ಅಭಿಮಾನಿಗಳ ಜೊತೆ ಡಾಲಿ ಬರ್ತ್​ಡೇ ಇಲ್ಲ!

ನಟ ಡಾಲಿ ಧನಂಜಯ್ ಅವರು ಕೆಲಸದ ನಿಮಿತ್ತ ಅಭಿಮಾನಿಗಳ ಜೊತೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.

ಡಾಲಿ ಧನಂಜಯ್ ಅವರು ಆಗಸ್ಟ್ 23ರಂದು   39ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಆದರೆ ಈ ಬಾರಿ ಅವರು ಅಭಿಮಾನಿಗಳಿಗೆ ಸಿಗುತ್ತಿಲ್ಲ. ಈ  ಬಗ್ಗೆ ಅವರು  ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ.

‘ನನ್ನ ಪ್ರೀತಿಯ ಅಭಿಮಾನಿಗಳೇ, ಆಗಸ್ಟ್ 23ರಂದು ನನ್ನ ಬರ್ತ್​ಡೇ. ಪ್ರತಿ ವರ್ಷ ನನ್ನ ಜನ್ಮದಿನ ಅಂದರೆ ಅದು ನನ್ನ ಹಬ್ಬಕ್ಕಿಂತ ಹೆಚ್ಚು ನಿಮ್ಮ ಹಬ್ಬ. ನಿಮ್ಮ ಪ್ರೀತಿ, ನಿಮ್ಮ ಎನರ್ಜಿ, ನಿಮ್ಮ ಸಂಭ್ರಮ ಅದೇ ನನ್ನ ಶಕ್ತಿ. ಆದರೆ ಈ ಬಾರಿ ನಾನು ಕೆಲಸದ ನಿಮಿತ್ತ ಹೊರಗಡೆ ಹೋಗುತ್ತಿದ್ದೇನೆ. ಈ ಸಂಭ್ರಮಾಚರಣೆಗೆ ನಿಮ್ಮ ಜೊತೆ ಇರಲಾಗದಿದ್ದರೂ, ನಿಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ನನ್ನೊಡನೆ ಇರುತ್ತದೆ ಎನ್ನುವ ದೃಢ ನಂಬಿಕೆಯಿದೆ. ಮುಂದಿನ ಸಲ ಇನ್ನೂ ಡಬ್ಬಲ್ ಎನರ್ಜಿ, ಡಬ್ಬಲ್ ಸಂಭ್ರಮ, ಜೊತೆಗೆ ಆಚರಿಸೋಣ. ಲವ್​ ಯೂ ಆಲ್, ಡಾಲಿ’ ಎಂದು ಬರೆದುಕೊಂಡಿದ್ದಾರೆ.

ಡಾಲಿ ಧನಂಜಯ್​ಗೆ ವಿವಾಹ ಆದ ಬಳಿಕ ಇದು ಮೊದಲ ಜನ್ಮದಿನ. ಹೀಗಾಗಿ ಪತ್ನಿ ಧನ್ಯತ ಜೊತೆ ಅವರು  ಸುತ್ತಾಡಲು ಹೋಗಲು ಪ್ಲ್ಯಾನ್ ಮಾಡಿರಬಹುದು ಎನ್ನಲಾಗುತ್ತಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!