ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾಕ್ಕೆ ಹೊಸ ನಾಯಕಿ

ರಾಜ್ ಬಿ. ಶೆಟ್ಟಿ ನಿರ್ದೇಶನದಲ್ಲಿ ರಮ್ಯಾ ತಾವು ನಿರ್ಮಾಣ ಮಾಡುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾಕ್ಕೆ ಹೊಸ ನಾಯಕಿಯನ್ನು ಘೋಷಣೆ ಮಾಡಲಾಗಿದೆ.

ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ರಮ್ಯಾ ಬೆಳ್ಳಿತೆರೆಗೆ ಕಮ್ ಬ್ಯಾಕ್ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈ ಸಿನಿಮಾಗೆ ಹೊಸಬರು ನಾಯಕಿಯಾದರೆ ಸೂಕ್ತ ಎಂಬ ಕಾರಣಕ್ಕೆ ರಮ್ಯಾ ನಟನೆ ಮಾಡದೇ ಇರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಚಿತ್ರವನ್ನು ರಮ್ಯಾ ಅವರ ಆಪಲ್ ಬಾಕ್ಸ್ ಸಂಸ್ಥೆ ನಿರ್ಮಾಣ ಮಾಡಲಿದೆ.

ಸಕುಟುಂಬ ಸಮೇತ ಸಿನಿಮಾ ಖ್ಯಾತಿಯ ಸಿರಿ ರವಿಕುಮಾರ್ ಈ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿಗೆ ನಾಯಕಿಯಾಗಿ ಅಭಿನಯಿಸಲಿದ್ದಾರೆ. ರಮ್ಯಾ ನಟನೆಗೆ ಕಮ್ ಬ್ಯಾಕ್ ಮಾಡಲಿರುವ ಸಿನಿಮಾ ಮುಂದಿನ ತಿಂಗಳು ಘೋಷಣೆಯಾಗಲಿದೆ ಎಂದು ಹೇಳಲಾಗಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!