ಚಿತ್ರ ವಿಮರ್ಶೆ : ಹಾಸ್ಯಭರಿತ ‘ನವರಾತ್ರಿ’ ವೈಭವ

ಚಿತ್ರ: ನವರಾತ್ರಿ

ನಿರ್ದೇಶಕ: ಲಕ್ಷ್ಮೀ ಕಾಂತ ಚೆನ್ನ

ನಿರ್ಮಾಣ: ಸಾಮಾನ್ಯ ರೆಡ್ಡಿ ವಂಶಿ

ತಾರಾಗಣ: ತ್ರಿವಿಕ್ರಮ್‌, ಕಿಚ್ಚ ವೆಂಕಟ್‌, ಹೃದಯ ಅವಂತಿ, ಪ್ರಣಯ್‌ ರಾಯ್‌.

ನವರಾತ್ರಿ ಎನ್ನುವ ಹೆಸರು ಕೇಳಿದರೆ ದೇವಿಯ ಮಹಿಮೆಯ ಚಿತ್ರ ಎನ್ನುವ ಕಲ್ಪನೆ ಮೂಡುವುದು ಸಹಜ. ಆದರೆ ಇಲ್ಲಿ ದೇವಿಗಿಂತ ದೇವರ ಚಿತ್ರದ ಘಾಟು ಹೆಚ್ಚಾಗಿರುವುದು ವಿಪರ್ಯಾಸ.ಮೋಜು , ಮಸ್ತಿಯ ಜೀವನ ಎಂದುಕೊಂಡಿರುವ ಗೆಳೆಯ , ಗೆಳತಿಯರು . ಒಳಗೊಂದು , ಹೊರಗೊಂದು ಆಲೋಚನೆ ಮಾಡುವ ಕೆಲವು ಕಿಡಿಗೇಡಿಗಳ ಮಂದಿ , ಇದರ ನಡುವೆ ಏನೂ ಅರಿಯದೇ ಕೆಲಸದ ನಿಮಿತ್ತ ಬಂದು ಸೇರುವರ ಸುತ್ತ ನಡೆಯುವ ಕಥಾ ಹಂದರವಾಗಿದ್ದು.ನಾಯಕ ತ್ರಿವಿಕ್ರಮ , ನಾಯಕಿ ಹೃದಯ ಅವಂತಿಕಾ ಹಾಗೂ ಗೆಳೆಯರು ಪೂರ್ಣಗೊಳ್ಳದ ಅಪಾರ್ಟ್ಮೆಂಟ್ ಒಳಗೆ ಸೇರುತ್ತಾರೆ.ಮಧ್ಯರಾತ್ರಿಯೊಂದಿಗೆ ಆರಂಭಗೊಳ್ಳುವ ಚಿತ್ರದಲ್ಲಿ ತಯಾರಿಯ ಹಂತದಲ್ಲಿರುವ ಕಟ್ಟಡ ಮತ್ತು ಅದರಲ್ಲಿ ಕಾಡುವಂತೆ ಕಾಣುವ ದೆವ್ವದ ಉಪಟಳವನ್ನು ತೋರಿಸಲಾಗುತ್ತದೆ. ಅದು ನಿಜಕ್ಕೂ ದೆವ್ವವೇನಾ? ಹಾಗಾದರೆ ನವರಾತ್ರಿಗೂ ದೆವ್ವಕ್ಕೂ ಏನು ಸಂಬಂಧ? ಮೊದಲಾದ ವಿಚಾರಗಳನ್ನು ಅರಿಯಬೇಕಾದರೆ ನವರಾತ್ರಿ ಚಿತ್ರವನ್ನು ನೋಡಬೇಕು.

ಆರಂಭದಲ್ಲಿ ಆಟದಂತೆ ಕಾಣಿಸುವ ದೆವ್ವದ ಉಪಟಳದ ಹಿಂದೆ ಓಂ ಶಕ್ತಿ ದೇವಿಯ ಮಾಯೆ ಇದೆ ಎನ್ನುವುದು ಮುಂದೆ ಅರಿವಾಗುತ್ತದೆ. ನೀಲಕಂಠೇಗೌಡನ ಮನೆತನದಿಂದ ಪ್ರತಿ ಒಂಬತ್ತು ವರ್ಷಗಳಿಗೊಮ್ಮೆ ಒಬ್ಬರನ್ನು ದೇವಿ ಬಲಿ ಪಡೆಯುತ್ತಾಳೆ. ಚಿತ್ರದ ಇಬ್ಬರು ಪ್ರಧಾನ ಪಾತ್ರಧಾರಿಗಳು ಆ ವಂಶದ ಇಬ್ಬರು ಸಹೋದರರು. ಹಾಗಾದರೆ ಅವರಿಬ್ಬರಲ್ಲಿ ಈ ಬಾರಿ ದೇವಿ ಯಾರ ಬಲಿ ಪಡೆಯುತ್ತಾಳೆ? ಆ ಆಶ್ಲೇಷ ಮಾಸದ ಶುಕ್ಲ ಪಕ್ಷದ ವಿಶೇಷ ರಾತ್ರಿ ಏನು ನಡೆಯುತ್ತದೆ ಎನ್ನುವುದೇ ಚಿತ್ರದ ಪ್ರಮುಖ ತಿರುಳು.

ಚಿತ್ರದ ಬಹುತೇಕ ಭಾಗವನ್ನು ಒಂದೇ ಕಟ್ಟಡದಲ್ಲಿ ಚಿತ್ರೀಕರಿಸಲಾಗಿದೆ. ಕಟ್ಟದದ ಕಾವಲುಗಾರನಾಗಿ ಆದಿ ಎನ್ನುವ ಪಾತ್ರಧಾರಿ ಸೇರಿದಂತೆ ಚಿತ್ರದ ಬಹುತೇಕ ಹೊಸ ಮುಖಗಳೇ ಚಿತ್ರದ ಪ್ರಧಾನ ಪಾತ್ರಗಳನ್ನು ನಿಭಾಯಿಸಿದ್ದಾರೆ. ಸನ್ನಿ ಲಿಯೋನ್ ಹಾಡು ನೋಡುತ್ತಾ ಸನ್ನಿ ಹಿಡಿದವನಂತೆ ಹೊರಳಾಡುವ ಆದಿಯ ಪಾತ್ರ ಮಾತ್ರವಲ್ಲ ಆದಿ ಮತ್ತು ಶಿವಮಂಜು ಜೋಡಿಯಾಗಿ ನಟಿಸಿದ ದೃಶ್ಯಗಳಲ್ಲಿ ಬರುವ ಸಂಭಾಷಣೆಗಳೆಲ್ಲವೂ ಸೊಂಟದ ಮಾತುಗಳೇ ಆಗಿರುವುದು ಪ್ರೇಕ್ಷಕರ ಸಹನೆಯನ್ನು ಪರೀಕ್ಷಿಸುವಂತಿದೆ. ನಾಯಕನಾಗಿ ತ್ರಿವಿಕ್ರಮ್ ತಮ್ಮ ಪಾತ್ರವನ್ನು ತಕ್ಕಮಟ್ಟಿಗೆ ನಿಭಾಯಿಸಿದ್ದಾರೆ. ಆ ಕಟ್ಟಡದ ಇಂಟೀರಿಯರ್ ಡಿಸೈನ್ ಮಾಡಲು ಬರುವ ಆರ್ಕಿಟೆಕ್ಚರ್ ಆಗಿ ಬರುವ ತ್ರಿಗುಣ ಎನ್ನುವ ಯುವತಿಯಾಗಿ ಹೃದಯ ಆವಂತಿ ನಟಿಸಿದ್ದಾರೆ. ಆರಂಭದಲ್ಲಿ ಮಾದಕತೆಯಿಂದ ಮನ ಸೆಳೆಯುವ ಈ ಬೆಡಗಿ ಮಧ್ಯಂತರದ ಬಳಿಕ ತಾನೊಬ್ಬಳು ಉತ್ತಮ ಕಲಾವಿದೆ ಎನ್ನುವುದನ್ನು ಕೂಡ ತೋರಿಸಿಕೊಟ್ಟಿದ್ದಾರೆ.

ಚಿತ್ರದ ಛಾಯಾಗ್ರಣ ನಿರ್ವಹಿಸಿರುವ ರವಿ, ಪ್ರೀತಮ್ ಮತ್ತು ಕುತೂಹಲಕಾರಿ ಹಿನ್ನೆಲೆ ಸಂಗೀತ ನೀಡಿರುವ ನರೇಶ್ ಕುಮಾರ್ ಅವರನ್ನು ಮೆಚ್ಚಲೇಬೇಕು. ನವರಾತ್ರಿ ಎನ್ನುವ ಹೆಸರು ನೋಡಿ ಮೋಸ ಹೋಗದೆ, ಒಂದು ದೆವ್ವದ ಚಿತ್ರ ನೋಡುವ ಆಸಕ್ತಿ ಇರಿಸಿಕೊಂಡವರು ಖಂಡಿತವಾಗಿ ನೋಡಬಹುದಾದ ಚಿತ್ರ ಇದು.

ರೇಟಿಂಗ್ – [3.75/5]

This Article Has 4 Comments
  1. Pingback: DevOps implementation strategy

  2. Pingback: best cvv shop 2020

  3. Pingback: Oriental Plumbing Giant

  4. Pingback: 꽃계열 개나리

Leave a Reply

Your email address will not be published. Required fields are marked *

Translate »
error: Content is protected !!