‘ನೀ ನನ್ನನೇನನ್ನು ನಾನಿನ್ನನೇನನ್ನೆನು ಮೂಹೂರ್ತ
ಶೀರ್ಷಿಕೆ ದೊಡ್ಡದು ಕಥೆ ಚಿಕ್ಕದು ಚಂದನವನದಲ್ಲಿ ಚಿಕ್ಕದಾದ, ದೊಡ್ಡದಾದ ಶೀರ್ಷಿಕೆಗಳು ಬರುತ್ತಿದೆ. ಈಗ
ಹೊಸ ಚಿತ್ರದ ಹೆಸರನ್ನು ಅಷ್ಟು ಸುಲಭವಾಗಿ ಓದಲು ಆಗುವುದಿಲ್ಲ.ಎರಡೆರಡು ಬಾರಿ
ನೋಡಿ, ಓದಿಕೊಂಡರೆ ಮಾತ್ರ ಹೇಳಲು ಆಗುತ್ತದೆ. ಅದುವೇ ‘ನೀ ನನ್ನನೇನನ್ನು ನಾನಿನ್ನನೇನನ್ನೆನು’ಇದರಲ್ಲಿ ನ ಅಕ್ಷರವು ೧೩ ಬಾರಿ ಬರಲಿರುವುದು ವಿಶೇಷವಾಗಿದೆ.ಕತೆಯಲ್ಲಿ ಯುವಕನೊಬ್ಬ ಸಮಾಜದಲ್ಲಿ ನಡೆಯುವ ಅನಾಚಾರಗಳನ್ನು ತಡಿಬೇಕು, ಹೊಡಿಬೇಕು ಎಂದು ಹೇಳುತ್ತಿದ್ದವನು, ಮತ್ತೋಂದು ಕಡೆ ಆತನೇ ದೊಡ್ಡ ಕಳ್ಳ ಆಗಿರುತ್ತಾನೆ.
ಜೊತೆಯಲ್ಲಿ ಸಮಾಜಘಾತಕ ವಿರೋದಿ ಚಟುವಟಿಕೆಗಳು, ಕಾಲೇಜು ಜೀವನವನ್ನು ವಿದ್ಯಾರ್ಥಿಗಳು ಹೇಗೆ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬಂತಹ ನೈಜ ಘಟನೆಗಳನ್ನುಹೆಕ್ಕಿಕೊಳ್ಳಲಾಗಿದೆ. ಏಕಕಾಲಕ್ಕೆ ಸಂದೇಶ ಮತ್ತು ಮನರಂಜನೆಯು ಸನ್ನಿವೇಶಗಳ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿ ಸಂಪೂರ್ಣ
ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದೆ. ಮೂರು ಹಾಡುಗಳಿಗೆ ರಾಜ್‌ಭಾಸ್ಕರ್
ಸಂಗೀತ ಸಂಯೋಜಿಸುತ್ತಿದ್ದಾರೆ.ಕೆ.ರಂಗನಾಥ ಮೊದಲಬಾರಿ ರಚನೆ, ನಿರ್ದೇಶನ ಜೊತೆಗೆ ಕಾಲೇಜು ವಿದ್ಯಾರ್ಥಿ
ಪಾತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಇವರ ಕುರಿತು ಹೇಳುವುದಾದರೆ ರಿಯಾಲಿಟಿ
ಶೋ ಮತ್ತು ಜಾಹಿರಾತು ಸಿದ್ದಪಡಿಸಿದ ಅನುಭವವಿದೆ. ವಿದ್ಯಾರ್ಥಿಯಾಗಿದ್ದಾಗಲೇ
ಕಾಲೇಜಿನಲ್ಲಿ ಕಂಡಂತ ಘಟನೆಗಳನ್ನು ಸನ್ನಿವೇಶಕ್ಕೆ ಬಳಸಿಕೊಂಡು, ಇದಕ್ಕಾಗಿ ಮೂರು
ವರ್ಷ ಸಮಯ ತೆಗೆದುಕೊಂಡು ಕತೆ ಸಿದ್ದಪಡಿಸಿದ್ದಾರೆ. ನಾಯಕಿಯರುಗಳಾಗಿ ಭವ್ಯ ಇವರಿಗೆ
ಅಭಿನಯ ಹೊಸ ಅನುಭವ, ತೇಜಸ್ವಿನಿಆನಂದ್‌ಗೆ ಎರಡನೆ ಚಿತ್ರ. ನಾಯಕಿ ತಂದೆಯಾಗಿ
ಎಂ.ಡಿ.ಕೌಶಿಕ್ ಮುಂತಾದವರ ನಟನೆ ಇದೆ. ಛಾಯಗ್ರಹಣ ವೀನಸ್‌ನಾಗರಾಜ್ ಅವರದಾಗಿದೆ.
ಆಸಕ್ತಿ ತರಿಸುವ ಟೈಟಲ್ ನೋಡಿ ಟೀಸರ್‌ನ್ನು ಬಿಡುಗಡೆ ಮಾಡಿದ ಶಿವರಾಜ್‌ಕುಮಾರ್,
ಪುನೀತ್‌ರಾಜ್‌ಕುಮಾರ್ ತಂಡದ ಪ್ರಯತ್ನಕ್ಕೆ ಯಶಸ್ಸು ಸಿಗಲೆಂದು ಹೇಳಿದ್ದಾರೆ.
ಡಾ.ವೆಂಕಟೇಶ್.ಡಿ.ರೆಡ್ಡಿ ನಿರ್ಮಾಪಕರಾಗಿ ಮೂರನೇ ಸಿನಿಮಾ. ಮೋದಿ ಆಸ್ಪತ್ರೆ ಬಳಿ
ಇರುವ ಗಣೇಶ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭದಲ್ಲಿ ಮೊದಲ ದೃಶ್ಯಕ್ಕೆ
ನಿರ್ದೇಶಕ ಹೆಚ್.ವಾಸು ಕ್ಲಾಪ್ ಮಾಡಿದರೆ, ಬಿಗ್‌ಬಾಸ್ ವಿಜೇತ ಪ್ರಥಮ್ ಆಗಮಿಸಿ
ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
Be the first to comment