ವಿನೋದ್ ಪ್ರಭಾಕರ್ ನಟನೆಯ ನೆಲ್ಸನ್ ಚಿತ್ರಕ್ಕೆ ಲಿಯೋನಿಲ್ಲಾ ಶ್ವೇತಾ ಡಿಸೋಜಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ಗೊಂಬೆಗಳ ಲವ್ ಖ್ಯಾತಿಯ ನಟ ಅರುಣ್ ಕುಮಾರ್ ನಿರ್ದೇಶಕರಾಗಿರುವ ನೆಲ್ಸನ್ ಸಿನಿಮಾ ಸದ್ಯ ನಿರ್ಮಾಣ ಹಂತದಲ್ಲಿದೆ. ವ್ಯಾಪಕ ಹುಡುಕಾಟದ ನಂತರ ಅವರು ನಾಯಕಿ ಪಾತ್ರಕ್ಕಾಗಿ ಲಿಯೋನಿಲ್ಲಾ ಶ್ವೇತಾ ಡಿಸೋಜಾ ಅವರನ್ನು ಆಯ್ಕೆ ಮಾಡಿದ್ದಾರೆ.
ಗಿರಿದೇವ್ ಹಾಸನ್ ನಿರ್ದೇಶನದ ವೈ ಎಂಬ ಚಿತ್ರದೊಂದಿಗೆ ಲಿಯೋನಿಲ್ಲಾ ಶ್ವೇತಾ ಡಿಸೋಜಾ ಅವರು ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಬಳಿಕ ಕನ್ನಡದ ‘ಖಾಸಗಿ ಪುಟಗಳು’ ಮತ್ತು ಹೆಜ್ಜಾರು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ನೆಲ್ಸನ್ ಚಿತ್ರತಂಡ ಲಿಯೋನಿಲ್ಲಾ ಶ್ವೇತಾರನ್ನು ಆರಂಭಿಕ ಆಡಿಷನ್ ಮತ್ತು ಲುಕ್ ಟೆಸ್ಟ್ ನಂತರ ತಂಡಕ್ಕೆ ಕರೆತರಲು ನಿರ್ಧರಿಸಿದೆ.
ಈಗಾಗಲೇ ಕೆಲವು ದಿನಗಳ ಚಿತ್ರೀಕರಣ ನಡೆಸಿರುವ ಚಿತ್ರತಂಡ ನವೆಂಬರ್ 17 ರಂದು ಚಿತ್ರೀಕರಣವನ್ನು ಪುನರಾರಂಭಿಸಲು ಯೋಜಿಸಿದೆ. ಚಾಮರಾಜನಗರ, ಸಂಗಮ, ಮಾದೇಶ್ವರ ಬೆಟ್ಟ ಮತ್ತು ಸತ್ಯಗಾಲ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ.
‘1960 ರಿಂದ 1990ರ ದಶಕದಲ್ಲಿ ಕಂಡುಬರುವ ಚಾಮರಾಜನಗರ ಜಿಲ್ಲೆಯ ಗ್ಯಾಂಗ್ ಸ್ಟರ್ ಗಳ ನೈಜ ಕಥೆಯನ್ನು ಆಧರಿಸಿದ ಚಿತ್ರ ಇದಾಗಿದೆ. ಬಿಎಂ ಶ್ರೀರಾಮ್ ನಿರ್ಮಿಸಿರುವ ಈ ಚಿತ್ರದಲ್ಲಿ ಗೋಪಾಲ ಕೃಷ್ಣ ದೇಶಪಾಂಡೆ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಹರಿ ಮಹದೇವ್ ಸಂಭಾಷಣೆ, ಸಾಹಸ ದೃಶ್ಯಗಳಿಗೆ ಸ್ಟಂಟ್ ಮಾಸ್ಟರ್ ರವಿ ವರ್ಮಾ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಪ್ರಜ್ವಲ್ ಗೌಡ ಛಾಯಾಗ್ರಹಣ ಮತ್ತು ಭರತ್ ಬಿಜಿ ಸಂಗೀತ ಸಂಯೋಜನೆ ಇದೆ.
Be the first to comment