ನಿಖಿಲ್‌ ಎಲ್ಲಿದ್ದೀಯಪ್ಪಾ ಪೋಸ್ಟರ್‌

ಇತ್ತೀಚೆಗಷ್ಟೇ “ಜೋಡೆತ್ತು’, “ಎಲ್ಲಿದ್ದೀಯಪ್ಪಾ’ ಮತ್ತು “ನಿಖಿಲ್‌ ಎಲ್ಲಿದ್ದೀಯಪ್ಪಾ’ ಚಿತ್ರ ಶೀರ್ಷಿಕೆ ನೋಂದಣಿಯಾದ ಕುರಿತು ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. “ಎಲ್ಲಿದ್ದೀಯಪ್ಪಾ’ ಚಿತ್ರದ ಡಿಸೈನ್‌ ಕೂಡ ಹೊರಬಂದಿದ್ದರ ಬಗ್ಗೆಯೂ ತಿಳಿಸಲಾಗಿತ್ತು. ಈಗ ಹೊಸ ಸುದ್ದಿಗೆ “ನಿಖಿಲ್‌ ಎಲ್ಲಿದ್ದೀಯಪ್ಪಾ’ ಕೂಡ ಸೇರ್ಪಡೆಯಾಗಿದೆ.

ಅಂದರೆ, “ನಿಖಿಲ್‌ ಎಲ್ಲಿದ್ದೀಯಪ್ಪಾ’ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದೆ. ಚಿತ್ರದ ಪೋಸ್ಟರ್‌ ಡಿಸೈನ್‌ನಲ್ಲಿ ಇಂಡಿಯಾ ಗೇಟ್‌ ಮುಂಭಾಗದಲ್ಲಿ ವ್ಯಕ್ತಿಯೊಬ್ಬ ನಡೆದು ಬರುತ್ತಿರುವ ಚಿತ್ರವಿದ್ದು, ಮೇಲ್ಭಾಗದಲ್ಲಿ ಸಂಸತ್‌ ಭವನದ ಚಿತ್ರವನ್ನು ಅಳವಡಿಸಲಾಗಿದೆ.

ಸದ್ಯಕ್ಕೆ ಈ “ನಿಖಿಲ್‌ ಎಲ್ಲಿದ್ದೀಯಪ್ಪಾ’ ಶೀರ್ಷಿಕೆಯೊಂದಿಗೆ ಡಿಸೈನ್‌ ಹೊಂದಿರುವ ಪೋಸ್ಟರ್‌ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ಕೃಷ್ಣೇಗೌಡ ವಹಿಸಿಕೊಂಡಿದ್ದಾರೆ. ಇನ್ನು, ಈ ಚಿತ್ರವನ್ನು ಅಶೋಕ್‌ ಕೆ.ಕಡಬ ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರಕ್ಕೆ ಎ.ಟಿ.ರವೀಶ್‌ ಅವರು ಸಂಗೀತ ನೀಡುತ್ತಿದ್ದಾರೆ. ಸಿ.ಡಿ.ರಾಜು ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಸದ್ಯಕ್ಕೆ ಇದು ಪೋಸ್ಟರ್‌ನಲ್ಲಿರುವ ನಿರ್ಮಾಪಕ, ನಿರ್ದೇಶಕ ಹಾಗು ತಂತ್ರಜ್ಞರ ಹೆಸರು. ಉಳಿದಂತೆ ಚಿತ್ರದ ತಾರಾಬಳಗದಲ್ಲಿ ಯಾರೆಲ್ಲಾ ಇರುತ್ತಾರೆ. ಚಿತ್ರೀಕರಣ ಯಾವಾಗ ಶುರುವಾಗಲಿದೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!