ನಿಶ್ವಿಕಾ ನಾಯ್ಡು

ಸುದೀಪ್ ಚಿತ್ರದಲ್ಲಿ ನಿಶ್ವಿಕಾ ನಾಯ್ಡು?

ಕಿಚ್ಚ ಸುದೀಪ್ ಅವರ 47ನೇ ಚಿತ್ರದಲ್ಲಿ ನಟಿಸಲು ನಿಶ್ವಿಕಾ ನಾಯ್ಡು ಜೊತೆ ಮಾತುಕತೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಜಂಟಲ್‌ಮನ್ ಮತ್ತು ಗುರು ಶಿಷ್ಯರು ಚಿತ್ರಗಳ  ನಟನೆಗೆ ಹೆಸರುವಾಸಿಯಾದ ನಿಶ್ವಿಕಾ ನಾಯ್ಡು ಪ್ರಭುದೇವ ಮತ್ತು ಶಿವರಾಜ್‌ಕುಮಾರ್ ನಟನೆಯ ಕರಟಕ ದಮನಕ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ಆದರೆ ನಿಶ್ವಿಕಾ  ಚಿತ್ರತಂಡ ಸೇರಲಿದ್ದಾರೆ. ಕಿಚ್ಚ ಸುದೀಪ್ ಜೊತೆಗೆ ಮೊದಲ ಬಾರಿಗೆ ನಿಶ್ವಿಕಾ ನಾಯ್ಡು ತೆರೆ ಹಂಚಿಕೊಳ್ಳಲಿದ್ದಾರೆ.

ಮ್ಯಾಕ್ಸ್‌ನಂತೆ ಈ ಚಿತ್ರದಲ್ಲಿ ಸಾಂಪ್ರದಾಯಿಕ ನಾಯಕಿ ಪಾತ್ರವಿರುವುದಿಲ್ಲ. ಆದರೆ ಬಲವಾದ ಮಹಿಳಾ ಪಾತ್ರಗಳನ್ನು ಒಳಗೊಂಡಿರುತ್ತದೆ ಎಂದು ಚಿತ್ರತಂಡ ಈ ಹಿಂದೆ ಹೇಳಿತ್ತು. ಅದರಂತೆ ಮೈಕೆಲ್, ರವಿಕುಲ ರಘುರಾಮ ಮತ್ತು ಮಾರ್ಗನ್ ಚಿತ್ರಗಳಲ್ಲಿ ನಟಿಸಿದ ನಟಿ ದೀಪ್ಶಿಖಾ ಅವರನ್ನು ಪ್ರಮುಖ ಪಾತ್ರಗಳಲ್ಲಿ ಒಂದಕ್ಕೆ ಅಂತಿಮಗೊಳಿಸಲಾಗಿದೆ. ನವೀನ್ ಚಂದ್ರ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಈ ಚಿತ್ರಕ್ಕೆ ಮ್ಯಾಕ್ಸ್ ಚಿತ್ರಕ್ಕಾಗಿ ಕೆಲಸ ಮಾಡಿದ್ದ ತಾಂತ್ರಿಕ ತಂಡವೇ ಕೆಲಸ ಮಾಡಿದೆ.  ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.  ಶೇಖರ್ ಚಂದ್ರು ಛಾಯಾಗ್ರಹಣ ನಿರ್ವಹಿಸಿದ್ದಾರೆ.

ಮ್ಯಾಕ್ಸ್ ಚಿತ್ರದ ನಿರ್ದೇಶಕ ವಿಜಯ್ ಕಾರ್ತಿಕೇಯನ್, ಕಿಚ್ಚ ಸುದೀಪ್ ಅವರ 47ನೇ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸತ್ಯ ಜ್ಯೋತಿ ಫಿಲ್ಮ್ಸ್ ನಿರ್ಮಿಸಿರುವ ಚಿತ್ರ  ಈಗಾಗಲೇ ಕುತೂಹಲ ಮೂಡಿಸುತ್ತಿದೆ. ಚಿತ್ರದ ತಾರಾಗಣದ ಹೆಚ್ಚಿನ ವಿವರಗಳನ್ನು ಗೌಪ್ಯವಾಗಿಡಲಾಗಿದೆ.

2025 ರಲ್ಲಿಯೇ ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಿರುವುದರಿಂದ,  ಚಿತ್ರದ ಚಿತ್ರೀಕರಣ ಚೆನ್ನೈನಲ್ಲಿ ನಡೆಯುತ್ತಿದೆ. ಜುಲೈ 9 ರಂದು ಚಿತ್ರ ಆರಂಭವಾಗಿದ್ದು, ವೇಗವಾಗಿ ಚಿತ್ರೀಕರಿಸಲಾಗುತ್ತಿದೆ.

—-

This Article Has 7 Comments
  1. Pingback: buying androxal canada on sale

  2. Pingback: order enclomiphene cheap info

  3. Pingback: discount xifaxan usa drugstore

  4. Pingback: cheap staxyn generic best price

  5. Pingback: discount dutasteride price singapore

  6. Pingback: how to buy fildena generic in us

  7. Pingback: online nás kamagra

Leave a Reply

Your email address will not be published. Required fields are marked *

Translate »
error: Content is protected !!