ಬೆಳ್ಳಿ ಪರದೆಯಲ್ಲಿ ಮಿಂಚುತಿದ್ದಾರೆ ಉತ್ತರ ಕರ್ನಾಟಕದ ಪ್ರತಿಭೆ “ನೇತ್ರಾ ಹಂಜಗಿ “

ಬೆಳ್ಳಿ ತೆರೆಯ ಪರದೆಯ ಕನಸನ್ನು ನನಸಾಗಿಸಿಕೊಂಡ ಬಹು ಮುಖ ಪ್ರತಿಭೆ “ನೇತ್ರಾ  ಹಂಜಗಿ” ಅವರು ಮೂಲತಃ ಉತ್ತರ ಕರ್ನಾಟಕದ ಗುಮ್ಮಟ ನಗರ ವಿಜಯಪುರ ಜಿಲ್ಲೆಯಯವರು  ಆದರೆ ಅವರ ತಂದೆಯವರ ಉದ್ಯೋಗ ಕೊಡಗು ಜಿಲ್ಲೆಯಲ್ಲಿ ಇದ್ದ ಕಾರಣ ನೇತ್ರಾ ಹಂಜಗಿ ಅವರು ಚಿಕ್ಕ ವಯಸ್ಸಿನಲ್ಲೇ ಕೊಡಗಿನಲ್ಲಿ ಬೆಳೆದರು ಅವರ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಅವರ ಪಿಯುಸಿ ವಿದ್ಯಾಭ್ಯಾಸವನ್ನು  ಕೊಡಗಿನಲ್ಲೆ ಮುಗಿಸಿದರು, ಹೆಚ್ಚಿನ  ಪಧವಿ ವಿದ್ಯಾಭ್ಯಾಸ ಮಾಡಲು ಮೈಸೂರಿಗೆ ಹೋಗುತ್ತಾರೆ ,ಮೈಸೂರಿನ “ಮಹಾರಾಣಿ ಮಹಿಳಾ ಕಾಲೇಜಿನಲ್ಲಿ” ಪತ್ರಿಕೋದ್ಯಮ ಪಧವಿಯ  ಕೊರ್ಸನ್ನು ನೇತ್ರಾ ಹಂಜಗಿಯವರು ವಿಧ್ಯಾಭ್ಯಾಸ ಮಾಡುತ್ತಾರೆ. ಕಾಲೇಜಿನಲ್ಲಿ ಅನೇಕ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು ಚಲನಚಿತ್ರ ನಟಿಯಾಗುವ ಅವರ ಕನಸು ಹಾಗೆ ಇತ್ತು , ಓದಿನ ಜೊತೆಗೆ ಅವರು ಅವರು ಕ್ರೀಡೆಯಲ್ಲಿ ಸಹಿತ ಆಸಕ್ತಿ ಹೊಂದಿದ್ದರು ,ಮತ್ತು ನೃತ್ಯ ನಟನೆ ಅವರ ಒಂದು ಭಾಗವಾಗಿತ್ತು,  ನಟನೆಯನ್ನು ಕಲಿತರು ಮತ್ತು ಹಲವಾರು ನಾಟಕ ಪ್ರದರ್ಶನದಲ್ಲಿ ಅಭಿನಯಿಸುತ್ತಿದ್ದರು ,ಕಾಲೇಜಿನಲ್ಲಿ ಸಂಸ್ಕೃತಿಕ ಕಾರ್ಯಕ್ರಮಗಲ್ಲಿ ಭಾಗವಹಿಸುತ್ತಿದ್ದರು. ಒಂದು ರೀತಿಯಾಗಿ ಅವರ ನಟಿಯಾಗುವ ಕನಸಿಗೆ ಆಯಾಮ ಸಿಕ್ಕಂತಾಗಿತು.

ಕ್ರೀಡೆಯಲ್ಲಿ ಇವರಿಗೆ ಥ್ರೋಬಾಲ್ ಮತ್ತು ವಾಲಿಬಾಲ್ ಹಾಗೂ ಕೋಕೋ ಮತ್ತು ಹಲವಾರು ಪಂದ್ಯಾವಳಿಗಲ್ಲಿ ಭಾಗವಹಿಸುತ್ತಿದ್ದರು  .

ಮೈಸೂರಿನಲ್ಲಿ ಪ್ರತಿವರ್ಷವು  ನಡೆಯುವ ಕನ್ನಡಿಗರ ಹೆಮ್ಮೆಯ ವಿಶ್ವ ಪ್ರಸಿದ್ದ “ನಾಡಹಬ್ಬ ದಸರಾ “ ಅದರಲ್ಲಿ ನೆಡೆಯುವ ಯುವ ದಸರಾ ಕಾರ್ಯಕ್ರಮದಲ್ಲಿ ಜಾನಪದ ನೃತ್ಯದಲ್ಲಿ ಭಾಗವಸಿದ್ದರು  ಉದಾಹರಣೆಗೆ ಡೊಳ್ಳು ಕುಣಿತ ಪೂಜಾ ಕುಣಿತಾ  ನೇತ್ರಾ ಹಂಜಗಿಯವರು  ಒಂದು  ತಂಡದೊಂದಿಗೆ ಕೂಡಿ ಭಾಗವಹಿಸಿದ್ದರು.

ಪತ್ರಿಕೋದ್ಯಮ ಪಧವಿ ಶಿಕ್ಷಣ ಮುಗಿಸಿದ ನಂತರ ಉದ್ಯೋಗ ಹರಸಿ ಬೆಂಗಳೂರಿಗೆ ಹೋಗುತ್ತಾರೆ ಅಲ್ಲಿ ಒಂದು ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಒಂದು ವರ್ಷದವರೆಗೂ ಉದ್ಯೋಗವನ್ನು ಮಾಡುತ್ತಾರೆ, ಅದಾದ ನಂತರ ಆ ಕೆಲಸಕ್ಕೆ ರಾಜೀನಾಮೆ ನೀಡಿ ನೇತ್ರಾ ಹಂಜಗಿ ಅವರು ತಮ್ಮ ಸ್ವಂತ ಊರಾದ ವಿಜಯಪುರಕ್ಕೆ ಮರಳುತ್ತಾರೆ.

ಒಂದು ದಿನ ಸಿನೆಮಾ ಆಡಿಶನ್ ನೆಡೆಯುತ್ತಿರೋ ವಿಷಯ  ಗೊತ್ತಾಯಿತು “ಗೋವಿಂದ ಗೋವಿಂದ” ಎನ್ನುವ ಕಾಮಿಡಿ ಮತ್ತು ಥ್ರಿಲ್ಲರ್  ಚಿತ್ರದಲ್ಲಿ  ಒಂದು ಸಣ್ಣ ಪಾತ್ರ ಮಾಡಿದ್ದಾರೆ

“ಗೋವಿಂದ ಗೋವಿಂದ“ ಚಿತ್ರದ ನಂತರ ಇವರಿಗೆ ಖಾಸಗಿ ಕಂಪನಿಯಾದ ಸಫೂಲೋ ಅಡುಗೆ ಎಣ್ಣೆಯ ಜಾಹೀರಾತಿಗೆ ಅಭಿನಯಿಸಲು ಅವರಿಗೆ ಅವಕಾಶ ಸಿಕ್ಕಿತ್ತು ಆ ಜಾಹೀರಾತು ಕೂಡ ಪ್ರಚಾರವಾಯಿತು. ನೇತ್ರಾ ಹಂಜಗಿ ಅವರಿಗೆ ಪ್ರತಿಷ್ಠಿತ ಮಾರ್ಕೆಟಿಂಗ್ ಕಂಪನಿಯಾದ ರಿಲಯನ್ಸ್ ಮಾರ್ಕೆಟಿಂಗ್ ಜಾಹೀರಾತು ಮಾಡಲು ಅವಕಾಶ ಸಿಕ್ಕಿತ್ತು ,ಅವರ ನಟಿಯಾಗುವ ಕನಸು ಸಮೀಪವಾದ ಹಾಗೆ ಗೋಚರವಾಯಿತು. ಎರಡು ಜಾಹೀರಾತುಗಳಲ್ಲಿ ನಟಿಸಿದ ನಂತರ ಹಿಂದಿಯಲ್ಲಿ ಬೇಟಿಯಾ ಎಂಬಾ ಧಾರವಾಹಿಯಲ್ಲೂ ಈಗ ನಟಿಸುತ್ತಿದ್ದಾರೆ , ಇವೆಲ್ಲದರ ಮಧ್ಯಯೂ ನಮ್ಮ ಸೂಪರ್ ಸ್ಟಾರ ಖ್ಯಾತಿಯ “ಎಂ ಡಿ ಅಫ್ಜಲ್” ಅವರ ಪರಿಚಯದಿಂದ ಎಂ ಡಿ  ಅಫ್ಜಲ್ ಅವರು ನಾಯಕ ನಟರಾಗಿ ಮತ್ತು ನೇತ್ರಾ ಹಂಜಗಿ ಅವರು ನಾಯಕಿನಟಿಯಾಗಿ  ಮೊಬೈಲ್ ರಾಜ” ಎಂಬಾ ಕನ್ನಡ ಚಲನಚಿತ್ರಕ್ಕೆ ನಾಯಕಿನಟಿಯಾಗಿ ಬೆಳ್ಳೆತೆರೆಗೆ ಬಂದ ಇವರ ಮೊದಲ ಚಿತ್ರವಾಗಿದೆ .

ಕರಣಸಿಂಗ್ ಚಿತ್ರಕಥೆ ಮತ್ತು ನಿರ್ಮಾಪಕರಾದರೆ ಸಂಭಾಷಣೆ ಮತ್ತು ನಿರ್ದೇಶನವನ್ನು ಓಂ ಪ್ರಕಾಶ ನಾಯ್ಕ್ ಅವರು ಮಾಡಿದ್ದರೆ “ಮೊಬೈಲ್ ರಾಜ” ಚಿತ್ರಕ್ಕೆ ಉತ್ತರ ಕರ್ನಾಟಕದ ಸಂಗೀತ ನಿರ್ದೇಶಕರಾದ “ರಾಜು ಎಮ್ಮಿಗನೂರ” ಮಾಸ್ಟರ್ ಆನಂದ ಅಭಿನಯದ  “ನಾ ಕೋಳಿಕ್ಕೆ ರಂಗಾ“ ಚಿತ್ರದ  ನಂತರ ಎರಡನೆಯ ಚಿತ್ರ “ ಮೊಬೈಲ ರಾಜ” ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ, ಇಂತಹ  ಒಂದು ಚಿತ್ರಕ್ಕೆ “ನೇತ್ರಾ ಹಂಜಗಿ” ಅವರು ನಟಿಯಾಗಿ ಅವರ ಕನಸನ್ನು ನನಸಾಗಿಸಿಕೊಂಡಿದ್ದಾರೆ.

“ಮೊಬೈಲ ರಾಜ” ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ, ಈ ಚಿತ್ರದಲ್ಲಿ ವಿಜೆ ಮನೋಜಗೆ ನಾಯಕಿಯಾಗಿ  ಸುನೀತಾ ಗೌಡ , ಫರ್ ಹೀನ್ ಜೊತೆಯಾಗಿ ಜೀಷಾನ್ ಮತ್ತು  “ಎಂ.ಡಿ ಅಫ್ಜಲ್” ಆವರಿಗೆ ನಾಯಕಿ ನಟಿಯಾಗಿ ನೇತ್ರಾ ಹಂಜಗಿಯವರು ಅಭಿನಿಯಿಸಿದ್ದಾರೆ. “ಮೊಬೈಲ ರಾಜ” ಚಿತ್ರದ ನಂತರ  ‘’SLV Hotel ನ AD Shoot ಕೂಡ ಮಾಡಿದ್ದಾರೆ ಅದು ಸಹ ಸಧ್ಯದಲ್ಲೇ ಟಿವಿ ಪರದೆಯಲ್ಲಿ ಬರಲಿದೆ.

ಇದೇ 21ಕ್ಕೆ ಎಸ್ ಬಿ ಕೆ ಲೈಡ್ ಬ್ಯಾಕ್ ಡ್ರೀಮ್ಸ್ ರವರ ಸಂದೀಪ್ ಸ್ಯಾಂಡಿ ನಿದೇ೵ಶನದ ಭಾರತಿ ಅವರ ನಿಮಾ೵ಣದ ‘ಬಂಗಾರೀಯ ಬತ೵ಡೆ’ ವಿಡಿಯೋ ಸಾಂಗ್ ಬಿಡುಗಡೆಯಾಗಲಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!