ಕ್ರಿಕೆಟರ್ ಶುಭ್ ಮನ್ ಗಿಲ್ ಜೊತೆ ಮದುವೆ ಇಲ್ಲ ಎಂದು ನಟಿ ರಿಧಿಮಾ ಪಂಡಿತ್ ಸ್ಪಷ್ಟನೆ ನೀಡಿದ್ದಾರೆ.
2024ರ ಡಿಸೆಂಬರ್ನಲ್ಲಿ ಶುಭ್ ಮನ್ ಗಿಲ್, ರಿಧಿಮಾ ಪಂಡಿತ್ ಮದುವೆ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಇದನ್ನು ರಿಧಿಮಾ ಸುಳ್ಳು ಎಂದಿದ್ದಾರೆ.
”ಮುಂಜಾನೆ ನನಗೆ ಪತ್ರಕರ್ತರಿಂದ ಹಲವು ಫೋನ್ಕಾಲ್ಗಳು ಬಂದವು. ನನ್ನ ಮದುವೆ ಬಗ್ಗೆ ಪ್ರಶ್ನೆ ಕೇಳಲಾಯಿತು. ಒಂದೊಮ್ಮೆ ನನ್ನ ಜೀವನದಲ್ಲಿ ಏನಾದರೂ ಮುಖ್ಯವಾದುದ್ದು ಘಟಿಸುತ್ತಿದೆ ಎಂದಾದರೆ ನಾನೇ ಬಂದು ಘೋಷಣೆ ಮಾಡುತ್ತೇನೆ. ಈಗ ಹರಿದಾಡುತ್ತಿರುವ ಸುದ್ದಿಯಲ್ಲಿ ಯಾವುದೇ ನಿಜವಿಲ್ಲ’ ಎಂದಿದ್ದಾರೆ ರಿಧಿಮಾ.
ರಿಧಿಮಾ ಪಂಡಿತ್ ಅವರ ಸ್ಪಷ್ಟನೆಯಿಂದ ಶುಭ್ಮನ್ ಗಿಲ್ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡಲ್ಕೂರ್ ಜೊತೆ ಶುಭ್ಮನ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಒಂದೇ ಹೋಟೆಲ್ನಲ್ಲಿ ಇವರು ಕೆಲವು ಬಾರಿ ಕಾಣಿಸಿಕೊಂಡಿದ್ದು ಅವರು ಸಾಕಷ್ಟು ಚರ್ಚೆ ಆಗಿದ್ದರು. ರಿಧಿಮಾ ಜೊತೆಗಿನ ಮದುವೆ ವಿಚಾರದ ಬಳಿಕ ಶುಭ್ಮನ್ ಹಾಗೂ ಸಾರಾ ಅವರದ್ದು ಬ್ರೇಕಪ್ ಆಯಿತೇ ಎನ್ನುವ ಪ್ರಶ್ನೆ ಮೂಡಿತ್ತು.
2016ರಲ್ಲಿ ಪ್ರಸಾರ ಕಂಡ ಬಹು ಹಮಾರಿ ರಜ್ನಿ ಕಾಂತ್ ಧಾರವಾಹಿ ಮೂಲಕ ರಿಧಿಮಾ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದರು. ಆ ಬಳಿಕ ಅವರು ಹಲವು ಹಿಂದಿ ಧಾರಾವಾಹಿಯಲ್ಲಿ ನಟಿಸಿದ್ದಾರೆ.
Be the first to comment