ದೆಹಲಿಯಲ್ಲಿ ನಡೆದ ನಿರ್ಭಯ ಘಟನೆಯನ್ನು ಮುಂದಿಟ್ಟುಕೊಂಡು ‘ಜಾಸ್ಮಿನ್’ ಎನ್ನುವ ಚಿತ್ರವೊಂದು ಕೆಲವು ವರ್ಷಗಳ ಹಿಂದೆ ತೆರೆಕಂಡಿತ್ತು. ಈಗ ಅದೇ ಘಟನೆ ಕುರಿತಂತೆ ‘ರಂಗನಾಯಕಿ’ ಚಿತ್ರದ ಟೀಸರ್ ಬಿಡುಗಡೆಗೊಂಡಿತು. ಐಪಿಎಸ್ ಖಡಕ್ ಪೋಲೀಸ್ ಅಧಿಕಾರಿ ಡಿ.ರೂಪಮೌದ್ಗಿಲ್ ಚಿತ್ರದ ಕಾದಂಬರಿಯನ್ನು ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ ಇಂದು ಮಹಿಳೆ ಸಾಧನೆ ಮಾಡಬೇಕಾದರೆ ಬರೀ ಒಳ್ಳೆ ಹುಡುಗಿ ಅನಿಸಿಕೊಂಡರೆ ಸಾಲದು, ಸಮಾಜದ ಕಣ್ಣಲ್ಲಿ ಕೆಟ್ಟ ಹುಡುಗಿಯಾದರೂ ಪರವಾಗಿಲ್ಲ. ಅಂದುಕೊಂಡ ಗುರಿಯನ್ನು ತಲುಪಿ, ಸಮಾಜದಲ್ಲಿ ಒಳ್ಳೆತನದಿಂದ ಮುಂದೆ ಬನ್ನಿ ಎಂದು ಕರೆ ನೀಡಿ ತಂಡಕ್ಕೆ ಶುಭ ಹಾರೈಸಿದರು.
ಮೂವತ್ತೆಂಟು ವರ್ಷಗಳ ಹಿಂದೆ ತೆರೆಕಂಡ ಇದೇ ಹೆಸರಿನ ಚಿತ್ರವು ಮಾಸ್ಟರ್ ಪೀಸ್ ಆಗಿದೆ. ರಂಗನಾಯಕಿ ಮುಂದಿನ ಕನಸು. ಪವರ್‍ಫುಲ್ ಟೈಟಲ್‍ಗೆ ನ್ಯಾಯ ಒದಗಿಸುತ್ತೇನೆಂಬ ನಂಬಿಕೆ ಇದೆ. ನಿರ್ಭಯ ಘಟನೆ ಬಳಿಕ ಮನಸ್ಸಿನಲ್ಲಿ ಇದರ ಬಗ್ಗೆ ಕಾಡುತ್ತಲೆ ಇತ್ತು. ಅದಕ್ಕೆ ಅಕ್ಷರರೂಪ ಕೊಡಲು ಸಹಾಯಕ ಕಿರಣ್.ಆರ್.ಹೆಮ್ಮಿಗೆ ಬರಹರೂಪ ನೀಡಿದ್ದಾರೆ. ಅದುವೇ ಈ ಕಾದಂಬರಿಯಾಗಿದೆ. ಸೋಮವಾರದಿಂದ ಚಿತ್ರೀಕರಣ ಶುರುವಾಗಿ ಸಂಪೂರ್ಣ ಬೆಂಗಳೂರಿನಲ್ಲಿ ನಡೆಯಲಿದೆ ಸೆಪ್ಟಂಬರ್‍ದಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಲಾಗಿದೆ ಎಂದು ನಿರ್ದೇಶಕ ದಯಾಳ್‍ಪದ್ಮನಾಬನ್ ಮಾಹಿತಿ ನೀಡಿದರು.
ನಾಯಕಿ ಆಗಬೇಕಂಬ ಆಸೆ ಕೈಗೂಡಿದೆ. ನಟಿಯಾಗಬೇಕಂಬ ಕನಸು ಇದರ ಮೂಲಕ ಈಡೇರುತ್ತಿದೆ. ಒಂದು ಹುಡುಗಿ ಅತ್ಯಾಚಾರ ಆದರೆ, ಆಕೆ ಸಮಾಜವನ್ನು ಯಾವ ರೀತಿ ಎದುರಿಸುತ್ತಾಳೆ. ಕನ್ನಡಿಯಲ್ಲಿ ಮುಂದೆ ನಿಂತು ಹೇಗೆ ಧೈರ್ಯ ತಂದುಕೊಳ್ಳುತ್ತಾಳೆಂದು ಸಂಗೀತ ಶಿಕ್ಷಕಿ ಪಾತ್ರದಲ್ಲಿ ನಟನೆ ಮಾಡುತ್ತಿರುವ ನಾಯಕಿ ಅದಿತಿಪ್ರಭುದೇವ ವ್ಯಾಖ್ಯಾನವನ್ನು ಬಿಚ್ಚಿಟ್ಟರು.
ಶೀರ್ಷಿಕೆಯಲ್ಲಿ ಸಕರಾತ್ಮಕ ಅಂಶಗಳು ಇರಲಿದೆ. ಅದರಿಂದಲೇ ಎರಡನೆ ಬಾರಿ ನಿರ್ಮಾಣ ಮಾಡುತ್ತಿರುವುದಾಗಿ ಎಸ್.ವಿ.ನಾರಾಯಣ್ ತಿಳಿಸಿದರು.
ಬ್ರಾಹ್ಮಿಣ್ ಹುಡುಗ, ಶಿಕ್ಷಕನಾಗಿ ತ್ರಿವಿಕ್ರಮ್, ಮತ್ತು ಪಾತ್ರದ ಗುಟ್ಟನ್ನು ಕಾಯ್ದುಕೊಂಡಿರುವ ಶ್ರೀನಿ ನಾಯಕರುಗಳು. ಕೂರ್ಗಿ ಹುಡುಗಿಯಾಗಿ ಲಾಸ್ಯ, ಉಳಿದಂತೆ ಶಿವಮಣಿ, ವಿಕ್ಟರಿವಾಸು ಮುಂತಾದವರು ಚುಟುಕು ಮಾತನಾಡಿದರು.
ಹಾಡುಗಳಿಗೆ ಕದ್ರಿಮಣಿಕಾಂತ್ ರಾಗಗಳನ್ನು ಹೊಸೆಯುತ್ತಿದ್ದರೆ, ಸಂಭಾಷಣೆಗೆ ನವೀನ್‍ಕೃಷ್ಣ ಮಾತುಗಳನ್ನು ಪೋಣಿಸುತ್ತಿದ್ದಾರೆ. ಛಾಯಾಗ್ರಹಣ ಬಿ.ರಾಕೇಶ್, ಸಂಕಲನ ಸುನಿಲ್‍ಕಶ್ಯಪ್.ಹೆಚ್.ಎನ್, ಕಾರ್ಯಕಾರಿ ನಿರ್ಮಾಪಕ ಅವಿನಾಶ್.ಯು.ಶೆಟ್ಟಿ ಅವರದಾಗಿದೆ. ನಮೂನೆ ಒಂದು, ವರ್ಜಿನಿಟಿ ಎಂದು ಉಪಶೀರ್ಷಿಕೆಯಲ್ಲಿ ಹೇಳಿಕೊಂಡಿರುವ ಸಿನಿಮಾದ ಟೀಸರ್ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿತು.
Be the first to comment