ನೆನಪುಗಳ ಮಾತು ಮಧುರ

ಟೀಸರ್ ಹಾಗೂ ಹಾಡುಗಳಲ್ಲಿ ‘ನೆನಪುಗಳ ಮಾತು ಮಧುರ’

ಪತ್ರಕರ್ತ, ಕಾರ್ಯಕಾರಿ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಪರಿಚಯವಿರುವ ಅಫ್ಜಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನೃತ್ಯ ನಿರ್ದೇಶನದ ಜೊತೆಗೆ ನಿರ್ದೇಶನವನ್ನು ಮಾಡಿರುವ ಹಾಗೂ RED & WHITE ಸೆವೆನ್ ರಾಜ್ ನಟಿಸಿ, ನಿರ್ಮಿಸಿರುವ “ನೆನಪುಗಳ ಮಾತು ಮಧುರ” ಚಿತ್ರದ ಟೀಸರ್ ಹಾಗೂ ಹಾಡುಗಳು ಇತ್ತೀಚಿಗೆ ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ ನರಸಿಂಹಲು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

“ನೆನಪುಗಳ ಮಾತು ಮಧುರ” ಚಿತ್ರದಲ್ಲಿ ಆರು ಕಥೆಗಳ ಸಂಗಮವಿದೆ. ಹಾಗೆ ಆರು ಜೋಡಿಗಳ ಪ್ರೇಮಕಥೆಯೂ‌ ಇದೆ. ಸದ್ಯದಲ್ಲೇ ನಾವು ಎದುರುಸುತ್ತಿರುವ ಹಾಗೂ ಕಣ್ಣಮುಂದೆ ನೋಡುತ್ತಿರುವ ಕೆಲವು ವಿಷಯಗಳೆ ಈ ಚಿತ್ರದ ಕಥೆಗೆ ಸ್ಪೂರ್ತಿ. ಪ್ರಸ್ತುತ ಚಿತ್ರದ ಚಿತ್ರೀಕರಣ ಹಾಗೂ ಉಳಿದ ಕೆಲಸಗಳು ಮುಕ್ತಾಯವಾಗಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಇಂದು ಟೀಸರ್ ಹಾಗೂ ಹಾಡುಗಳು ಅನಾವರಣವಾಗಿದೆ. FMD music ಯೂಟ್ಯೂಬ್ ಚಾನಲ್ ನಲ್ಲಿ ಹಾಡುಗಳನ್ನು ನೋಡಬಹುದು ಎಂದು ನಿರ್ದೇಶಕ ಅಫ್ಜಲ್ ತಿಳಿಸಿದರು.

ನೆನಪುಗಳ ಮಾತು ಮಧುರ

ನಿರ್ದೇಶಕ ಅಫ್ಜಲ್ ಹೇಳಿದ‌ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಜೊತೆಗೆ ಈ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದೇನೆ.‌ ಮಾರ್ಚ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಸುತ್ತಿದ್ದೇನೆ ಎಂದು ತಿಳಿಸಿದ ನಿರ್ಮಾಪಕ ಸೆವೆನ್ ರಾಜ್,‌ ನನಗೆ ಏಳು ಭಾಷೆಗಳ ಚಿತ್ರಗಳಲ್ಲಿ ನಟಿಸುವ ಆಸೆಯಿದೆ. ಈಗಾಗಲೇ ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದೇನೆ. ಸದ್ಯದಲ್ಲೇ ಹಿಂದೆ ಚಿತ್ರದಲ್ಲೂ ಅಭಿನಯಿಸಲಿದ್ದೇನೆ ಎಂದರು.

ಹಾಡುಗಳ ಕುರಿತು ರಾಜು ಎಮ್ಮಿಗಾನೂರು ಮಾಹಿತಿ ನೀಡಿದರು. ಚಿತ್ರದಲ್ಲಿ ನಟಿಸಿರುವ ವಸಿಷ್ಠ ಬಂಟನೂರು, ರಣವೀರ್, ರಾಜ್ ಪ್ರಭು, ಅಂಜಲಿ, ರೇಖಾ ರಮೇಶ್, ವಾದ್ಯ, ರನ್ವಿತ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಆಡಿಯೋ ಸಂಸ್ಥೆಯ ರಮೇಶ್ ಭಂಡಾರಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಚಿತ್ರದ ಉಳಿದ ತಾರಾಗಣದಲ್ಲಿ ವಿನಯ್ ಕುಮಾರ್ , ನಾಗರಾಜ್ ಗುಬ್ಬಚ್ಚಿ, ನಾಗೇಂದ್ರ ಅರಸ್ , ಹುಸೇನ್, ಅರವಿಂದ್ ಇದ್ದಾರೆ.

ನೆನಪುಗಳ ಮಾತು ಮಧುರ

Be the first to comment

Leave a Reply

Your email address will not be published. Required fields are marked *

Translate »
error: Content is protected !!