ಕನ್ನಡದ ಖಳನಾಯಕ ನಟರ ಮಕ್ಕಳು ನಟಿಸಿದ್ದ ದಸರಾ ಹಾಗೂ ಅಂಬಾರಿಯ ಸುತ್ತ ಸುತ್ತುವ ನವಗ್ರಹ ಸಿನಿಮಾ ಶೀಘ್ರದಲ್ಲಿ ರೀ-ರಿಲೀಸ್ ಆಗಲಿದೆ.
ದರ್ಶನ್ ಸಿನಿಮಾ ಪೋಸ್ಟರ್ ನ್ನು ಇನ್ಸ್ಟಾಗ್ರಾಮ್ ಸ್ಟೋರಿಸ್ನಲ್ಲಿ ಶೇರ್ ಮಾಡಿದ್ದಾರೆ. ಸಿನಿಮಾ ರೀ-ರಿಲೀಸ್ ವಿಚಾರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
‘ನವಗ್ರಹ’ ಪೋಸ್ಟರ್ ಹಂಚಿಕೊಂಡಿರುವ ವಿಜಯಲಕ್ಷ್ಮಿ, ‘ಪ್ರೀತಿಯ ದರ್ಶನ್ ಸೆಲೆಬ್ರಿಟಿಗಳೆ, ಎಲ್ಲರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ನವಗ್ರಹ ಸಿನಿಮಾ ಆದಷ್ಟು ಬೇಗ ಮರು ಬಿಡುಗಡೆ ಆಗಲಿದೆ. ಈ ಬಾರಿ ಸಿನಿಮಾ ನೋಡುವ ಅನುಭವ ಕೊಂಚ ಭಿನ್ನವಾಗಿರಲಿದೆ. ನವಗ್ರಹ ಸಿನಿಮಾವನ್ನು ನಿಮ್ಮ ಸನಿಹದ ಚಿತ್ರಮಂದಿರದಲ್ಲಿ ವೀಕ್ಷಿಸಲು ರೆಡಿಯಾಗಿ’ ಎಂದು ಬರೆದಿದ್ದಾರೆ.
ದರ್ಶನ್ ಸಿನಿಮಾದಲ್ಲಿ ಮೇನ್ ವಿಲನ್ ರೋಲ್ ಮಾಡಿದ್ದರು. ವಿನೋದ್ ಪ್ರಭಾಕರ್, ನಾಗೇಂದ್ರ ಅರಸ್, ತರುಣ್ ಸುಧೀರ್, ಧರ್ಮ ಕೀರ್ತಿರಾಜ್ ಸೇರಿದಂತೆ ಕನ್ನಡದ ಹೆಸರಾಂತ ವಿಲನ್ ಮಕ್ಕಳು ಈ ಚಿತ್ರದಲ್ಲಿ ಅಭಿನಯಿಸಿದ್ದರು.
ಕನ್ನಡದಲ್ಲಿ ಇದು ಒಂದು ಹೊಸ ಪ್ರಯೋಗ ಆಗಿತ್ತು. ಒಳ್ಳೆ ಪರಿಕಲ್ಪನೆ ಈ ಚಿತ್ರದಲ್ಲಿತ್ತು. 16 ವರ್ಷದ ಹಿಂದೆ ಬಂದ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ, ದಿನಕರ್ ಡೈರೆಕ್ಷನ್ ಮಾಡಿದ್ದರು. ಎ.ವಿ.ಕೃಷ್ಣ ಕುಮಾರ್ ಕ್ಯಾಮರಾವರ್ಕ್, ದರ್ಶನ್ ತಾಯಿ ಮೀನಾ ತೂಗುದೀಪಾ ಶ್ರೀನಿವಾಸ್ ಈ ಚಿತ್ರ ನಿರ್ಮಿಸಿದ್ದರು.
Be the first to comment