ಚಿತ್ರ: ನಿಮಗೊಂದು ಸಿಹಿ ಸುದ್ದಿ
ನಿರ್ದೇಶನ: ರಘು ಭಟ್, ಸುಧೀಂದ್ರ
ನಿರ್ಮಾಪಕ: ಹರೀಶ್ ಎನ್ ಗೌಡ
ನಟ ವರ್ಗ: ರಘು ಭಟ್, ಕಾವ್ಯ ಶೆಟ್ಟಿ, ವಿಜಯ್ ರಾಘವೇಂದ್ರ ಇತರರು
ರೇಟಿಂಗ್: 3.5
ಪುರುಷ ಗರ್ಭ ಧರಿಸುವ ಕಥೆ ಹೊಂದಿರುವ ಸಸ್ಪೆನ್ಸ್ ಚಿತ್ರ ಈ ವಾರ ತೆರೆಗೆ ಬಂದಿರುವ ‘ನಿಮಗೊಂದು ಸಿಹಿ ಸುದ್ದಿ’.
ಬಾಣಸಿಗ ಒಬ್ಬ ಸಿಇಒ ಒಬ್ಬಳನ್ನು ಭೇಟಿಯಾಗಿ ಮುಂದೆ ಪ್ರೀತಿಯಲ್ಲಿ ಬೀಳುತ್ತಾನೆ. ಈ ನಡುವೆ ಪ್ರಸವ ವೇದನೆಯಲ್ಲಿ ಅವನು ಆಸ್ಪತ್ರೆ ಸೇರುತ್ತಾನೆ. ಮುದ್ದಾದ ಮಗು ಹುಟ್ಟುತ್ತದೆ. ಯಾಕೆ ಹೀಗಾಯ್ತು ಎಂದು ಆಲೋಚನೆ ಮಾಡುವ ಹೊತ್ತಿಗೆ ಡಾಕ್ಟರ್ ಒಬ್ಬರು ಮನುಷ್ಯನ ಮೇಲಿನ ಡ್ರಗ್ಸ್ ಪ್ರಯೋಗದ ಗುಟ್ಟನ್ನು ಹೇಳುತ್ತಾರೆ.
ಮಗುವಿನ ತಂದೆ -ತಾಯಿ ಯಾರು? ಪುರುಷ ಗರ್ಭ ಧರಿಸಿದ ಹಿಂದಿರುವ ಕಾರಣ ಏನು? ಪ್ರೇಮಿಗಳು ದೂರ ಯಾಕೆ ಆಗುತ್ತಾರೆ? ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲು ಚಿತ್ರವನ್ನು ನೋಡಬೇಕಿದೆ.
ನಿರ್ದೇಶಕರು ಹೊಸ ಆಲೋಚನೆಯೊಂದಿಗೆ ಭಿನ್ನವಾದ ಕಥೆಯನ್ನು ಆಯ್ದುಕೊಂಡಿದ್ದಾರೆ. ಸಿನಿಮಾದ ಮೂಲಕ ಯುವ ಮನಸುಗಳ ತಪ್ಪು ನಿರ್ಧಾರದ ಬಗ್ಗೆ ಹೇಳುವ ಯತ್ನವನ್ನು ಮಾಡಿದ್ದಾರೆ.
ಚಿತ್ರದ ಸಂಗೀತ, ಛಾಯಾಗ್ರಹಣ, ಸಂಕಲನ ಚೆನ್ನಾಗಿದೆ. ರಘು ಭಟ್ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಯಕಿಯಾಗಿ ಕಾವ್ಯ ಶೆಟ್ಟಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಯತ್ನವನ್ನು ಮಾಡಿದ್ದಾರೆ. ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಜಯ್ ರಾಘವೇಂದ್ರ ಅವರು ಗಮನ ಸೆಳೆಯುತ್ತಾರೆ.
ಮನರಂಜನೆಯ ಜೊತೆಗೆ ಸಂದೇಶವನ್ನು ನೀಡುವ ಚಿತ್ರವಾಗಿ ‘ನಿಮಗೊಂದು ಸಿಹಿ ಸುದ್ದಿ’ ಗಮನ ಸೆಳೆಯುತ್ತದೆ.

Be the first to comment