ದಾಖಲೆ ಬರೆದ ‘ನೋ ವೇ ಹೋಂ’ ಟ್ರೈಲರ್

ಸ್ಪೈಡರ್ ಮ್ಯಾನ್ ಸರಣಿಯ ನೂತನ ಸಿನಿಮಾ ‘ನೋ ವೇ ಹೋಂ’ ಟ್ರೈಲರ್ ಬಿಡುಗಡೆಗೊಂಡಿದ್ದು, ಒಂದೇ ದಿನದಲ್ಲಿ ಅತೀ ಹೆಚ್ಚು ವೀಕ್ಷಣೆ ಮಾಡಿದ ವಿಶ್ವದಾಖಲೆಗೆ ಈ ಟ್ರೇಲರ್ ಪಾತ್ರವಾಗಿದೆ.

ಸ್ಪೈಡರ್ ಮ್ಯಾನ್: ನೋ ವೇ ಹೋಂ ಟ್ರೈಲರ್ ಅನ್ನು 24 ಗಂಟೆಗಳ ಅವಧಿಯಲ್ಲಿ 35.5 ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ. ಈ ಹಿಂದೆ ಈ ದಾಖಲೆ ಅವೆಂಜರ್ಸ್ ಸಿನಿಮಾದ ಹೆಸರಿನಲ್ಲಿತ್ತು. ಅವೆಂಜರ್ಸ್ ಸಿನಿಮಾದ ಟ್ರೈಲರ್ ನ್ನು 24 ಗಂಟೆಗಳ ಅವಧಿಯಲ್ಲಿ 28.9 ಕೋಟಿ ಜನರು ವೀಕ್ಷಣೆ ಮಾಡಿದ್ದರು.

ಸ್ಪೈಡರ್ ಮ್ಯಾನ್: ನೋ ವೇ ಹೋಂ ಟ್ರೈಲರ್ ವೀಕ್ಷಣೆಯ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಸ್ಪೈಡರ್ ಮ್ಯಾನ್ ಪಾತ್ರದಲ್ಲಿ ಖ್ಯಾತ ನಟ ಟಾಂ ಹಾಲೆಂಡ್ ನಟಿಸಿದ್ದಾರೆ. ಚಿತ್ರದ ಹೊಸ ಟ್ರೇಲರ್ ನಲ್ಲಿ ಈ ಹಿಂದಿನ ಸ್ಪೈಡರ್ ಮ್ಯಾನ್ ಸಿನಿಮಾಗಳ ವಿಲನ್ ಗಳೂ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಟ್ರೈಲರ್ ಅಭಿಮಾನಿಗಳ ಕುತೂಹಲ ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ.

ಮಾರ್ವೆಲ್ ಸ್ಟುಡಿಯೋ ನಿರ್ಮಾಣದ ಈ ಚಿತ್ರ ಡಿಸೆಂಬರ್ 17ರಂದು ತೆರೆಗೆ ಅಪ್ಪಳಿಸಲಿದೆ.

______________

Be the first to comment

Leave a Reply

Your email address will not be published. Required fields are marked *

Translate »
error: Content is protected !!