Nodada Putagalu Movie Review : ಕಾವ್ಯಾತ್ಮಕ ನೋಡದ ಪುಟಗಳು

ಚಿತ್ರ : ‘ನೋಡದ ಪುಟಗಳು’
ಕಥೆ-ಚಿತ್ರಕಥೆ -ನಿರ್ದೇಶನ : ಎಸ್​. ವಸಂತ್​ ಕುಮಾರ್​
ನಿರ್ಮಾಣ : ಸ್ವೀಟ್ ಅಂಡ್ ಸಾಲ್ಟ್ ಮೂವೀಸ್​​
ಸಂಗೀತ : ವಿಘ್ನೇಶ್​ ಮೆನನ್​
ಛಾಯಾಗ್ರಹಣ : ಕುಮಾರ್​
ನಾಯಕ : ಪ್ರೀತಂ ಮಕ್ಕಿಹಳ್ಳಿ
ನಾಯಕಿ : ಕಾವ್ಯಾ ರಮೇಶ್
ತಾರಾಗಣದಲ್ಲಿ : ವಿಲಾಸ್‌ ಕುಲಕರ್ಣಿ, ಅಶೋಕ್‌ ರಾವ್, ಪಿ.ಬಿ. ರಾಜುನಾಯಕ ಮುಂತಾದವರು..

ರೇಟಿಂಗ್ : 3/5

ವರ್ಷ ವರ್ಷ ನಿರ್ಧಿಷ್ಟ ಅವಧಿಯಲ್ಲಿ ಒಂದಷ್ಟು ಘಟನೆಗಳು ನಡೆಯುತ್ತವೆ. ಅದರ ಆಧಾರದ ಮೇಲೆ ’ನೋಡದ ಪುಟಗಳು’ ಚಿತ್ರವನ್ನು ಮಾಡಲಾಗಿದೆ. ಕಥೆಯಲ್ಲಿ ಬಾಲ್ಯ, ಶಾಲೆ, ಕಾಲೇಜು ಹಾಗೂ ಇಂಜಿನಿಯರಿಂಗ್‌ದಲ್ಲಿ ಓದುತ್ತಿರುವಾಗ ಅಲ್ಲಿ ನಡೆಯುವ ತುಂಟಾಟ, ಜಗಳ, ಕೋಪ ಇತರೆಗಳನ್ನು ನವಿರಾಗಿ ತೋರಿಸಿದ್ದಾರೆ. ಅದಕ್ಕೆ ಜೀವನಪೂರ್ತಿ ತಿರುವುಗಳು ಬರುತ್ತದೆ. ನಿನ್ನ ತಿರುವು ಬರುವ ತನಕ ಕಾಯಬೇಕು ಎಂದು ಅಡಿಬರಹದಲ್ಲಿ ಹೇಳಿಕೊಂಡಿರುವುದು ಸರಿ ಅನಿಸುತ್ತದೆ. ಶಾಲೆಯಲ್ಲಿ ಫಸ್ಟ್ ಲವ್ ಆಗಿದ್ದು, ಮುಂದೆ ಅವರುಗಳು ಕೆಲಸಕ್ಕೆ ಸೇರಿಕೊಂಡು, ವರ್ಷಗಳ ನಂತರ ಭೇಟಿಯಾದಾಗ ಒಬ್ಬರಿಗೊಬ್ಬರು ಅರಿತುಕೊಳ್ಳುತ್ತಾರೆ. ಮತ್ತೆ ಗೆಳತನದಲ್ಲಿ ಸಾಗಿ ನಂತರ ಪ್ರೀತಿ ಬೆಸೆದಾಗ ಅಲ್ಲಿ ನಡೆಯ ಬಹುದಾದ ಅಂಶಗಳು ಏನು? ಇದರಿಂದ ಇಬ್ಬರ ಜೀವನದಲ್ಲಿ ಯಾವ ರೀತಿ ಗೊಂದಲಗಳು ಹುಟ್ಟಿಕೊಳ್ಳುತ್ತದೆ. ಅದರಿಂದ ಪರಿಹಾರ ಸಿಕ್ಕಿತೆ? ಎನ್ನುವಂತ ದೃಶ್ಯಗಳು ನೋಡುಗರನ್ನು ಕುತೂಹಲಕ್ಕೆ ಕರೆದುಕೊಂಡು ಹೋಗುತ್ತದೆ. ಇದೆಲ್ಲಾದಕ್ಕೂ ಉತ್ತರ ಚಿತ್ರಮಂದಿರದಲ್ಲಿ ಸಿಗುತ್ತದೆ.

ನವ ಪ್ರತಿಭೆ ಎಸ್.ವಸಂತ್‌ಕುಮಾರ್ ಮೂಲತ: ಟೆಕ್ಕಿಯಾಗಿದ್ದರೂ ಪ್ರವೃತ್ತಿಯಲ್ಲಿ ಸಿನಿಮಾಕ್ಕೆ ರಚನೆ,ನಿರ್ದೇಶನ ಹಾಗೂ ಸ್ವೀಟ್ ಅಂಡ್ ಸಾಲ್ಟ್ ಮೂವೀಸ್ ಮುಖಾಂತರ ಬಂಡವಾಳ ಹೂಡಿದ್ದಾರೆ. ತಾವು ತಮ್ಮ ಬದುಕಿನಲ್ಲಿ ನೋಡಿದಂತ ಒಂದಷ್ಟು ನೆನಪುಗಳನ್ನು ತೆರೆ ಮೇಲೆ ತಂದಿದ್ದಾರೆ. ಮೊದಲ ಪ್ರಯತ್ನದಲ್ಲೆ ಎಲ್ಲರೂ ಇಷ್ಟಪಡುವಂತಹ ಸಿನಿಮಾ ನೀಡಿದ್ದಾರೆ. ಎಲ್ಲರ ಬದುಕಿನಲ್ಲಿ ಕೆಟ್ಟ ಸಮಯ ಬಂದೇ ಬರುತ್ತೆ. ಅದು ನಮ್ಮನ್ನು ಹತೋಟಿಯಲ್ಲಿಡುತ್ತದೆ. ಇಲ್ಲದೆ ಹೋದಲ್ಲಿ ನಾವು ಹತೋಟಿಯಲ್ಲಿಟ್ಟು ಕೊಳ್ಳಬೇಕು. ತಾಳ್ಮೆವೊಂದು ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಒದಗಿ ಬರುವುದಿಲ್ಲವೆಂದು ಸೂಕ್ಷವಾಗಿ ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ.

ಆದಿತ್ಯನಾಗಿ ಪ್ರೀತಂಮಕ್ಕಿಹಳ್ಳಿ ನಾಯಕ. ಹರಿಣಿಯಾಗಿ ಕಾವ್ಯರಮೇಶ್ ನಾಯಕಿ. ಇಬ್ಬರೂ ನಟನೆಯಲ್ಲಿ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ವಾಸು, ವಿಲಾಸ್‌ಕುಲಕರ್ಣಿ, ಗೌತಂ.ಜಿ, ಅಶೋಕ್‌ರಾವ್, ಪಿ.ಬಿ.ರಾಜುನಾಯಕ, ಶಾಂತಿ.ಎಸ್.ಗೌಡ, ಸೌಭಾಗ್ಯ, ಮೋಹನ್‌ಕುಮಾರ್, ರಘುಶ್ರೀವತ್ಸ, ಅಮೃತೇಶ್, ರೇಣುಕಗೌಡ ಮುಂತಾದವರು ಕಡಿಮೆ ಸಮಯದಲ್ಲಿ ಬಂದು ಹೋಗುತ್ತಾರೆ. ವಿಘ್ನೇಶ್‌ಮೆನನ್ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ಕುಮಾರ್ ಕ್ಯಾಮಾರ ಕೆಲಸಕ್ಕೆ ರಘುನಾಥ್ ಸಂಕಲನ ಪೂರಕವಾಗಿದೆ. ಹೊಸತನವನ್ನು ಇಷ್ಟಪಡುವವರಿಗೆ ಇದು ಪಕ್ಕಾ ಪೈಸಾ ವಸೂಲ್ ಚಿತ್ರ ಎನ್ನಬಹುದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!