ಹಾಟ್ ಅವತಾರದಲ್ಲಿ ‘‌KD’ ನೋರಾ

ಧ್ರುವ ಸರ್ಜಾ ಮತ್ತು ರೀಷ್ಮಾ ನಾಣಯ್ಯ ಅಭಿನಯದ ಸಿನಿಮಾ ‘ಕೆಡಿ’ಯಲ್ಲಿ  ಹಾಟ್ ಅವತಾರದಲ್ಲಿ ನೋರಾ ಸ್ಟೆಪ್ ಹಾಕಿದ್ದಾರೆ.

ಕೆಡಿ’ಯ ಹೊಸ ಹಾಡು ‘ಸೆರಗ ಸರ್ಸೆ’ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಲಿರಿಕಲ್ ವಿಡಿಯೋ ರೂಪದಲ್ಲಿ ಬಿಡುಗಡೆ ಆಗಿದೆ. ವಿಡಿಯೋದಲ್ಲಿ  ಸ್ಕ್ರೀನ್ಶಾಟ್ ಜೊತೆಗೆ ನೋರಾ ಮತ್ತು ಸಂಜಯ್ ದತ್ ಅವರ ಸ್ಟೆಪ್ಪ್ ಹೈಲೈಟ್ ಆಗಿದೆ.

ಕೆಲ ದಿನಗಳ ಹಿಂದೆ 26 ಸೆಕೆಂಡುಗಳ ಪ್ರೋಮೊವನ್ನು  ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.  ನೋರಾ ಹಾಕಿರುವ ಸ್ಟೆಪ್ಪು ನೋಡಿ ಫ್ಯಾನ್ಸ್   ಹಾಡಿನ ಬಿಡುಗಡೆಯನ್ನು ಕಾಯುತ್ತಿದ್ದರು. ಪ್ರೇಮ್ ನಿರ್ದೇಶನದ ಸಿನಿಮಾ ಎಂದರೆ ಹಾಡುಗಳು ಹಿಟ್ ಆಗುತ್ತವೆ ಎಂಬ ಭರವಸೆ ಈ ಹಾಡಿನೊಂದಿಗೆ ಮತ್ತೊಮ್ಮೆ ದೃಢಪಟ್ಟಿದೆ.

ಹಾಡಿನ ಸಾಹಿತ್ಯವನ್ನು ಪ್ರೇಮ್ ಅವರು ಬರೆಯಿದ್ದು, ಡಬಲ್ ಮೀನಿಂಗ್ ದ್ವಂದ್ವಾರ್ಥಗಳನ್ನು ಒಳಗೊಂಡಿದೆ. ಎಣ್ಣೆ ಅಂಗಡಿ ಯುವತಿ ಎಣ್ಣೆಯ ಬಗ್ಗೆ ಹೇಳುವ ಸಾಲುಗಳು ಹಾಡಿನ ವಿಶಿಷ್ಟ ಆಕರ್ಷಣೆಯಾಗಿ ಪರಿಣಮಿಸಿವೆ. ಸಂಗೀತ ಸಂಯೋಜನೆ ಅರ್ಜುನ್ ಜನ್ಯ ಅವರು ಮಾಡಿದ್ದಾರೆ. ಸಂಜಯ್ ದತ್ ಅವರಿಗೆ “ಖಳನಾಯಕ” ಎಂಬ ಕ್ಯಾಚಿ ಲೈನ್ ಸೇರಿಸಲಾಗಿದೆ.

‘ಕೆಡಿ’ಯಲ್ಲಿ  ಧ್ರುವ ಸರ್ಜಾ ಮತ್ತು ರೀಷ್ಮಾ ನಾಣಯ್ಯ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸಂಜಯ್ ದತ್, ವಿ. ರವಿಚಂದ್ರನ್, ರಮೇಶ್ ಅರವಿಂದ್, ಜಿಸು ಸೇನ್ ಗುಪ್ತ  ಪ್ರಮುಖ ಪಾತ್ರಗಳಲ್ಲಿ ಇದ್ದಾರೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!