ಬೆಂಗಳೂರು: ನಿರ್ದೇಶಕ ಪ್ರೇಮ್ ಅವರು ತನಗೆ ಐದು ಲಕ್ಷ ರೂಪಾಯಿ ವಂಚಿಸಿರುವುದಾಗಿ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಆರೋಪ ಮಾಡಿದ್ದಾರೆ.
ಮಂಗಳವಾರ ಈ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ವಿಚಾರ ಬಹಿರಂಗಪಡಿಸಿದರು. ಪ್ರೇಮ್ ಅವರಿಗೆ 9 ವರ್ಷಗಳ ಹಿಂದೆ ಸಿನಿಮಾ ನಿರ್ಮಾಣ ಸಂಬಂಧ ಹತ್ತು ಲಕ್ಷ ರೂ. ನೀಡಿದ್ದೆ. ಆದರೆ ಐದು ಲಕ್ಷ ರೂ. ಮಾತ್ರ ಹಿಂತಿರುಗಿಸಿದ್ದಾರೆ ಎಂದು ಶ್ರೀನಿವಾಸ್ ಹೇಳಿದ್ದಾರೆ.
ಹಣಕ್ಕಾಗಿ ನಾನು ಅವರ ಮನೆಗೆ ಹಲವಾರು ಬಾರಿ ಅಲೆದಿದ್ದೇನೆ. ಆದರೆ ಅವರು ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ. ಸತಾಯಿಸಿದ ಬಳಿಕ ಐದು ಲಕ್ಷ ಹಿಂತಿರುಗಿಸಿದ್ದಾರೆ ಎಂದರು.
ಪ್ರೇಮ್ 50 ಕೋಟಿ ಬಜೆಟ್ ನ ಸಿನಿಮಾ ನಿರ್ದೇಶನ ಮಾಡುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ನನ್ನ ಹಣ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Pingback: more info here