ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮದುವೆ ಕುರಿತಾದ ಸುದ್ದಿ ಬಗ್ಗೆ ಮೌನ ಮುರಿದಿರುವ ಆಲಿಯಾ ಭಟ್ ಸದ್ಯ ಮದುವೆ ಇಲ್ಲ ಎಂದು ಹೇಳಿದ್ದಾರೆ.
‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದ ಯಶಸ್ಸಿನ ನಡುವೆ ಆಲಿಯಾ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಮದುವೆ ಸದ್ಯಕಿಲ್ಲ ಎಂದು ಹೇಳಿದ್ದಾರೆ.
ರಣಬೀರ್, ಆಲಿಯಾ ನಡುವಣ ಲವ್ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ರಣಬೀರ್ ಹಾಗೂ ಆಲಿಯಾ ಕುಟುಂಬದವರು ಕೂಡ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದೆ ಎನ್ನುವ ಗಾಸಿಪ್‌ಗಳು ಹರಡುತ್ತಿರುವ ನಡುವೆ ಅಲಿಯ ಸ್ಪಷ್ಟನೆ ನೀಡಿದ್ದಾರೆ.
“ಬಾಲಿವುಡ್‌ನಲ್ಲಿ ತುಂಬಾ ಜನ ಮದುವೆ ಆಗುತ್ತಿದ್ದಾರೆ. ಹಾಗಾಗಿ ನಮ್ಮ ಬಗ್ಗೆಯೂ ಗಾಳಿ ಸುದ್ದಿ ಹರಡಿರಬಹುದು. ಸದ್ಯಕ್ಕೆ ಮದುವೆ ಇಲ್ಲ, ನಮಗೆ ಕಂಪರ್ಟ್ ಎನಿಸುವಂತಹ ಸಮಯ ಬಂದಾಗ ಮದುವೆ ಆಗುತ್ತೇವೆ” ಎಂದಿದ್ದಾರೆ.
“ನಾನು ಕಂಡು ಆಕರ್ಷಕ ವ್ಯಕ್ತಿಗಳಲ್ಲಿ ರಣಬೀರ್ ಕಪೂರ್ ಒಬ್ಬರು. ಅವರ ಮೇಲೆ ನನಗೆ ತುಂಬ ಪ್ರೀತಿ-ಗೌರವ ಇದೆ” ಎಂದು ಆಲಿಯಾ ಹೇಳಿದ್ದಾರೆ.
ಆಲಿಯಾ ಭಟ್ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿ ನಟಿಸಿದ್ದು ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ.
ಮುಂಬೈನ ಕಾಮಾಟಿಪುರದ ವೇಶ್ಯೆಯರು ಹಾಗೂ ಅವರ ಮಕ್ಕಳ ಹಕ್ಕುಗಳಿಗಾಗಿ ಹೋರಾಡುವ ಗಂಗೂಬಾಯಿಯ ಜೀವನವನ್ನು ಆಧರಿಸಿ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರವನ್ನು ತಯಾರಿಸಲಾಗಿದೆ.
ಚಿತ್ರದಲ್ಲಿ ಸೀಮಾ ಫಹ್ವಾ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅತಿಥಿ ಪಾತ್ರದಲ್ಲಿ ನಟ ಅಜಯ್ ದೇವಗನ್, ಹುಮಾ ಖುರೇಷಿ ಕಾಣಿಸಿಕೊಂಡಿದ್ದಾರೆ.
ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದಲ್ಲೂ ಆಲಿಯಾ ನಟಿಸಿದ್ದಾರೆ. ಈ ಚಿತ್ರ ಶೀಘ್ರ ಬಿಡುಗಡೆ ಆಗಲಿದೆ.
___

Be the first to comment