ಚಿತ್ರ : ನಿಂಬಿಯ ಬನದಾ ಮ್ಯಾಗ
ನಿರ್ದೇಶನ : ಅಶೋಕ ಕಡಬ
ತಾರಾಗಣ : ಷಣ್ಮುಖ ಗೋವಿಂದರಾಜ್, ತನುಶ್ರೀ, ಸಂಗೀತ ಅನಿಲ್, ಪದ್ಮ ವಾಸಂತಿ, ಮೂಗು ಸುರೇಶ್ ಇತರರು
ರೇಟಿಂಗ್: 3.5/5
ತಾಯಿ ಹಾಗೂ ಮಗನ ನಡುವಿನ ಭಾವುಕತೆಯ ಕಥಾಹಂದರದ ಚಿತ್ರ ಈ ವಾರ ತೆರೆಗೆ ಬಂದಿರುವ ನಿಂಬಿಯ ಬನದಾ ಮ್ಯಾಗ.
ಹಲವು ವರ್ಷಗಳ ನಂತರ ಮಗ, ತಾಯಿಯನ್ನು ಹುಡುಕೊಂಡು ಬಂದಾಗ ಏನೆಲ್ಲಾ ಘಟನೆಗಳು ನಡೆಯುತ್ತವೆ ಎನ್ನುವುದು ಚಿತ್ರದಲ್ಲಿದೆ. ಇಷ್ಟಕ್ಕೂ ತಾಯಿ ಹಾಗೂ ಮಗ ಬೇರ್ಪಟ್ಟಿದ್ದು ಯಾಕೆ ಎನ್ನುವುದನ್ನು ಚಿತ್ರ ನೋಡಿ ತಿಳಿದುಕೊಳ್ಳಬೇಕಿದೆ. ಇದರ ಜೊತೆಗೆ ಕ್ಲೈಮ್ಯಾಕ್ಸ್ ನಲ್ಲಿ ಹೊಸ ಕಥೆಗೆ ಸಿನಿಮಾ ಮುನ್ನುಡಿ ಹಾಕುತ್ತದೆ. ಹೀಗಾಗಿ ನಿರ್ದೇಶಕರು ಎರಡನೇ ಭಾಗವನ್ನು ತೆರೆಯ ಮುಂದೆ ತಂದಿಡುವ ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ.
ಮೊದಲ ಬಾರಿಗೆ ನಟಿಸಿರುವ ಷಣ್ಮುಖ ಗೋವಿಂದರಾಜ್ ಭರವಸೆ ಮೂಡಿಸಿದ್ದಾರೆ. ನಾಯಕ ನಟಿ ಆಗಿ ನಟಿಸಿರುವ ತನುಶ್ರೀ ನಟನೆ ಉತ್ತಮವಾಗಿದೆ. ತಾಯಿಯ ಪಾತ್ರದಲ್ಲಿ ಸಂಗೀತಾ ಅನಿಲ್ ನಟನೆಯ ಮೂಲಕ ಮೆಚ್ಚುಗೆ ಪಡೆಯುತ್ತಾರೆ.
ಮಲೆನಾಡಿನ ಪರಿಸರವನ್ನು ಚಿತ್ರದಲ್ಲಿ ಸುಂದರವಾಗಿ ಸಿದ್ದು ಕೆಂಚನಹಳ್ಳಿ ತಮ್ಮ ಕ್ಯಾಮೆರಾದ ಮೂಲಕ ಸೆರೆಹಿಡಿದಿದ್ದಾರೆ. ಇದು ಪ್ರೇಕ್ಷಕರಿಗೆ ಹಬ್ಬದಂತೆ ಭಾಸವಾಗುತ್ತದೆ. ಮಲೆನಾಡಿನ ತೊರೆಗಳು, ಕಾಡು, ಹಂಚಿನ ಮನೆ, ಮಲೆನಾಡ ಭಾಷೆ ಗಮನ ಸೆಳೆಯುತ್ತದೆ.
ಸೆಂಟಿಮೆಂಟ್ ಚಿತ್ರಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಒಂದು ಬಾರಿ ನೋಡಲು ಅಡ್ಡಿ ಇಲ್ಲ.
—

Be the first to comment