Nikhil Kumaraswamy : ಲೈಕಾ ಪ್ರೊಡಕ್ಷನ್ಸ್ ನಲ್ಲಿ ನಿಖಿಲ್ ಕುಮಾರ್ ಸಿನಿಮಾ! ಅ.23ಕ್ಕೆ ಅದ್ಧೂರಿ ಮಹೂರ್ತ

ಬಾರಿ ಬಿಗ್ ಬಜೆಟ್ ಚಿತ್ರಗಳ ನಿರ್ಮಾಣದ ಜೊತೆಗೆ ಚಿತ್ರೋದ್ಯಮದಲ್ಲಿ  ತನ್ನದೇ ಆದ ಚಾಪನ್ನ ಮೂಡಿಸಿಕೊಂಡಿರುವಂತಹ ಸಂಸ್ಥೆ ಲೈಕ್ ಪ್ರೊಡಕ್ಷನ್. ಈಗಾಗಲೇ ಕಾಲಿವುಡ್ ನಲ್ಲಿ ಬಿಗ್ ಬಜೆಟ್ ಸಿನಿಮಾಗಳಿಗೆ ಖ್ಯಾತಿ ಪಡೆದಿರೋ ಲೈಕಾ ಸಿನಿಮಾ ಕತ್ತಿ , 2.0, ವಡಾ ಚೆನೈ , ದರ್ಬಾರ್ , PS1, PS2, ಡಾನ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ಮಾಣ ಮಾಡಿದ್ದು , ಸದ್ಯ ಇಂಡಿಯನ್ 2, ಲಾಲ್ ಸಲಾಂ, ಚಂದ್ರಮುಖಿ -2, ಚಿತ್ರಗಳನ್ನ ನಿರ್ಮಾಣ ಮಾಡುತ್ತಿರೋ ಲೈಕಾ ಸಂಸ್ಥೆ. ಇದೀಗ ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಡ್ತಿದೆ.

ಮೊದಲ ಬಾರಿಗೆ ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡ್ತಿದೆ ಲೈಕಾ ಸಂಸ್ಥೆ. ಕಮಲ್ ಹಾಸನ್ , ವಿಕ್ರಂ, ಅಜಿತ್, ರಜಿನಿಕಾಂತ್ , ವಿಜಯ್ ರಂತಹ ಸೂಪರ್ ಸ್ಟಾರ್ ಚಿತ್ರಗಳಿಗೆ ಬಂಡವಾಳ ಹಾಕಿರೋ ಲೈಕಾ ಸಂಸ್ಥೆ ನಿಖಿಲ್ ಕುಮಾರ್ ಸಿನಿಮಾಗೆ ಮಹೂರ್ತ ಫಿಕ್ಸ್ ಆಗಿದೆ. ಲೈಕಾ ಮೊದಲ ಕನ್ನಡ ಸಿನಿಮಾಗೆ ಯಾರಾಗಲಿದ್ದಾರೆ ನಿರ್ದೇಶಕ ,  ಹೌದು ಬಹುಕೋಟಿ ವೆಚ್ಚದ ಚಿತ್ರಕ್ಕೇ ಆಕ್ಷನ್ ಕಟ್ ಹೇಳ್ತಾರಾ ಸ್ಟಾರ್ ಡೈರೆಕ್ಟರ್.  ಎಲ್ಲವೂ ಸದ್ಯದಲ್ಲೇ ತಿಳಿಯಲಿದ್ದು , ಇದೇ ತಿಂಗಳ 23ರಂದು ಈ ಅದ್ದೂರಿ ಚಿತ್ರ ಸೆಟ್ಟೇರಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!