ನೈಟ್‍ಔಟ್ ಬಿಡುಗಡೆಗೆ ದಿನಗಣನೆ

ನಟ ರಾಕೇಶ್‍ಅಡಿಗ ಮೊದಲಬಾರಿ ನಿರ್ದೇಶನ ಮಾಡಿರುವ ‘ನೈಟ್‍ಔಟ್’ ಚಿತ್ರದ ಕತೆಯು ಆರು ಗಂಟೆಗಳಲ್ಲಿ ನಡೆಯಲಿದೆ. ನೈಜ ಘಟನೆಯಂತೆ ಪರಿಕಲ್ಪನೆವುಳ್ಳ ಒಂದೊಂದು ಸಂಗತಿಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ನಾಯಕ, ನಾಯಕಿ ಎನ್ನದೆ ಮೂರು ಪಾತ್ರಗಳು ಅವರ ಸಂಭಾಷಣೆಗಳ ಮೂಲಕ ಪರಿಚಯವಾಗುತ್ತದೆ. ಅವರು ಮಾತನಾಡುವುದರಿಂದ ಫ್ಲಾಶ್‍ಬ್ಯಾಕ್ ಅನಾವರಣಗೊಂಡು, ಪ್ರತಿ ಸನ್ನಿವೇಶಕ್ಕೂ ತಿರುವುಗಳು ಬರುತ್ತವೆ. ಪ್ರಯೋಗ ಎನ್ನಲಾಗದೆ ವಿಭಿನ್ನ ರೂಪದ ಕಮರ್ಷಿಯಲ್ ಮಾದರಿಯ ಹೊಸ ಜಾನರ್‍ದಲ್ಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ರಾತ್ರಿ ಹೊತ್ತು ಇಬ್ಬರು ಪ್ರಾಣ ಸ್ನೇಹಿತರು ಪ್ರಯಾಣ ಮಾಡುತ್ತಾ, ಡೈಲಾಗ್‍ಗಳ ಮೂಲಕ ಅವರು ಎಲ್ಲಿಗೆ ಹೋಗುತ್ತಿದ್ದಾರೆ, ಯಾಕೆ, ಕಾರಣವೇನು ಎಂಬುದು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಇದಕ್ಕೆ ಪೂರಕವಾಗಿ ಎರಡು ಸಾಹಸಗಳು ಇರಲಿದೆ. ನೋಡುಗ ಮುಂದೆ ಏನೆಂಬುದನ್ನು ಊಹೆ ಮಾಡಲು ಸಾದ್ಯವಾಗದಂತೆ ದೃಶ್ಯಗಳು ಬರಲಿದೆ.

ಬೆಂಗಳೂರು, ಕನಕಪುರ, ಹೆಸರುಘಟ್ಟ ರಸ್ತೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸ್ವಾರ್ಥಿ, ಹೊಟ್ಟೆಕಿಚ್ಚು, ತನ್ನ ಲಾಭಕ್ಕಾಗಿ ಉಪಯೋಗಿಸಿಕೊಂಡು ನಂತರ ದೂರ ಮಾಡುವುದು. ಧೋರಣೆ ಗುಣದವನಾಗಿ ಬಾಂಬೆ ನಿವಾಸಿ ಕನ್ನಡಿಗ ಭರತ್ ನಾಯಕನಾಗಿ ಮೊದಲ ಅನುಭವ. ಜೋಶ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಅಕ್ಷಯ್ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪಟ್ಟಣದಿಂದ ಸಿಟಿಗೆ ಓದಲು ಬರುವ ಶೃತಿಗೋರಾಡಿಯಾ ನಾಯಕಿಯಾಗಿ ಎರಡನೆ ಅವಕಾಶ. ಇವರ ಜೊತೆಗೆ ಋತ್ವಿಕ್, ಚಂದನ್‍ವಿಜಯ್ ನಟನೆ ಇದೆ. ನಾಲ್ಕು ಹಾಡುಗಳಿಗೆ ವಿದ್ಯುತ್ ಉಪಕರಣಗಳನ್ನು ಬಳಸಿ ಸಂಗೀತ ಸಂಯೋಜಿಸಿರುವುದು ಸಮೀರ್‍ಕುಲಕರ್ಣೀ. ಛಾಯಾಗ್ರಹಣ ಅರುಣ್.ಕೆ.ಅಲೆಕ್ಸಾಂಡರ್, ಸಂಕಲನ ರಿತ್ವಿಕ್, ನೃತ್ಯ ಭಾರ್ಗವ ನಿರ್ವಹಿಸಿದ್ದಾರೆ. ಅಮೇರಿಕಾ ನಿವಾಸಿ ನವೀನ್‍ಕೃಷ್ಣ-ಲಕ್ಷೀನವೀನ್ ನಿರ್ಮಾಣ ಮಾಡಿರುವ ಸಿನಿಮಾವು 105 ನಿಮಿಷವಿದೆ. ವಿತರಕ ವಿಜಯ್‍ಸಿಂಹ ಮುಖಾಂತರ ಶುಕ್ರವಾರದಂದು ನೂರು ಕೇಂದ್ರಗಳಲ್ಲಿ ಬಿಡುಗಡೆಯಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!