ಹೊಸಬರ ‘ ನಿದ್ರಾದೇವಿ Next door’ ಚಿತ್ರದ ಟೀಸರ್ ಸುರಾಮ್ ಮೂವೀಸ್ ಯುಟ್ಯೂಬ್ ನಲ್ಲಿ ಬಿಡುಗಡೆಗೊಂಡಿದೆ.
ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಬಘೀರ ಸಿನಿಮಾ ಗೆಲುವಿನ ಖುಷಿಯಲ್ಲಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ‘ನಿದ್ರಾದೇವಿ Next door’ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಾಷಯ ತಿಳಿಸಿದರು.
ಶ್ರೀಮುರಳಿ ಮಾತನಾಡಿ, ನಿರ್ಮಾಪಕ ಜಯರಾಮ್ ದೇವಸಮುದ್ರ ತುಂಬಾ ಕಾಳಜಿ, ಪ್ರೀತಿಯಿಂದ ಸಿನಿಮಾ ಮಾಡಿದ್ದಾರೆ ಅನ್ನುವುದು ಗೊತ್ತಾಗುತ್ತದೆ. ಅವರಿಗೆ ಒಳ್ಳೆಯದು ಆಗಲಿ. ನಿಮ್ಮಂತ ನಿರ್ಮಾಪಕರು ಇರುವವರೆಗೂ ಕಲಾವಿದರಿಗೆ, ನಿರ್ದೇಶಕರಿಗೆ, ಚಿತ್ರತಂಡಕ್ಕೆ ಒಳ್ಳೆಯದಾಗುತ್ತದೆ. ನಾನು ಪ್ರವೀರ್ ಜಿಮ್ ಮೇಟ್ಸ್. ವರ್ಕೌಟ್ ಮಾಡುವಾಗ ಪ್ರವೀರ್ ಅದು ಮಾಡಿ, ಇದು ಮಾಡಿ ಎನ್ನುತ್ತಾರೆ. ಅವರಿಗೆ ಒಳ್ಳೆಯದು ಆಗುತ್ತದೆ. ಮ್ಯೂಸಿಕ್ ಕೂಡ ಟೀಸರ್ ನಲ್ಲಿ ಚೆನ್ನಾಗಿದೆ ಎಂದರು.
ನಟ ಪ್ರವೀರ್ ಶೆಟ್ಟಿ ಮಾತನಾಡಿ, ನಮ್ಮ ಸ್ಟೋರಿ ಇಟ್ಕೊಂಡು ಹಲವಾರು ನಿರ್ಮಾಪಕರ ಬಳಿ ಹೋದೆವು. ಜಯರಾಮ್ ಸರ್ ರಿಸೀವ್ ಮಾಡಿದಷ್ಟು ಬೇರೆ ಯಾರು ರಿಸೀವ್ ಮಾಡಲಿಲ್ಲಎಂದು ಹೇಳಿದರು.
ನಿರ್ದೇಶಕ ಸುರಾಗ್ ಮಾತನಾಡಿ, ಪ್ರವೀರ್ ನಾನು ಒಟ್ಟಿಗೆ ಸೇರಿದಾಗ ನಮ್ಮಿಬ್ಬರಿಗೆ ಒಂದೇ ತರ ಸಿನಿಮಾ ಮಾಡಬೇಕೆಂಬ ವಿಷನ್ ಇತ್ತು. ಅದು ನಮ್ಮಿಬ್ಬರಿಗೂ ಮ್ಯಾಚ್ ಆಯಿತು. ನಾನು ಏನು ಕಥೆ ಮಾಡಿಕೊಂಡಿದ್ದೇನೋ ಅದನ್ನು ಪ್ರವೀರ್ ಗೆ ಹೇಳಿದಾಗ ಅವರು ಖುಷಿಪಟ್ಟರು. ನಮ್ಮ ಟೆಕ್ನಿಕಲ್ ಟೀಂ ಈ ಚಿತ್ರಕ್ಕೆ ಸಾಕಷ್ಟು ಶ್ರಮಿಸಿದೆ ಎಂದರು.
‘ನಿದ್ರಾದೇವಿ Next door’ ಸಿನಿಮಾದಲ್ಲಿ ಪ್ರವೀರ್ ಶೆಟ್ಟಿ, ರಿಷಿಕಾ ನಾಯಕ್ ಜೋಡಿಯಾಗಿ ಕಾಣಿಸಿಕೊಂಡಿದ್ದು, ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ , ಶ್ರುತಿ ಹರಿಹರನ್, ಹಿರಿಯ ನಟ ಕೆ.ಎಸ್.ಶ್ರೀಧರ್, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀವತ್ಸ, ಅನೂಪ್, ಐಶ್ವರ್ಯ ಗೌಡ , ಮಾಸ್ಟರ್ ಸುಜಯ್ ರಾಮ್, ಕಾರ್ತಿಕ್ ಪತ್ತಾರ್, ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ.
ನಿರ್ಮಾಪಕ ಜಯರಾಮ್ ದೇವಸಮುದ್ರ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿದ್ರಾದೇವಿ Next Door ಸಿನಿಮಾಗೆ ನಕುಲ್ ಅಭ್ಯಂಕರ್ ಸಂಗೀತ, ಅಜಯ್ ಕುಲಕರ್ಣಿ ಛಾಯಾಗ್ರಹಣ, ಊಲಾಸ್ ಹೈದೂರ್ ಪ್ರೊಡಕ್ಷನ್ ಡಿಸೈನ್, ಅರ್ಜುನ್ ರಾಜ್ ಸಾಹಸ ನಿರ್ದೇಶನ, ಹೇಮಂತ್ ಕುಮಾರ್ ಡಿ ಸಂಕಲನವಿದೆ.

Be the first to comment