ವಿಚ್ಛೇದನ ಪಡೆಯುತ್ತಿಲ್ಲ: ಪ್ರಿಯಾಮಣಿ

ವಿಚ್ಛೇದನ ಪಡೆಯುವ ಸುದ್ದಿ ಸುಳ್ಳು. ದಾಂಪತ್ಯ ಜೀವನದಲ್ಲಿ ಸುಖವಾಗಿದ್ದೇನೆ ಎಂದು ನಟಿ ಪ್ರಿಯಾಮಣಿ ಹೇಳಿದ್ದಾರೆ.

ಪ್ರಿಯಾಮಣಿ ವೈಯಕ್ತಿಕ ಜೀವನದ ಬಗ್ಗೆ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. ಅವರು ಡಿವೋರ್ಸ್‌ ಕೊಡ್ತಿದ್ದಾರೆ. ಮಕ್ಕಳಾಗದ ಕಾರಣ ದತ್ತು ತೆಗೆದುಕೊಳ್ಳುತ್ತಿದ್ದಾರೆ ಎಂದು ಸುದ್ದಿಯಾಗಿದೆ. ಈ ಬಗ್ಗೆ ಸ್ವತಃ ಪ್ರಿಯಾಮಣಿ ಕ್ಲಾರಿಟಿ ಕೊಟ್ಟಿದ್ದಾರೆ.

ಪ್ರಿಯಾಮಣಿ 2017ರಲ್ಲಿ ಆಗಸ್ಟ್‌ 23ರಂದು ಉದ್ಯಮಿ ಮುಸ್ತಫಾರನ್ನು ಅದ್ಧೂರಿಯಾಗಿ ಮದುವೆಯಾದರು. ಮದುವೆಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು. ಮುಸ್ತಫಾ ಅವರಿಗೆ ಇದು ಎರಡನೇ ಮದುವೆಯಾಗಿತ್ತು.

2009ರಲ್ಲಿ ರಾಮ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಿಯಾಮಣಿ ಏನೋ ಒಂಥರಾ, ವಿಷ್ಣುವರ್ಧನ, ಕೋ ಕೋ, ಅಣ್ಣ ಬಾಂಡ್,ಚಾರುಲತಾ, ಲಕ್ಷ್ಮಿ , ಅಂಬರೀಶಾ, ಕಲ್ಪನಾ 2, ದನ ಕಾಯೋನು, ಇದೊಳ್ಳೆ ರಾಮಾಯಣ, ಚೌಕಾ, ನನ್ನ ಪ್ರಕಾರ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮೊದಲ ಚಿತ್ರದಲ್ಲೇ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡ ಪ್ರಿಯಾಮಣಿ ಬ್ಯಾಕ್ ಟು ಬ್ಯಾಕ್ 9 ಸಿನಿಮಾ ಅವಾರ್ಡ್‌ಗಳನ್ನು ಪಡೆದ ಹೆಗ್ಗಳಿಕೆ ಹೊಂದಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!