ನಟ ನವೀನ್ ಶಂಕರ್ ಸಣ್ಣಗಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನವೀನ್ ಶಂಕರ್ 60 ದಿನಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ. 65 ಕೆಜಿ ಇದ್ದ ನವೀನ್ 50 ಕೆಜಿ ಆಗಿದ್ದಾರೆ. ಈ ಸಮಯದಲ್ಲಿ ಜನರು, ಆಹಾರ ಮತ್ತು ಸಂಪರ್ಕದಿಂದ ದೂರು ಉಳಿದುಬಿಟ್ಟಿದ್ದರು. ಈ ಜರ್ನಿಯಲ್ಲಿ ಎದುರಿಸಿದ ಕಷ್ಟಗಳನ್ನು ನವೀನ್ ಶಂಕರ್ ಹಂಚಿಕೊಂಡಿದ್ದಾರೆ.
‘ನನ್ನ ಸೈಕಲಾಜಿಕಲ್ ಕ್ಯಾರೆಕ್ಟರ್ ಪ್ರವೇಶ ಮಾಡಲು ಪ್ರಯತ್ನ ಮಾಡಿದೆ. ಒಮ್ಮೆ ಕ್ಯಾರೆಕ್ಟರ್ ಕಾಡಿಗೆ ಹೋಗುತ್ತಾರೆ. ಅಲ್ಲಿ ತನ್ನ ಜೀವನದಲ್ಲಿ ಸಂಪೂರ್ಣ ಆಸಕ್ತಿ ಕಳೆದುಕೊಳ್ಳುತ್ತಾರೆ. ಕೊನೆ ಸ್ಟೇಜ್‌ನಲ್ಲಿ ವಾಟರ್ ಔಟ್ ಸಮಯ ಎಂದು ಕರೆಯುತ್ತಾರೆ. ಆಗ ಸುಮಾರು 12 ಗಂಟೆಗಳ ಕಾಲ ನೀರು ಸೇವಿಸುವುದಿಲ್ಲ. ಇಲ್ಲಿ ನಾನು ಹೆಚ್ಚು ಶ್ರಮ ಹಾಕಿ 24 ಗಂಟೆಗಳ ಕಾಲ ನೀರು ಕುಡಿಯದೆ ಇದ್ದೆ. ಈ ಸಮಯದಲ್ಲಿ ಬಿಡದಿಯಲ್ಲಿ ರೂಮ್ ಮಾಡಿಕೊಂಡಿದ್ದೆ.
ಆಗ ಫೋನ್ ಆಫ್ ಮಾಡಿದ್ದೆ. ಅಂದು ಬೆಳಗ್ಗೆ ಬಾತ್‌ರೂಮ್‌ನಲ್ಲಿ ಸಿಕ್ಕಾಪಟ್ಟೆ ಬೆವರಲು ಶುರು ಮಾಡಿದ್ದೆ. ನೋವು ಶುರುವಾಗಿ ನನ್ನ ಕಥೆ ಮುಗಿಯಿತ್ತು ಅಂದುಕೊಂಡಿದ್ದೆ. ಒಂದು ಹೆಜ್ಜೆ ಇಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಹೋಟೆಲ್ ರಿಸೆಪ್ಶನ್ ಅಥವಾ ಸ್ನೇಹಿತರನ್ನು ಸಂಪರ್ಕ ಮಾಡಲು ಆಗಲಿಲ್ಲ. ನಾನು ಓದಿಕೊಂಡಿರುವ ಪ್ರಕಾರ ಸ್ವಲ್ಪ ಚಾಕೋಲೇಟ್, ಸ್ವಲ್ಪ ನೀರು, ಸ್ವಲ್ಪ ಉಪ್ಪು ಸೇವಿಸಿದೆ. ಆಸ್ಪತ್ರೆ ತಲುಪುವಷ್ಟರಲ್ಲಿ ಚೇತರಿಸಿಕೊಂಡೆ. ವೈದ್ಯರು ಸರಿಯಾಗಿ ಬೈದು ನನ್ನ ಡಯಟ್‌ಗೆ ಬ್ರೇಕ್ ಹಾಕಿದ್ದರು’ ಎಂದು ನವೀನ್ ಶಂಕರ್ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ನಾನಾ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ.
Be the first to comment