ನೀತು ಪಾರ್ಟಿ ಹಾಡಿಗೆ ಡಿಮ್ಯಾಂಡ್ !

ರಮಣೀ ರೀಲ್ಸ್ ಸಂಸ್ಥೆಯ ಮೂಲಕ ರಾಕೇಶ್ ಡಿ ಅವರ ನಿರ್ಮಾಣದಲ್ಲಿ ತಯಾರಾದ “ಹ್ಯಾಂಗೋವರ್” ಚಿತ್ರದ ಮತ್ತೊಂದು ಹಾಡು “ಸಿ ಮ್ಯೂಜಿóಕ್” ಸಂಸ್ಥೆಯ ಮೂಲಕ ಬಿಡುಗಡೆಯಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಹಾರಾಡುತ್ತಿದೆ.. ಬಿಡುಗಡೆಯಾಗಿ 24 ಗಂಟೆಗಳಲ್ಲೇ ಸುಮಾರು 3ಲಕ್ಷಕ್ಕೂ ಮೇಲೆ ವೀಕ್ಷಣೆಯಾಗಿದೆ. ಹಾಡುನ್ನು ಕೇಳಿದವರೆಲ್ಲಾ ಮೆಚ್ಚಿಕೊಳ್ಳುತ್ತಿದ್ದಾರೆ ಮತ್ತು ಚಿತ್ರತಂಡಕ್ಕೆ ಒಳ್ಳೆ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.
“ನಾನೆ ರುಕ್ಕು.. ಕೊಡ್ತೀನಿ ಒಂದು ಲುಕ್ಕು.. ನಾನಂದ್ರೆ ಫುಲ್ಲು ಕಿಕ್ಕು..” ಎಂದು ಹೇಳುತ್ತಾ ಹಾಟ್ ಹಾಟ್ ಆಗಿ ನೀತು ಶೆಟ್ಟಿ ಕಾಣಿಸಿಕೊಂಡಿದ್ದ ಈ ಹಾಡಿಗೆ ವೀರ್‍ಸಮರ್ಥ್ ಅವರ ಸಂಗೀತ ಸಂಯೋಜನೆ ಇದ್ದು ಕೃಷ್ಣ ಅವರ ಸಾಹಿತ್ಯ ವಿದೆ. ಸುಪ್ರೀಯ ಲೋಹಿತ್ ಅವರು “ನಿನ್ನೆ ನೋವುಗಳ.. ಮರೆತು ನಾವುಗಳ.. ದೋಸ್ತಿ ಮಾಡೋಣ ಇಲ್ಲಿ ಈಕ್ಷಣ” ಎಂದು ಹಾಡಿದ ಹಾಡಿಗೆ ಕಲೈ ಅವರ ನೃತ್ಯ ಸಂಯೋಜನೆ ಮತ್ತು ಯೋಗಿಯವರ ಛಾಯಾಗ್ರಹಣವಿದೆ.
ಹ್ಯಾಂಗೋವರ್ ನಲ್ಲಿ ಅಭಿನಯಿಸಿದ ಮೂವರು ಹುಡುಗರು ಮತ್ತು ಮೂವರು ಹುಡುಗಿಯರ ಪರಿಚಯವೂ ಈ ಹಾಡಿನ ಮುಖಾಂತರ ನಡೆಯುತ್ತದೆ ಮತ್ತು ಈ ಪಾರ್ಟಿಯ ಹ್ಯಾಂಗೋವರೇ ಇಡೀ ಚಿತ್ರದ ಮೂಲ ಕಥೆಗೆ ಕಾರಣವಾಗುತ್ತದೆಯಂತೆ. ಇದನ್ನು ರಿವರ್ಸ್ ಸ್ಕ್ರೀನ್ ಪ್ಲೇನಲ್ಲಿ ಹೇಳಲು ಹೊರಟಿದ್ದಾರೆ ನಿರ್ದೇಶಕ ವಿಠಲ್ ಭಟ್.
ಹ್ಯಾಂಗೋವರ್ ಚಿತ್ರದ ಮೊದಲ ಹಂತದಲ್ಲಿ ಬರುವ ಈ ಹಾಡು ಮೋಜು-ಮಸ್ತಿಯ ಜೊತೆಗೆ “ಎಲ್ಲಾ ಕಂಡೋರೇ ಇಲ್ಲಾ.. ಕದ್ದು ತಿನ್ನೋರೇ ಎಲ್ಲ..” ಹೀಗೆ ಒಂದಿಷ್ಟು ಫಿಲಾಸಫಿಯನ್ನೂ ಹೇಳುತ್ತಿದೆ. ನೀತು ಶೆಟ್ಟಿಯವರ ಕರಿಯರ್‍ನಲ್ಲಿ ಇದು ದಿ ಬೆಸ್ಟ್ ಡಾನ್ಸ್ ನಂಬರ್ ಎಂದು ಅವರೇ ಹೇಳಿಕೊಂಡಿದ್ದಾರೆ ಮತ್ತು ಚಿತ್ರಕ್ಕೆ ಈ ಹಾಡು ಹೈಲೆಟ್ಟಾಗಿ ನಿಲ್ಲುತ್ತದೆ ಎಂಬುದು ಚಿತ್ರತಂಡದ ಭರವಸೆ ಮತ್ತು ನಂಬಿಕೆ.
ಚಿತ್ರ ಬಿಡುಗಡೆಗೆ ಎಲ್ಲಾ ಸಿದ್ದತೆಗಳನ್ನು ನಡೆಸುತ್ತಿದೆ ಚಿತ್ರತಂಡ ಎಲ್ಲವೂ ಅಂದುಕೊಂಡಂತೆ ಆದ್ರೆ ಸೆಪ್ಟೆಂಬರ್ ಎರಡನೇ ವಾರ ಬಿಡುಗಡೆ ಮಾಡುವ ಸಾಧ್ಯತೆಯಿದೆಯಂತೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!