ಭಾವಿ ಗಂಡನ ಎಸ್ಟೇಟ್ ನಲ್ಲಿ ಅದಿತಿ ಹೊಸ ವರ್ಷಾಚರಣೆ

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಅದಿತಿ ಪ್ರಭುದೇವ ಅವರು ತಮ್ಮ ಭಾವಿ ಗಂಡನ ಊರಲ್ಲಿ ಹೊಸ ವರ್ಷದ ಆಚರಣೆ ಮಾಡಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.

ಇತ್ತೀಚೆಗೆ ಕೊಡಗಿನ ಯಶಸ್ ಎನ್ನುವವರ ಜೊತೆ ಅದಿತಿ ಪ್ರಭುದೇವ್ ಅವರ ನಿಶ್ಚಿತಾರ್ಥ ನೆರವೇರಿತ್ತು. ಈ ವಿಷಯವನ್ನ ಅದಿತಿ ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಬಹಿರಂಗ ಪಡಿಸಿದ್ದರು. ಈಗ ಅವರು ಹೊಸ ವರ್ಷಾಚರಣೆ ಆಚರಿಸಿಕೊಂಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅದಿತಿ ಅವರ ಹೊಸ ವರ್ಷಾಚರಣೆ ಜೊತೆಗೆ ನೋಡುಗರಿಗೆ ಕೊಡಗಿನ ಪ್ರಕೃತಿ ಸೌಂದರ್ಯ ಗಮನ ಸೆಳೆಯುತ್ತಿದೆ.

“ನಾನು ಈಗ ಕೊಡಗಿನಲ್ಲಿ ಇದ್ದೀನಿ. ಈ ವರ್ಷದ ಕೊನೆಯ ದಿನ ಮುಂದಿನ ವರ್ಷಕ್ಕೆ ಎಂಟ್ರಿಯಾಗುತ್ತಿದ್ದೇವೆ. ಈ ವಿಡಿಯೋ ಪೋಸ್ಟ್ ಮಾಡುವಷ್ಟರಲ್ಲಿ ಮುಂದಿನ ವರ್ಷ ಬಂದಾಗಿರುತ್ತೆ. 2022 ನಿಮ್ಮ ಜೀವನದಲ್ಲಿ ಸಾಕಷ್ಟು ಖುಷಿ ತರಲಿ, ಎಲ್ಲರೂ ನಗುನಗುತ್ತಾ ಇರಿ. ಆರೋಗ್ಯ ಭಾಗ್ಯ, ನೀವು ಅಂದ್ಕೊಂಡಿರುವ ಎಲ್ಲಾ ಕನಸುಗಳೂ ಈಡೇರಲಿ” ಎಂದು ಅದಿತಿ ಪ್ರಭುದೇವ ವಿಡಿಯೋದಲ್ಲಿ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

ಅದಿತಿ ಪ್ರಭುದೇವ ಕಾಫಿ ಎಸ್ಟೇಟ್ ನಲ್ಲಿ ತಿರುಗಾಡುವ ಜೊತೆಗೆ ಕಾಫಿ ತಯಾರಾಗುವ ಬಗ್ಗೆ ವಿವರಣೆ ನೀಡಿದ್ದಾರೆ. ಕರುವಿನ ಜೊತೆ ಆಟವಾಡಿದ್ದಾರೆ. ಬೆಕ್ಕುಗಳಿಗೆ ಬಿಸ್ಕೆಟ್ ಹಾಕಿದ್ದಾರೆ. ಫ್ಯಾಮಿಲಿ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಆದರೆ ಭಾವಿ ಪತಿಯ ಫೋಟೋ ಹೈಡ್ ಮಾಡಿದ್ದಾರೆ.

ಅದಿತಿ ಕಾರಿನಲ್ಲಿ ಸಾಗುವ ವೇಳೆ ಕಾಡು ದಾರಿಯಲ್ಲಿ ಆನೆ, ಕಾಡೆಮ್ಮೆ ಎದುರಾಗಿದೆ. ಅದಿತಿ ಟೆಂಟ್ ಹಾಕಿ ಕಾಡಿನಲ್ಲಿ ರಾತ್ರಿ ಕಳೆದಿದ್ದಾರೆ. ಕ್ಯಾಂಪ್ ಫೈರ್ ಅನುಭವವನ್ನು ಪಡೆದಿದ್ದಾರೆ. ವಿಡಿಯೋ ನೋಡುಗರಿಗೆ ಕೊಡಗಿನ ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯವನ್ನು ಅನಾವರಣ ಮಾಡುವ ಜೊತೆಗೆ ಹೊಸ ಅನುಭವವನ್ನು ನೀಡಿದೆ.

ಈ ಹಿಂದೆ ಅದಿತಿ ಪ್ರಭುದೇವ ಅವರು ತಮ್ಮ ಹುಟ್ಟೂರಾದ ದಾವಣಗೆರೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ವಿಡಿಯೋವನ್ನು ಹಂಚಿಕೊಂಡಿದ್ದರು. ಇದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಕೃಷಿಕನ ಜೊತೆ ವಿವಾಹ ಆಗಲು ಮುಂದಾಗಿರುವ ಅದಿತಿ ಪ್ರಭುದೇವ ಅವರ ಬಗ್ಗೆ ಸಾಕಷ್ಟು ಮೆಚ್ಚುಗೆಗಳು ಕೇಳಿ ಬರುತ್ತಿವೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!