ಚಿತ್ರ: ತೋತಾಪುರಿ
ನಿರ್ದೇಶನ: ವಿಜಯ ಪ್ರಸಾದ್
ನಿರ್ಮಾಪಕ: ಕೆ ಎ ಸುರೇಶ್
ತಾರಾಗಣ: ಜಗ್ಗೇಶ್, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ಧನಂಜಯ್, ದತ್ತಣ್ಣ ಇತರರು.
ರೇಟಿಂಗ್: 4/5
ಕಚಗುಳಿ ಇಡುವ ಸಂಭಾಷಣೆಯ ನಡುವೆಯೂ ಭಾವೈಕ್ಯತೆ ಸಾರುವ ಸಿನಿಮಾ ಆಗಿ ತೋತಾಪುರಿ ಗಮನ ಸೆಳೆಯುತ್ತದೆ.
ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಮೂರು ಧರ್ಮಗಳಿಗೆ ಸಂಬಂಧಪಟ್ಟ ವಿಚಾರಗಳು ಚಿತ್ರದಲ್ಲಿ ಮೂಡಿ ಬಂದಿವೆ. ಪುಟ್ಟ ಪ್ರೇಮಕಥೆ ಆಗಿರುವ ಚಿತ್ರ ಪ್ರೇಕ್ಷಕರನ್ನು ಮೋಡಿ ಮಾಡುತ್ತದೆ.
ಚಿತ್ರದಲ್ಲಿ ಕೆಲವು ಪಂಚಿಂಗ್ ಡೈಲಾಗ್ ಕೇಳಲು ಮುಜುಗರ ಅನಿಸುತ್ತವೆ. ಆದರೂ ಸೀರಿಯಸ್ ವಿಚಾರ ಬೇರೆಯದ್ದೇ ಲೋಕವನ್ನೇ ತೋರಿಸುವ ಕಾರಣ ಇದನ್ನು ಸಹಿಸಿಕೊಳ್ಳಬಹುದು. ಚಿತ್ರದಲ್ಲಿ ಉತ್ತಮ ಸಂದೇಶ ನೀಡುವ ಯತ್ನ ಮಾಡಲಾಗಿದೆ.
ಚಿತ್ರವನ್ನು ಕಟ್ಟಿಕೊಟ್ಟ ಪರಿಸರ ಭಿನ್ನ ಎನಿಸುತ್ತದೆ. ‘ಬಾಗ್ಲು ತೆಗಿ ಮೇರಿ ಜಾನ್’ ಹಾಡನ್ನ ತೆರೆಯ ಮೇಲೆ ನೋಡಲು ಥ್ರಿಲ್ ಅನಿಸುತ್ತದೆ. ಡಬಲ್ ಮೀನಿಂಗ್ ಡೈಲಾಗ್ ಮೂಲಕ ಇಂದಿನ ಪ್ರಪಂಚದಲ್ಲಿ ಏನಾಗುತ್ತಿದೆ ಅನ್ನೋದನ್ನು ನಿರ್ದೇಶಕರು ಅಚ್ಚುಕಟ್ಟಾಗಿ ತೋರಿಸಿದ್ದಾರೆ.
ನವರಸ ನಾಯಕ ಜಗ್ಗೇಶ್ ಎಲ್ಲರ ಮನಸ್ಸಿಗೆ ಮುಟ್ಟುವ ರೀತಿಯಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ. ಅದಿತಿ ಪ್ರಭುದೇವ ತಮ್ಮ ಆಕ್ಟ್ ಮೂಲಕ ಗಮನ ಸೆಳೆಯುತ್ತಾರೆ.
ಚಿತ್ರದಲ್ಲಿ ಜಗ್ಗೇಶ್, ಅದಿತಿ, ಧನಂಜಯ್, ವೀಣಾ ಸುಂದರ್, ದತ್ತಣ್ಣ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರವನ್ನು ಕೆ.ಎ.ಸುರೇಶ್ “ಮೋನಿಫಿಕ್ಸ್ ಸ್ಟುಡಿಯೋಸ್” ಮೂಲಕ ನಿರ್ಮಿಸಿದ್ದಾರೆ.
_____

Be the first to comment