ನಿರ್ದೇಶಕಿ ರಿಷಿಕಾ ಶರ್ಮಾ ಹಾಗೂ ನಟ ನಿಹಾಲ್ ಫೆಬ್ರವರಿ 15ರಂದು ಹಸೆಮಣೆ ಏರಲಿದ್ದಾರೆ.
ಕಳೆದ ಒಂಬತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಮದುವೆಗೆ ಸಿದ್ದವಾಗಿದೆ. ಈ ಕುರಿತು ರಿಷಿಕಾ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
‘ನಿಮ್ಮೆಲ್ಲರೊಂದಿಗೆ ಒಂದು ಖುಷಿ ಸುದ್ದಿಯನ್ನು ಹಂಚಿಕೊಳ್ಳುವುದಕ್ಕೆ ನಾನು ಎಕ್ಸೈಟ್ ಆಗಿದ್ದೇನೆ. ನಿಹಾಲ್ ಅವರೊಂದಿಗೆ ನಾನು ಇದೇ ಫೆಬ್ರವರಿ ತಿಂಗಳಲ್ಲಿ ಮದುವೆ ಆಗಲಿದ್ದೇನೆ. ನಮ್ಮ ಸುಂದರ ಲವ್ ಸ್ಟೋರಿ ಸೃಷ್ಟಿಯಾಗಲು ಲಕ್ಷಾಂತರ ಸಣ್ಣ ಕ್ಷಣಗಳಿವೆ. ನಮ್ಮ ಸಂತೋಷದಾಯಕ ಮತ್ತು ಅರ್ಥಪೂರ್ಣ 9 ವರ್ಷಗಳ ಸ್ನೇಹ ಮತ್ತು ಪ್ರೀತಿಗೆ ದಾರಿಯಾಗಿದೆ’ ಎಂದು ಬರೆದುಕೊಂಡಿದ್ದಾರೆ.
2018ರಲ್ಲಿ ತೆರೆಕಂಡ ಟ್ರಂಕ್ ಸಿನಿಮಾಗೆ ರಿಷಿಕಾ ನಿರ್ದೇಶಕಿಯಾಗಿದ್ದರೆ, ನಿಹಾಲ್ ನಟಿಸಿದ್ದರು. ವಿಮರ್ಶಕರಿಂದ ಮೆಚ್ಚುಗೆ ಪಡೆದ ಸಿನಿಮಾ ಇದಾಗಿತ್ತು.
ಬಳಿಕ ದೊಡ್ಡ ಬಜೆಟ್ ಸಿನಿಮಾ ‘ವಿಜಯಾನಂದ’ದಲ್ಲಿ ಈ ಜೋಡಿ ಒಂದಾಗಿತ್ತು. ಈ ಸಿನಿಮಾದಲ್ಲಿ ನಿಹಾಲ್ ಹೀರೋ ಆಗಿ ಉದ್ಯಮಿ ವಿಜಯ ಸಂಕೇಶ್ವರ ಅವರ ಪಾತ್ರ ಮಾಡಿದ್ದರು. ರಿಷಿಕಾ ನಿರ್ದೇಶನ ಮಾಡಿದ್ದರು. ಈ ಎರಡೂ ಚಿತ್ರಗಳು ಇಬ್ಬರ ವೃತ್ತಿ ಬದುಕಿಗೆ ಸಾಕಷ್ಟು ಹೆಸರು ತಂದುಕೊಟ್ಟವು.
__
Be the first to comment