ಕನ್ನಡ ಪ್ರೇಕ್ಷಕರನ್ನು ಕಳೆದ 25 ವರ್ಷದಿಂದಲೂ ರಂಜಿಸುತ್ತಿರುವ ಒಂದೇ ಹೆಸರು ಉದಯ ಟಿವಿ. ಪ್ರೇಕ್ಷಕರ ನಾಡಿಮಿಡಿತ ಅರಿತಿರುವ ಉದಯ ಟಿವಿ, ಒಂದಕ್ಕಿಂತ ಒಂದು ಮನೋರಂಜನಾತ್ಮಕ ಕಾಯಕ್ರಮಗಳನ್ನು ಪ್ರಸರಿಸುತ್ತಾ ಬಂದಿದೆ. ಉದಯ ಟಿವಿಯ ಧಾರಾವಾಹಿಗಳು ಕರ್ನಾಟಕದ ಮನೆಮನಗಳಿಗೆ ಅಪಾರ ಮೆಚ್ಚುಗೆಗಳಿಸಿವೆ. ರೋಚಕ ಫ್ಯಾಂಟಸಿ ಕಥೆಯಾದ ನಂದಿನಿ, ಗಂಡನನ್ನು ಕಾಪಾಡಿಕೊಳ್ಳುವ ಇಂದಿನ ಸತಿ ಸಾವಿತ್ರಿಯಂತಿರುವ ದೇವಯಾನಿ, ಜೀವನದ ಸವಾಲುಗಳನ್ನು ಎದುರಿಸಿ ಗೆಲ್ಲುವ ನಾಯಕಿ, ಹೀಗೆ ಒಂದೊಂದು ಕಥೆಯೂ ಕೂಡ ವಿಭಿನ್ನ.
ಈ ಧಾರಾವಾಹಿಗಳ ಸಾಲಿಗೆ ಮತ್ತೊಂದು ವಿಶಿಷ್ಟವಾದ ಪ್ರಯತ್ನ “ನಾನು ನನ್ನ ಕನಸು” ಸೇರಿಕೊಳ್ಳಲಿದೆ. ತಂದೆ, ಮಗಳಿಗೆ ಹೇಳಿರುವ ಒಂದು ಸುಳ್ಳು ಅವಳ ಕನಸಿಗೆ ಸ್ಫೂರ್ತಿಯಾಗಿರುತ್ತದೆ. ತಾನು ದೊಡ್ಡವಳಾಗಿ ಒಬ್ಬ ಡಾಕ್ಟರ್ ಆಗಬೇಕೆಂಬುದೇ ನಮ್ಮ ಪುಟ್ಟ ಕಥಾನಾಯಕಿ ಅನುಳ ದೊಡ್ಡ ಕನಸು. ವಿಧಿಯ ಲೀಲೆಯಂತೆ, ತಂದೆಗೆ ಪೂರ್ಣ ಮಾಡಲಾಗದ ಆ ಕನಸನ್ನ ಪುಟ್ಟ ಮಗಳು ತನ್ನದಾಗಿಸಿಕೊಂಡು ಅದನ್ನ ನನಸಾಗಿಸುವ ಕಥೆಯೇ ಈ “ನಾನು ನನ್ನ ಕನಸು”. ಆದರೆ ಕನಸಿನ ದಾರಿಯಲ್ಲಿ ಎಲ್ಲವೂ ಸುಗಮವಾಗಿರದೆ, ದೊಡ್ಡ ಆಘಾತವೊಂದನ್ನ ಅನು ಎದುರಿಸಬೇಕಾಗುತ್ತದೆ. ಅನುಳ ಕನಸಿಗೆ ಅಡ್ಡಗಾಲಾಗಿರುವ ವಿಲನ್‍ಗಳು ಹೆಜ್ಜೆ ಹೆಜ್ಜೆಗೂ ಸವಾಲುಗಳನ್ನೇ ಎಸೆಯುತ್ತಿದ್ದಾರೆ. ಆ ಎಲ್ಲ ಅಡೆತಡೆಗಳನ್ನ ಎದುರಿಸಿ ತನ್ನ ಕನಸನ್ನ ಹೇಗೆ ಸಾಕಾರಗೊಳಿಸಿಕೊಳ್ಳುತ್ತಾಳೆ ಎಂಬುದೇ ಈ ಕಥೆಯ ಜೀವಾಳ. ಹಾಗಂತ ಬಹುತೇಕ ಧಾರಾವಾಹಿಗಳಂತೆ, ಹೆಣ್ಣೊಬ್ಬಳ ಗೋಳಿನ ಕಥೆಯಂತೂ ಖಂಡಿತ ಅಲ್ಲ. ಕಷ್ಟಗಳನ್ನು ಧೈರ್ಯವಾಗಿ ಎದುರಿಸುತ್ತಾ ಲವಲವಿಕೆಯಿಂದ ಇರುವ ಹುಡುಗಿ ನಮ್ಮ ಅನು.
ಕಿರುತೆರೆಯಲ್ಲಿ ಮಿಂಚಿದ ಪುಟಾಣಿ ತಾರೆÀ “ಶೃತಾ” ಅನು ಪಾತ್ರ ನಿರ್ವಹಿಸುತ್ತಿದ್ದರೆ, ಕನಸನ್ನ ಹೇಳಿಕೊಟ್ಟ ತಂದೆಯಾಗಿ ಸಿನಿಮಾದ ಖ್ಯಾತ ನಟರಾದ ರಾಜೇಶ್ ನಟರಂಗ ಅವರು ನಿರ್ವಹಿಸುತ್ತಿದ್ದಾರೆ. ಅನುವಿನ ತಾಯಿಯಾಗಿ ಆರತಿ ಕುಲಕರ್ಣಿ ನಟಿಸುತ್ತಿದ್ದರೆ, ಅನುವಿನ ಕನಸಿಗೆ ಅಡ್ಡವಾಗಿರುವ ಮುಖ್ಯ ಖಳರಾಗಿ ನಿಶಿತಾ ಗೌಡ ನಟಿಸುತ್ತಿದ್ದಾರೆ. ಬಹಳ ವರ್ಷಗಳ ವಿರಾಮದ ನಂತರ ನಿಶಿತಾ ಗೌಡ ಮತ್ತೆ ಕಿರುತೆರೆಯಲ್ಲಿ ನಟಿಸುತ್ತಿರುವುದು ವಿಶೇಷ. ಇತರ ಮುಖ್ಯಪಾತ್ರಗಳಲ್ಲಿ ವಿಶಾಲ್ ರಘು, ಹರೀಶ್,ಬಾಲನಟರಾಗಿ ಸ್ಕಂದ ನಟಿಸುತ್ತಿದ್ದಾರೆ.
ಇಷ್ಟೇ ಅಲ್ಲದೆ, ನಾನು ನನ್ನ ಕನಸು ಧಾರಾವಾಹಿಯ ಪ್ರಮೋಷನ್‍ಗೆ ಖ್ಯಾತ ಸಿನೆಮಾತಾರೆ “ಪ್ರಿಯಾಂಕ ಉಪೇಂದ್ರ” ಅವರು ಭಾಗಿಯಾಗಿರುವುದು ದೊಡ್ಡ ವಿಶೇಷ. ಇದರ ಪ್ರೋಮೋಗಳಲ್ಲಿ ಕಾಣಿಸಿಕೊಂಡಿರುವುದಷ್ಟೇ ಅಲ್ಲದೆ, ಕಥೆಯ ಮುಖ್ಯ ಘಟ್ಟಗಳನ್ನು ತೆರೆಯ ಮೇಲೆ ಬಂದು ಹೇಳಲಿದ್ದಾರೆ.
ಹಿಂದಿ ಟೆಲಿವಿಷನ್‍ನ ಬಹುಪ್ರಸಿದ್ಧ ಸಂಸ್ಥೆಯಾದ “ಶಶಿ ಸುಮೀತ್ ಗ್ರೂಪ್”, ನಾನು ನನ್ನ ಕನಸು ಧಾರಾವಾಹಿಯ ನಿರ್ಮಾಣದ ಹೊಣೆ ಹೊತ್ತುಕೊಂಡಿದೆ. ಹೈದರಾಬಾದ್‍ನ ಅದ್ದೂರಿ ಸೆಟ್‍ನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಇಡೀ ಕನ್ನಡ ಟೆಲಿವಿಷನ್‍ನಲ್ಲಿ ಇಂಥಾ ಒಂದು ಸೆಟ್ ಇದೇ ಮೊದಲ ಬಾರಿಗೆ ನೋಡಲು ಸಿಗುತ್ತಿದೆ ಎಂಬುದು ಉದಯ ಟಿವಿಯ ಹೆಮ್ಮೆ. ಈ ಸೆಟ್ ನೋಡುಗರನ್ನ ನಿಬ್ಬೆರಗಾಗಿಸುವುದು ಖಂಡಿತ ಎನ್ನುತ್ತದೆ ತಂಡ.
ಕಿರುತೆರೆಯಲ್ಲಿ ದೊಡ್ಡ ಹೆಸರಾಗಿರುವ ಛಾಯಾಗ್ರಾಹಕ ಮತ್ತು ನಿರ್ದೇಶಕರಾದ ಬಿ.ಕುಮಾರ್ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ತಮ್ಮ ಡೈಲಾಗ್ ಪಂಚ್‍ಗಳಿಗೆ ಹೆಸರುವಾಸಿಯಾದ ಶ್ರೀಕಾಂತ್ ಅವರು ಇದಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಇನ್ನೂ ವಿಶೇಷವೆಂದರೆ, ಇದಕ್ಕೆ ಸಿನೆಮಾ ಸಾಹಿತಿಯಾದ ಡಾ. ನಾಗೇಂದ್ರ ಪ್ರಸಾದ್ ಅವರು ಸೊಗಸಾಗಿ ಶೀರ್ಷಿಕೆಗೀತೆ ಬರೆದುಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಕನ್ನಡ ಸಿನೆಮಾದ ಬಹುಬೇಡಿಕೆಯ ಮ್ಯೂಸಿಕ್ ಡೈರೆಕ್ಟರ್ ಆದ ಶ್ರೀಧರ್ ಸಂಭ್ರಮ್ ಅವರು ಸಂಗೀತ ಸಂಯೋಜನೆ ಮಾಡಿರುವುದು ವಿಶೇಷ. ಹಿರಿತೆರೆಯ ಜನಪ್ರಿಯ ಹಾಡಾದ “ಅಪ್ಪಾ ಐ ಲವ್ ಯೂ ಪಾ” ತರಹವೇ “ನಾನು ನನ್ನ ಕನಸು” ಶೀರ್ಷಿಕೆ ಗೀತೆ ಹಿಟ್ ಆಗುವುದರಲ್ಲಿ ಸಂದೇಹವಿಲ್ಲ ಎನ್ನುತ್ತದೆ ತಂಡ.
ಗೋಲ್ಡ್ ವೋಚರ್ ಸ್ಪರ್ಧೆ : “ನಾನು ನನ್ನ ಕನಸು” ಧಾರಾವಾಹಿಯ ವೀಕ್ಷಕರಿಗೆ ಸುವರ್ಣ ಅವಕಾಶವನ್ನು ಉದಯ ಟಿವಿ ಇದೇ ಆಗಸ್ಟ್ 5ರಿಂದ 9ರವರೆಗೆ “ಗೋಲ್ಡ್ ವೋಚರ್’ ಸ್ಪರ್ಧೆಯ ಮುಖಾಂತರ ಏರ್ಪಡಿಸಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಧಾರಾವಾಹಿಯನ್ನು ವೀಕ್ಷಿಸಿ ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿ ಬಹುಮಾನವನ್ನು ಗೆಲ್ಲಬಹುದು
ಒಟ್ಟಾರೆ ಕನ್ನಡ ಕಿರುತೆರೆಯಲ್ಲಿ “ನಾನು ನನ್ನ ಕನಸು” ಧಾರಾವಾಹಿಯು ನೋಡುಗರ ಮನಸೆಳೆದು ಮನರಂಜಿಸುವುದಕ್ಕೆ ಕಾತುರವಾಗಿದೆ. ಇದೇ ಆಗಸ್ಟ್ 5 ರಿಂದ, ಸೋಮವಾರದಿಂದ ಶುಕ್ರವಾರ ರಾತ್ರಿ 8 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
Pingback: Lees Summit Auto Glass Replacement