‘ನೆಕ್ಸ್ಟ್‌ ಲೆವೆಲ್’ ನಾಯಕಿ ಆರಾಧನಾ

ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯನ್ ಸಿನಿಮಾ ನೆಕ್ಸ್ಟ್‌ ಲೆವೆಲ್ ಚಿತ್ರಕ್ಕೆ ನಾಯಕಿಯಾಗಿ ಆರಾಧನಾ ರಾಮ್‌  ಎಂಟ್ರಿಯಾಗಿದ್ದಾರೆ.

ತರುಣ್ ಸ್ಡುಡಿಯೋಸ್ ಬ್ಯಾನರ್‌ನಲ್ಲಿ ತರುಣ್ ಶಿವಪ್ಪ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸುತ್ತಿದ್ದಾರೆ.

ಕಾಟೇರ ಸಿನಿಮಾ ನಂತರ ಆರಾಧನಾ ರಾಮ್‌  ಬಹಳ ಗ್ಯಾಪ್ ಬಳಿಕ ಆರಾಧನಾ ಎರಡನೇ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ನೆಕ್ಸ್ಟ್‌ ಲೆವೆಲ್ ಚಿತ್ರದಲ್ಲಿ   ಅವರು ಮುಖ್ಯಮಂತ್ರಿಯ ಮಗಳ ಪಾತ್ರವನ್ನು ನಿರ್ವಹಿತ್ತಿದ್ದಾರೆ. ಉಪೇಂದ್ರ ಅವರ ಜೊತೆ ಸಿನಿಮಾ ಮಾಡಲು ನಾನು ಉತ್ಸುಕಳಾಗಿದ್ದೇನೆ ಎಂದು ಆರಾಧನಾ ಹೇಳಿದ್ದಾರೆ.

ಕಾಟೇರಾ ನಂತರ ನಿರೀಕ್ಷೆಗಳು ಹೆಚ್ಚಿದ್ದವು.  ನನಗೆ ಕೆಲವು ಆಫರ್‌ಗಳು ಬಂದವು. ಆದರೆ ಸ್ಕ್ರಿಪ್ಟ್ ಇಷ್ಟವಾಗಲಿಲ್ಲ. ಈ ಒಂದೂವರೆ ವರ್ಷಗಳು ಸುಲಭವಾಗಿರಲಿಲ್ಲ. ಭಾವನೆಗಳ ರೋಲರ್ ಕೋಸ್ಟರ್ ಆಗಿತ್ತು ಎಂದು ಆರಾಧನಾ ಹೇಳಿದ್ದಾರೆ.

ವಿಶಿಷ್ಟ ನಿರೂಪಣಾ ಶೈಲಿಗೆ ಹೆಸರುವಾಸಿಯಾದ ನಿರ್ದೇಶಕ ಅರವಿಂದ್ ಕೌಶಿಕ್, ಉಪೇಂದ್ರ ಅವರ ವಿಭಿನ್ನ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ಚಿತ್ರವನ್ನು ಬರೆದಿದ್ದಾರೆ. ಇಡೀ ಚಿತ್ರದಲ್ಲಿ ಉಪೇಂದ್ರ ಕಾಂಬಿನೇಶನ್‌ನಲ್ಲಿ ನನ್ನ ಪಾತ್ರ ಹೈಲೈಟ್‌ ಆಗುತ್ತದೆ ಎಂದು ಹೇಳಿದ್ದಾರೆ ಆರಾಧನಾ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!