ನಿರೀಕ್ಷೆ ಮೂಡಿಸಿರುವ ತಾರೆ ತಾರಕ್ ವಡಕಿ

ಕನ್ನಡದ ಯುವ ನಾಯಕರಲ್ಲಿ ಹೆಚ್ಚು ಭರವಸೆ ತಂಬುವ ಯುವಕ ತಾರಕ್ ವಡಕಿ. ಅದಕ್ಕೆ ಕಾರಣ ನೋಟ, ನಟನೆ ಮತ್ತು ತಮ್ಮ ಕರ್ತವ್ಯದ ಮೂಲಕ ಮಿಸ್ಟರ್ ಪರ್ಫೆಕ್ಷನ್ ಎಂದು ಅವರು ಗುರುತಿಸಿಕೊಂಡಿರುವ ರೀತಿ. `ನಾನೊಂಥರ’ ಎನ್ನುವ ಒಂದೇ ಒಂದು ಸಿನಿಮಾದ ಮೂಲಕ ನಾನು ಯಾವ ಥರ ವಿಭಿನ್ನ ಎಂದು ಚಂದನವನಕ್ಕೆ ತೋರಿಸಿಕೊಟ್ಟಿರುವ ಯುವ ಪ್ರತಿಭೆ ತಾರಕ್ ವಡಕಿ.

ಒಬ್ಬ ಒಳ್ಳೆಯ ಕಲಾವಿದನಗಲು ನಟನೆ ಬೇಕೇ ಬೇಕು. ಅದರ ಜೊತೆಗೆ ತಾರಕ್ ವಡಕಿಯವರಿಗೆ ಇರುವಂಥ ಕಟ್ಟುಮಸ್ತು ಮೈಕಟ್ಟು ಇದ್ದರೆ ಆತ ಪ್ಯಾನ್ ಇಂಡಿಯಾ ಹೀರೋ ಆಗಲು ತಕ್ಕವನು ಎನ್ನುವುದು ಸದ್ಯದ ಲೆಕ್ಕಾಚಾರ. ಇದರೊಂದಿಗೆ ಡಾ.ರಾಜ್‌ಕುಮಾರ್ ಅವರಂಥ ನಟರು ಕನ್ನಡ ಚಿತ್ರರಂಗದಲ್ಲಿ ಬೆಳೆಸಿ ತೋರಿಸಿರುವ ಶಿಷ್ಟಾಚಾರ ಕೂಡ ಮುಖ್ಯವಾಗುತ್ತದೆ. ಅದಕ್ಕೆ ತಕ್ಕಂತೆ ತಾರಕ್ ಕೂಡ ಒಬ್ಬ ಡಾಕ್ಟರ್. ಅಂದಹಾಗೆ ಇದು ಗೌರವಪೂರ್ವಕವಾಗಿ ಪಡೆದುಕೊಂಡ ಬಿರುದಲ್ಲ. ವೈದ್ಯವೃತ್ತಿಯ ದ್ಯೋತಕ. ಹೀಗೆ ಒಬ್ಬ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಳ್ಳುತ್ತಿರುವ ತಾರಕ್ ವಡಕಿಯವರ ‘ಏರಿಯಾ ಹುಡುಗರು’ ಸಿನಿಮಾ ಇನ್ನೇನು ತೆರೆಗೆ ಬರಬೇಕಾಗಿದೆ. ಅದರ ನಡುವೆ ‘ಪ್ರೊಡಕ್ಷನ್ ನಂಬರ್ ಒನ್’ ಎನ್ನುವ ಹೊಸ ತಂಡದ ಮೂಲಕ ಹೊಸ ಚಿತ್ರವೊಂದರ ಭಗವಾಗುತ್ತಿದ್ದಾರೆ. ಚಿತ್ರತಂಡಕ್ಕೆ ಈ ಕೊರೊನಾ ಕಾಲದಲ್ಲಿ ಧನ ಸಹಾಯ ಮಾಡಿ ತಮ್ಮ ಹೃದಯ ವೈಶಾಲ್ಯತೆಯನ್ನು ತೋರಿಸಿಕೊಟ್ಟಿದ್ದಾರೆ ತಾರಕ್.

ಇತ್ತೀಚೆಗೆ ಜನ್ಮದಿನಾಚರಣೆ ಮಾಡಿಕೊಂಡ ತಾರಕ್ ವಡಕಿ ಆ ದಿನದಂದು ಒಂದು ವಿಶೇಷ ವಿಡಿಯೋ ಬಿಡುಗಡೆ ಮಾಡುವ ಮೂಲಕ ಹೊಸ ಚಿತ್ರಕ್ಕಾಗಿ ತಾವು ಮಾಡುತ್ತಿರುವ ತಯಾರಿಯನ್ನು ತೋರಿಸಿದ್ದಾರೆ. ಅದರಲ್ಲಿಯೂ ಕಟ್ಟುಮಸ್ತು ಮೈಕಟ್ಟಿನ ಮೂಲಕ ಗಮನ ಸೆಳೆದಿದ್ದಾರೆ. ಮಾತ್ರವಲ್ಲ, ಕಿರುತೆರೆ ಮತ್ತು ಬೆಳ್ಳಿಪರದೆಯ ಪ್ರಮುಖ ಕಲಾವಿದರು ವಿಡಿಯೋ ಮುಖಾಂತರವೇ ಅವರಿಗೆ ಶುಭ ಕೋರಿದ್ದು ಕೂಡ ವಿಶೇಷವಾಗಿತ್ತು. ತಾರಕ್ ವಡಕಿಯವರ ಮುಂದಿನ ಚಿತ್ರವನ್ನು ಕುಮಾರ್ ಎಸ್ ವಿ ನಿರ್ದೇಶಿಸಲಿದ್ದಾರೆ. ಭರವಸೆಯ ಸಂಗೀತ ನಿರ್ದೇಶಕ ಪ್ರದ್ಯೋತನ್ ಸಂಗೀತ ನೀಡುತ್ತಿದ್ದಾರೆ. ಯುವಿ ಡಿಜಿಟಲ್ ನ ಉಮೇಶ್ ಈಗಾಗಲೇ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಶೀಘ್ರದಲ್ಲಿಯೇ ಮತ್ತೊಂದು ಜಬರ್ದಸ್ತ್ ಪ್ರೆಸೆಂಟೇಶನ್ ಮೂಲಕ ತಮ್ಮ ಮುಂದಿನ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವ ಯೋಜನೆ ತಾರಕ್ ವಡಕಿಯವರದ್ದಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!