ಚಂದನ್ ಶೆಟ್ಟಿ

ಮದುವೆ ಬಗ್ಗೆ ಮೌನ ಮುರಿದ ಚಂದನ್ ಶೆಟ್ಟಿ

ನಟಿ ಸಂಜನಾ ಆನಂದ್ ಅವರ ಜೊತೆ ಎರಡನೇ ಮದುವೆಗೆ ಸಿದ್ದವಾಗಿದ್ದಾರೆ ಎಂಬ ಸುದ್ದಿ ಬಗ್ಗೆ ಚಂದನ್ ಶೆಟ್ಟಿ ಮೌನ ಮುರಿದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆಯಾದ ಕೆಲವೇ ವರ್ಷಕ್ಕೆ  ದೂರವಾಗಿದ್ದಾರೆ. ಚಂದನ್ ಶೆಟ್ಟಿ, ಸಲಗ ಸುಂದರಿ ಸಂಜನಾ ಆನಂದ್ ಅವರ ಜೊತೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದನ್ನೇ ಸತ್ಯ ಎಂದುಕೊಂಡವರು ಸಂಜನಾ ಆನಂದ್ ಮತ್ತು ಚಂದನ್ ಶೆಟ್ಟಿಗೆ ಶುಭಾಶಯಗಳನ್ನು ಹೇಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಚಂದನ್  ಶೆಟ್ಟಿ, ನನ್ನ ಮತ್ತು ಸಂಜನಾ ಮದುವೆ ಕುರಿತು ಹರಡಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದಿದ್ದಾರೆ.

”ಇದೆಲ್ಲವೂ ಶುದ್ಧ ಸುಳ್ಳು. ದಯವಿಟ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ” ಎಂದು ಚಂದನ್ ಶೆಟ್ಟಿ ಮನವಿ  ಮಾಡಿಕೊಂಡಿದ್ದಾರೆ. ಟ್ರೆಂಡಿಂಗ್ ಹೆಸರಿನ ಖಾತೆಯೊಂದರಲ್ಲಿ ಸಂಜನಾ ಆನಂದ್ ಮತ್ತು ಚಂದನ್ ಶೆಟ್ಟಿ ಮದುವೆಯ ಕುರಿತು ಸುದ್ದಿಯನ್ನು ಹಂಚಿಕೊಳ್ಳಲಾಗಿದೆ. ಬಲ್ಲ ಮೂಲಗಳ ಪ್ರಕಾರ ಇವರಿಬ್ಬರ ಮದುವೆ ಸದ್ಯದಲ್ಲಿಯೇ ಅದ್ದೂರಿಯಾಗಿ ನಡೆಯಲಿದೆ ಎಂದು ಫೋಸ್ಟ್‌ ನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಂಜನಾ, ನನ್ನ ಮತ್ತು ಚಂದನ್ ಶೆಟ್ಟಿಯ ಮದುವೆ ಕುರಿತು ಹರಡಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದಿದ್ದಾರೆ.

ಚಂದನ್ ಹಾಗೂ ಸಂಜನಾ ಇಬ್ಬರು ಮದುವೆ ರೂಮರ್ಸ್ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!