು ಆಧರಿಸಿದ ಕಥೆ ಸಿನಿಮಾದಲ್ಲಿದೆ’ ಎಂದು ನಿರ್ದೇಶಕರು ತಮ್ಮ ಚಿತ್ರದ ಬಗ್ಗೆ ವಿವರಿಸಿದ್ದಾರೆ.

ರಾಷ್ಟ್ರಕೂಟ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ವಿ ರವಿಕುಮಾರ್ ಮತ್ತು ಶಂಶುದ್ದೀನ್ ನಿರ್ಮಿಸಿರುವ ನಾಟ್ ಔಟ್ ಚಿತ್ರಕ್ಕೆ ಜೂಡಾ ಸ್ಯಾಂಡಿ ಅವರ ಸಂಗೀತ ಮತ್ತು ಹಾಲೇಶ್ ಅವರ ಛಾಯಾಗ್ರಹಣವಿದೆ. ತಾರಾಗಣದಲ್ಲಿ ಸಲ್ಮಾನ್, ಗೋವಿಂದೇಗೌಡ ಮತ್ತು ಪ್ರಶಾಂತ್ ಸಿದ್ದಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಜುಲೈ 4 ರಂದು ಟ್ರೈಲರ್ ಬಿಡುಗಡೆಯಾಗಲಿದೆ. ಜೂನ್ 27 ರಂದು ನಾಟ್ ಔಟ್ ಸಿನಿಮಾ ಹಾಡು ರಿಲೀಸ್ ಮಾಡಲು ನಿರ್ದೇಶಕರು ಯೋಜಿಸಿದ್ದಾರೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!