ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ದಿನಿ ಸಿನಿ ಕಂಬೈನ್ಸ್ ಎಂಬ ಸಂಸ್ಥೆಯು ಈಗ ಡಿ.ಸಿ.ರೆಕಾಡ್ರ್ಸ್ ಎಂಬ ಘಟಕವನ್ನು ಸ್ಥಾಪಿಸಿದ್ದು, ಇದರ ಮೂಲಕ ಹೊಸ ಪ್ರತಿಭೆಗಳಿಗೆ ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ.ದಿನಿ ಕಂಬೈನ್ಸ್‍ನ ಮಾಲೀಕರಾದ ದಿನೇಶ್ ಈಗಾಗಲೇ ಸ್ಟಾರ್ ಸಂಗೀತ ನಿರ್ದೇಶಕ, ಗಾಯಕರಾಗಿರುವ ಚಂದನ್‍ಶೆಟ್ಟಿಗೆ ಹಾಳಗೋದೆ ಆಲ್ಬಂ ಅನ್ನು ನಿರ್ಮಿಸಿದ್ದರು, ಈಗ ಮತ್ತೊಬ್ಬ ಯುವ ಪ್ರತಿಭೆ ಅದ್ವಿಕ್‍ಗಾಗಿ ನಿನ್ನ ಗುಂಗಲ್ಲಿ ಎಂಬ ವೀಡಿಯೋ ಆಲ್ಬಂ ಮಾಡಲು ಅವಕಾಶ ಕಲ್ಪಿಸಿದ್ದಾರೆ.ಮೈಸೂರಿನ ಮೂಲದ ಅದ್ವಿಕ್‍ರ ನಿನ್ನ ಗುಂಗಲ್ಲಿ ವೀಡಿಯೋ ಬಿಡುಗಡೆ ಮೊನ್ನೆ ನಡೆದಿದ್ದು ಸಮಾರಂಭಕ್ಕೆ ಕಿರಿಕ್ ಕೀರ್ತಿ, ಲೋಕೇಶ್, ಪ್ರಭಾಕರ್, ಶ್ರೀನಿವಾಸ್, ಪೂಜಾ, ವಿಜೇತ್‍ಕೃಷ್ಣ ಅವರು ಆಗಮಿಸಿ ಶುಭ ಕೋರಿದರು. ಡಿಸಿ ಅಂದರೆ ದಿನೇಶ್ ಮತ್ತು ಚಂದನ್‍ಶೆಟ್ಟಿ ಎಂದಾಗುತ್ತದೆ ಎಂದು ಹೇಳಿದ ದಿನೇಶ್ ಡಿಸಿ ಅಂದರೆ ಡೈರಿ ಡೇ ಚಂದ್ರಶೇಖರ್ ಕೂಡ ಆಗುತ್ತದೆ ಅಂದರು.
ಚಂದನ್‍ಶೆಟ್ಟಿ ಮಾತನಾಡಿ, ನಾಲ್ಕು ವರ್ಷಗಳಿಂದ ನಾನು ಯಾರೆಂದು ಯಾರಿಗೂ ತಿಳಿದಿರಲಿಲ್ಲ ಆದರೆ ಡಿನಿ ಸಿನಿ ಅವರು ನೀಡಿದ ಸಹಕಾರದಿಂದ ಹಲವು ಹಿಟ್ ಆಲ್ಬಂಗಳನ್ನು ಮಾಡಿದ್ದೇ ಅಲ್ಲದೆ ಬಿಗ್‍ಬಾಸ್ ಮನೆಗೂ ಹೋಗಿ ಅಲ್ಲಿ ವಿಜೇತನಾದೆ, ಈಗ ಲಹರಿ ರೆಕಾರ್ಡಿಂಗ್ ಸಂಸ್ಥೆಯು 1 ಕೋಟಿ ಸಂಭಾವನೆ ನೀಡಿ ನಾಲ್ಕು ಆಲ್ಬಂಗಳನ್ನು ಮಾಡಿಕೊಡುವ ಆರ್ ಕೊಟ್ಟಿದ್ದಾರೆ.ಇದನ್ನು ನೋಡಿದರೆ ಕನ್ನಡದಲ್ಲಿ ಆಲ್ಬಂಗಳ ಮಾರ್ಕೆಟ್ ಯಾವ ಮಟ್ಟದಲ್ಲಿದೆ ಎಂಬುದು ಅರ್ಥವಾಗುತ್ತದೆ, ನಾವು ಮಾಡುವ ಕೆಲಸ ಸರಿಯಾದ ಬೆಲೆ ಸಿಗಬೇಕು ಇಲ್ಲದಿದ್ದರೆ ನಾವು ಯಾಕೆ ಕೆಲಸ ಮಾಡಬೇಕು ಎಂಬ ತಾತ್ಸಾರ ಬರುವುದು ಸಹಜ.ಅಂಥ ಪರಿಸ್ಥಿತಿಯಲ್ಲಿ ಇಷ್ಟೋಂದು ದೊಡ್ಡ ಮೊತ್ತ ನೀಡಿರುವುದು ಆಲ್ಬಂ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲದೆ ಇತರರಿಗೂ ಮಾದರಿಯಾಗುತ್ತದೆ ಎಂಬ ಖುಷಿಯನ್ನು ವ್ಯಕ್ತಪಡಿಸಿದರು.
ಹದಿನಾರು ವರ್ಷಗಳ ಹಿಂದೆ ಡೈರಿ ಪ್ರಾರಂಭಿಸಿದ ಚಂದ್ರಶೇಖರ್ ಮಾತನಾಡಿ, ದಿನೇಶ್ ಅವರು ನಮ್ಮ ಸಂಸ್ಥೆಯ ಪ್ರಚಾರ ರಾಯಭಾರಿ ಎಂದರು. ದಿನೇಶ್ ಅವರ ಪ್ರಯತ್ನವನ್ನು ಕಿರಿಕ್ ಕೀರ್ತಿ ಹಾಗೂ ವಿಜೇತ್‍ಕೃಷ್ಣ ಪ್ರಶಂಸಿಸಿದರು.ಅದ್ವಿತ್ ಮಾತನಾಡಿ, ನಾನು ಇದಕ್ಕೂ ಮುಂಚೆ ಸ್ಟಿಕರ್ ಮಾಡುತ್ತಿದ್ದೆ, ನಂತರ ಸಂಗೀತ ಬಗ್ಗೆ ಒಲವು ಮೂಡಿದ್ದರಿಂದ ಈ ಕ್ಷೇತ್ರಕ್ಕೆ ಬಂದೆ. ಚಂದನ್‍ಶೆಟ್ಟಿ ಹಾಗೂ ದಿನೇಶ್ ಅವರ ಸ್ಫೂರ್ತಿಯಿಂದಲೇ ನಾನು ನಿನ್ನ ಗುಂಗಲ್ಲಿ ಎಂಬ ಈ ವೀಡಿಯೋ ಆಲ್ಬಂ ಅನ್ನು ಮಾಡಲು ಸಾಧ್ಯವಾಯಿತು ಎಂದರು. ನಿನ್ನ ಗುಂಗಲ್ಲಿ ಆಲ್ಬಂ ಹಾಡು ಇದೇ 16ರಂದು ಲೋಕಾರ್ಪಣೆಯಾಗಲಿದ್ದು ಸಂಗೀತ ಪ್ರಿಯರು ಕೂಡ ಈ ಹಾಡಿನ ಗುಂಗಲ್ಲಿ ತೇಲುವಂತಾಗಲಿ.
Pingback: Digital Transformation companies