ಹಿರಿಯ ನಿರ್ದೇಶಕ ಎಸ್.ನಾರಾಯಣ್ ಪ್ರಾಂಶುಪಾಲರಾಗಿರುವ ‘ನವರಸ ನಟನ ಅಕಾಡೆಮಿ’ ಡಿಸೆಂಬರ್ 6ನೇ ತಾರೀಖಿನಿಂದ ಈ ವರ್ಷದ ಎರಡನೇ ಬ್ಯಾಚ್ ಶುರು ಮಾಡುತ್ತಿದೆ. ಕೊರೊನಾ ಹಾವಳಿಯಿಂದ ಎಲ್ಲೆಡೆ ಲಾಕ್’ಡೌನ್ ಆಗುವ ಮೊದಲೇ ಎಚ್ಚೆತ್ತ ನವರಸ ನಟನ ಅಕಾಡೆಮಿ, ಸುರಕ್ಷತಾ ಮುಂಜಾಗ್ರತೆಯಿಂದಾಗಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿತ್ತು.
ಇದೀಗ ಲಾಕ್ಡೌನ್ ತೆರವಾಗಿತ್ತಿದ್ದಂತೆ ಸುರಕ್ಷತೆಯೊಂದಿಗೆ ಈ ವರ್ಷದ ಮೊದಲ ಬ್ಯಾಚ್ ಯಶಸ್ವಿಯಾಗಿ ಮುಗಿಸಿದೆ. ಡಿ.6ರಿಂದ ಹೊಸ ತರಗತಿಗಳು ಆರಂಭವಾಗಲಿದ್ದು, ಈಗಲೂ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಅಳವಡಿಸಿಕೊಂಡು ತರಗತಿ ಪ್ರಾರಂಭಿಸಲಾಗುತ್ತಿದೆ.
ಸಾಮಾಜಿಕ ಅಂತರ, ಶುಚಿತ್ವ ಕಾಪಾಡಿಕೊಂಡು, ಒಂದು ಬ್ಯಾಚ್’ಗೆ ನಿಯಮಿತ ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಂಡು ತರಗತಿ ಪ್ರಾರಂಭಿಸುವ ಉದ್ದೇಶ ಈ ಸಂಸ್ಥೆಯದ್ದು. ಮೊದಲಿನಿಂದಲೂ ನಡೆದುಕೊಂಡು ಬರುತ್ತಿರುವ 4 ಮತ್ತು 6 ತಿಂಗಳ ಹಾಗೂ ವಾರಾಂತ್ಯದ ನಟನೆ-ನಿರ್ದೇಶನ ತರಗತಿಗಳು ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ಇರಲಿವೆ.
ಎಲ್ಲಾ ವಿದ್ಯಾರ್ಥಿಗಳಿಗೂ ನಟನೆ, ನಿರ್ದೇಶನ, ಡಾನ್ಸಿಂಗ್, ಫೈಟಿಂಗ್, ಮೂಖಾಭಿನಯ, ಮೇಕಪ್, ಸಂಕಲನ ಮತ್ತು ಡಬ್ಬಿಂಗ್ ಸೇರಿದಂತೆ ಚಿತ್ರೀಕರಣದ ಅನುಭವ, ಪೋಸ್ಟ್ ಪ್ರೊಡಕ್ಷನ್ ಬಗ್ಗೆ ಮಾಹಿತಿ ನೀಡುತ್ತಾ ಬಂದಿರುವ ಈ ಸಂಸ್ಥೆ, ಈ ಬಾರಿಯೂ ಅವೆಲ್ಲವನ್ನೂ ಮುಂದುವರೆಸಿಕೊಂಡು ಹೋಗುವ ಭರವಸೆ ವ್ಯಕ್ತಪಡಿಸಿದೆ.
ಕಳೆದ ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ‘ನವರಸ ನಟನ ಅಕಾಡೆಮಿ’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಮಾಲೂರು ಶ್ರೀನಿವಾಸ್ ಸಹ ವಿದ್ಯಾರ್ಥಿಗಳಿಗೆ ನೃತ್ಯ ಹಾಗೂ ಇನ್ನಿತರೆ ಪಟ್ಟುಗಳನ್ನು ಕಲಿಸಿಕೊಡಲಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ‘ನವರಸ ನಟನ ಅಕಾಡೆಮಿ’ ಸಂಸ್ಥೆಯಲ್ಲಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಸಾಕಷ್ಟು ಸಿನಿಮಾ, ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗೆಯೇ ಕೆಲವರು ಸ್ವತಂತ್ರ ನಿರ್ದೇಶಕರಾಗಿ, ಕಲಾವಿದರಾಗಿ ಗುರುತಿಸಿಕೊಳ್ಳುತ್ತಿರೋದು ಈ ಸಂಸ್ಥೆಯ ಹೆಚ್ಚುಗಾರಿಕೆ.
ಪ್ರಾಂಶುಪಾಲರಾದ ಎಸ್.ನಾರಾಯಣ್ ಸೇರಿದಂತೆ ನಿರ್ದೇಶಕರಾದ ವಿ.ಮನೋಹರ್, ಲಕ್ಕಿ ಶಂಕರ್, ಹಿರಿಯ ನಟರಾದ ಶಿವರಾಮ್, ಸುಂದರ್ ರಾಜ್ ಸೇರಿದಂತೆ ಚಿತ್ರರಂಗದ ನುರಿತವರು ಹಾಗೂ ಎನ್.ಎಸ್.ಡಿ, ನೀನಾಸಂ ಬಳಗದ ನುರಿತವರು ನಟನೆ, ನಿರ್ದೇಶನ, ಡೈಲಾಗ್ ಡೆಲಿವರಿ ಹಾಗೂ ಕ್ಯಾಮೆರಾ ಎದುರಿಸುವ ಪರಿ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ಅವರಿಂದಲೇ ಕಿರುಚಿತ್ರವೊಂದನ್ನು ತಯಾರು ಮಾಡಿಸಿ ಅರ್ಹತಾ ಪತ್ರ ವಿತರಣೆ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಬೀಳ್ಕೊಡುತ್ತದೆ ನವರಸ ನಟನ ಅಕಾಡೆಮಿ.
ಜಗ್ಗೇಶ್ ಅವರ ಸಹಕಾರದೊಂದಿಗೆ ಈ ಸಂಸ್ಥೆ ಯಶಸ್ವಿಯಾಗಿ ನಾಡಿನಾದ್ಯಂತ ಖ್ಯಾತಿ ಗಳಿಸುತ್ತಿರುವ ಖುಷಿಯಲ್ಲಿದ್ದಾರೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಾಲೂರು ಶ್ರೀನಿವಾಸ್. ಮಹಿಳೆಯರಿಗಾಗಿ ವಿಶೇಷ ರಿಯಾಯಿತಿ ಸೌಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ: ನವರಸ ನಟನ ಅಕಾಡೆಮಿ, ಮೊ. ಸಂಖ್ಯೆ; 98802 19666 / 98804 19666 ಸಂಪರ್ಕಿಸಬಹುದು.
ವೆಬ್ಸೈಟ್: www.navarasanatana.com
Be the first to comment