ಶಾರುಖ್ ಜೊತೆ ಸಿನಿಮಾ ಇಲ್ಲ ಎಂದ ರಿಷಬ್

ಶಾರುಖ್ ಖಾನ್ ಜೊತೆ ಸಿನಿಮಾ ಮಾಡುತ್ತಿದ್ದೇನೆ ಅನ್ನುವುದು ಶುದ್ಧ ಸುಳ್ಳು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

‘ಇಂತಹ ಸುಳ್ಳುಗಳನ್ನು ಯಾರು ಹಬ್ಬಿಸುತ್ತಾರೋ ಗೊತ್ತಿಲ್ಲ. ಹೊಂಬಾಳೆ ಫಿಲ್ಮ್ಸ್ ನವರು ಶಾರುಖ್ ಖಾನ್ ಗೆ ಸಿನಿಮಾ ಮಾಡುತ್ತಿದ್ದರೆ ಅವರೇ ಹೇಳುತ್ತಾರೆ. ಅಧಿಕೃತ ಮಾಹಿತಿಗಳನ್ನು ಅವರು ಕಾಲ ಕಾಲಕ್ಕೆ ಕೊಡುತ್ತಲೇ ಬಂದಿದ್ದಾರೆ. ನನಗೆ ಈ ವಿಚಾರ ಗೊತ್ತಿಲ್ಲ. ಆದರೆ, ನಾನು ಶಾರುಖ್ ಖಾನ್ ಜೊತೆ ಸಿನಿಮಾ ಮಾಡುತ್ತಿದ್ದೇನೆ ಅನ್ನುವುದು ಸುಳ್ಳು ಎಂದಿದ್ದಾರೆ.

ನನ್ನ ಮೊದಲ ಪ್ರಾಶಸ್ತ್ಯ ಕನ್ನಡ ಎಂದು ಈಗಾಗಲೇ ಹೇಳಿದ್ದೇನೆ. ಕನ್ನಡ ಸಿನಿಮಾ ಮಾಡಿಕೊಂಡೇ, ಅದೇ ಸಿನಿಮಾವನ್ನು ಇತರ ಭಾಷೆಗೆ ತಗೆದುಕೊಂಡು ಹೋಗುತ್ತೇನೆ. ಯಾವ ಸಿನಿಮಾ ಮಾಡುತ್ತಿದ್ದೇನೆ, ಅದರಲ್ಲಿ ಯಾರು ಇದ್ದಾರೆ ಎನ್ನುವುದನ್ನೇ ನಾನೇ ಮಾಹಿತಿಯನ್ನು ಕೊಡುತ್ತಾ ಬರುತ್ತೇನೆ. ಶಾರುಖ್ ಖಾನ್ ಜೊತೆಗಿನ ಸಿನಿಮಾ ಸುದ್ದಿ ಕೇವಲ ಗಾಸಿಪ್ ಎಂದು ಹೇಳಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಬಾಲಿವುಡ್ ನಟ ಶಾರುಖ್ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರದಲ್ಲಿ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ರಿಷಬ್ ಶೆಟ್ಟಿ ತೆರೆ ಎಳೆದಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!