ಕೇಶವಮೂರ್ತಿ ನಿರ್ದೇಶನದ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಚಿತ್ರವು ತನ್ನ ವಿಭಿನ್ನ ಶೀರ್ಷಿಕೆಯ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ. ಈ ಚಿತ್ರವು ಜನವರಿ 10 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದೆ.
ಪಿಕ್ಕರ್ ಶಾಪ್ ಮತ್ತು ನೇಟಿವ್ ಕ್ರಾಫ್ಟ್ ಬ್ಯಾನರ್ನಲ್ಲಿ ಮಗೇಶ್ ರವೀಂದ್ರನ್ ಮತ್ತು ಕುಬೇಂದ್ರನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ದಿಲೀಪ್ ರಾಜ್ ಅವರ ನಾಯಕತ್ವದಲ್ಲಿ ಶಿಲ್ಪ ಮಂಜುನಾಥ್, ಮಧುಸೂದನ್ ಗೋವಿಂದ್, ಅಪೂರ್ವ, ಅಜಯ್ ಶರ್ಮ, ಪುಸನ್ನ ಶೆಟ್ಟಿ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಪ್ರಸಾದ್ ಕೆ ಶೆಟ್ಟಿ ಅವರ ಸಂಗೀತ ಮತ್ತು ಕೇಶವಮೂರ್ತಿ ಅವರ ಸಂಭಾಷಣೆ ಈ ಚಿತ್ರಕ್ಕೆ ಮತ್ತೊಂದು ಆಕರ್ಷಣೆ. ಕುಬೇಂದ್ರನ್ ಅವರು ಚಿತ್ರದ ಸಂಕಲನವನ್ನು ನಿರ್ವಹಿಸಿದ್ದಾರೆ ಮತ್ತು ಹರ್ಷ ಕುಮಾರ್ ಗೌಡ ಅವರು ಛಾಯಾಗ್ರಹಣ ಮಾಡಿದ್ದಾರೆ.
Be the first to comment