Nodada putagalu: ಈ ವಾರ “ನೋಡದ ಪುಟಗಳು” ತೆರೆಗೆ

ಯುವ ಪ್ರತಿಭೆಗಳ ನಿರ್ಮಾಣದ “ನೋಡದ ಪುಟಗಳು” ಚಿತ್ರ ಈ ವಾರ ತೆರೆಗೆ ಬರಲಿದೆ.

ಏಪ್ರಿಲ್‌ 21ರಂದು ಬಿಡುಗಡೆ ಆಗುತ್ತಿರುವ “ನೋಡದ ಪುಟಗಳು” ಚಿತ್ರಕ್ಕೆ ‘ಜೀವನಪೂರ್ತಿ ತಿರುವುಗಳು ಬರುತ್ತದೆ. ನಿನ್ನ ತಿರುವು ಬರುವ ತನಕ ಕಾಯಬೇಕು’ ಎಂದು ಅಡಿಬರಹ ನೀಡಲಾಗಿದೆ. ಟ್ರೇಲರ್‌ಗೆ ಸುಚೇಂದ್ರಪ್ರಸಾದ್ ಧ್ವನಿ ನೀಡಿರುವುದು ಚಿತ್ರದ ತೂಕ ಹೆಚ್ಚಿಸಿದೆ.

ಎಸ್.ವಸಂತ್‌ಕುಮಾರ್ ಸಿನಿಮಾಕ್ಕೆ ರಚನೆ,ನಿರ್ದೇಶನ, ಸ್ವೀಟ್ ಅಂಡ್ ಸಾಲ್ಟ್ ಮೂವೀಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಮೂಲತ: ಟೆಕ್ಕಿಯಾಗಿರುವ ಇವರು ನಿರ್ದೇಶನದ ಕೋರ್ಸ್‌ನ್ನು ಕಲಿತು, ಕೂಡ್ಲುರಾಮಕೃಷ್ಣ, ಯೋಗಿ ಅಭಿನಯದ ‘ಯಕ್ಷ’ ಚಿತ್ರಕ್ಕೆ ಸಹಾಯಕನಾಗಿ ಕೆಲಸ ಮಾಡಿ ಅನುಭವ ಪಡೆದುಕೊಂಡಿದ್ದಾರೆ. ಕಿರುಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.

ನಾಯಕ ಪ್ರೀತಂಮಕ್ಕಿಹಳ್ಳಿ, ನಾಯಕಿ ಕಾವ್ಯರಮೇಶ್. ಇವರಿಗೆ ಕಥೆ ಹೇಳದೆ, ಕ್ಲೈಮಾಕ್ಸ್ ತಿಳಿಸದೆ ಕೆಲಸ ತೆಗೆದುಕೊಂಡಿರುವುದು ಚಿತ್ರದ ವಿಶೇಷ ಆಗಿದೆ. ಚಿತ್ರದಲ್ಲಿ ವಾಸು, ವಿಲಾಸ್‌ಕುಲಕರ್ಣಿ, ಗೌತಂ.ಜಿ, ಅಶೋಕ್‌ರಾವ್, ಪಿ.ಬಿ.ರಾಜುನಾಯಕ, ಶಾಂತಿ.ಎಸ್.ಗೌಡ, ಸೌಭಾಗ್ಯ, ಮೋಹನ್‌ಕುಮಾರ್, ರಘುಶ್ರೀವತ್ಸ, ಅಮೃತೇಶ್, ರೇಣುಕಗೌಡ ಮುಂತಾದವರು ನಟಿಸಿದ್ದಾರೆ.

ಪ್ರಶಾಂತಗುಣಕಿ-ಸಿ.ರಘುನಾಥ್ ಸಾಹಿತ್ಯ ಇರುವ ಹಾಡುಗಳಿಗೆ ವಿಘ್ನೇಶ್‌ಮೆನನ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಕುಮಾರ್.ಎನ್, ಸಂಕಲನ ರಘುನಾಥ್.ಎಂ ಅವರದ್ದು. ಹೆಸರಘಟ್ಟ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!