‘ನವ ಇತಿಹಾಸ’ ಚಿತ್ರದ ಧ್ವನಿಸುರುಳಿ ಬಿಡುಗಡೆ

ಹೆಣ್ಣು ಭ್ರೂಣಹತ್ಯೆ ಮಹಾ ಪಾಪ ಎಂಬ ಸಂದೇಶವನ್ನು ಹೇಳುವ ಹಲವು ಚಿತ್ರಗಳು ಈಗಾಗಲೇ ಸ್ಯಾಂಡಲ್‍ವುಡ್‍ನಲ್ಲಿ ಬಂದಿದೆ. ಈಗ ನಿರ್ಮಾಪಕಿ ಅಮೃತರಾವ್ ಅವರು ನವ ಇತಿಹಾಸದಲ್ಲೂ ಭ್ರೂಣ ಹತ್ಯೆಯ ಬಗ್ಗೆ ಹೇಳಲು ಹೊರಟಿದ್ದಾರೆ.ಶ್ರೀರಜನಿ ಹಾಗೂ ಸಮರ್ಥ ನಿರ್ದೇಶಿಸುತ್ತಿರುವ ಈ ಚಿತ್ರದ ಆಡಿಯೋ ಸಮಾರಂಭವು ಇತ್ತೀಚೆಗೆ ನಡೆಯಿತು. ಕನ್ನಡ ಫಿಲಂ ಚೇಂಬರ್ ಅಧ್ಯಕ್ಷ ಕೃಷ್ಣೇಗೌಡ, ಉಮೇಶ್ ರಾಹುತ ಹಾಗೂ ನಿರ್ಮಾಪಕ ಭೈರೇಶ್ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವನಿಸುರುಳಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಭರವಸೆ ಚಿತ್ರದಲ್ಲಿ ನಟಿಸಿರುವ ವಸಂತ್‍ರಾಜ್ ಅವರು ಮಗಳನ್ನು ಚಿತ್ರರಂಗದಲ್ಲಿ ಬೆಳೆಸಬೇಕೆಂಬ ದೃಷ್ಟಿಯಿಂದ ಈ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಾಯಕಿ ಕಂ ನಿರ್ಮಾಪಕಿ ಅಮೃತ ವಿ.ರಾಮ್ ಮಾತನಾಡಿ, ಹೆಣ್ಣೇ ಸಮಾಜದ ಕಣ್ಣು ಎನ್ನುತ್ತಾರೆ ಆದರೆ ಅಂತಹ ಹೆಣ್ಣಿನ ಭ್ರೂಣವನ್ನು ಹತ್ಯೆ ಮಾಡಿದ್ದರಿಂದಲೇ ಪ್ರಪಂಚದಲ್ಲೀಗ ಹೆಣ್ಣಿನ ಸಂಖ್ಯೆ ಕ್ಷೀಣಿಸಿದೆ.

ಹೆಣ್ಣು ಇಲ್ಲದ ಸಮಾಜವನ್ನು ಊಹಿಸುವುದೂ ಕಷ್ಟಘಿ. ಆದ್ದರಿಂದ ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ ಎಂಬ ಸಂದೇಶವನ್ನು ಈ ಚಿತ್ರದಲ್ಲಿ ಹೇಳಲು ಹೊರಟಿದ್ದು, ಈಗಾಗಲೇ ಚಿತ್ರದ ಸೆನ್ಸಾರ್ ಆಗಿದ್ದು, ಶೀಘ್ರವೇ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು.ನಿರ್ದೇಶಕ ಸಮರ್ಥ ಮಾತನಾಡಿ, ಹೆಣ್ಣಿನ ಭ್ರೂಣ ಹತ್ಯೆಯನ್ನು ತಡೆಯಬೇಕೆಂಬ  ನನ್ನ ನಿರ್ದೇಶನದ ಮೊದಲ ಚಿತ್ರದಲ್ಲಿ ಪ್ರಯತ್ನಿಸಲು ಹೊರಟಿದ್ದೇನೆ, ನವ ಇತಿಹಾಸವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದು ಈ ಮೂಲಕವಾದರೂ ಹೆಣ್ಣಿನ ಭ್ರೂಣಹತ್ಯೆ ನಿಲ್ಲುವಂತಾಗಲಿ, ನಮ್ಮ ಕೆಲಸವನ್ನು ಮುಗಿಸಿದ್ದು ಇನ್ನೂ ಪ್ರೇಕ್ಷಕರು ತೀರ್ಪು ನೀಡಬೇಕಷ್ಟೇ ಎಂದರು.

ಫಿಲಂ ಚೇಂಬರ್ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ನವ ಇತಿಹಾಸವು ಹೆಸರಿಗೆ ತಕ್ಕಂತೆ ಹೊಸ ಇತಿಹಾಸವನ್ನು ನಿರ್ಮಿಸುವಂತಾಗಲಿ. ನಿರ್ದೇಶಕರು ನಡೆಸಿದ ಹುಡುಕಾಟ ತಾಕಲಾಟವನ್ನು ತೆರೆ ಮೇಲೆ ತೋರಿಸಿದ್ದಾರೆ ಎಂದು ಹೇಳಿದರು.

ಫಿಲಂ ಚೇಂಬರ್ ಅಧ್ಯಕ್ಷ ಕೃಷ್ಣೇಗೌಡ ಮಾತನಾಡುತ್ತಾ, ಈ ಸಿನಿಮಾ ಹೊಸ ಇತಿಹಾಸ ನಿರ್ಮಿಸಲಿ. ನಿರ್ದೇಶಕರು ನಡೆಸಿದ ಹುಡುಕಾಟ ತಾಕಲಾಟವನ್ನು ತೆರೆ ಮೇಲೆ ತೋರಿಸಿದ್ದಾರೆ ಎಂದು ಹೇಳಿದರು. ಲಹರಿ ಸಂಸ್ಥೆ ಈ ಆಡಿಯೋ ಹೊರತರಲಾಗಿದೆ.

ಇದೇ ವೇಳೆ ಚಿತ್ರದ ಎರಡು ಹಾಡು ಹಾಗೂ ಟ್ರೈಲರ್ ಅನ್ನು ದೊಡ್ಡ ಪರದೆಯ ಮೇಲೆ ಪ್ರದರ್ಶಿಸಲಾಯಿತು. ಶ್ರೀರಜನಿ, ಸಮರ್ಥ್ ಕತೆ, ಚಿತ್ರಕತೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಐದು ಹಾಡುಗಳಿದ್ದು ವಿನುಮನಸು ಸಂಗೀತ ಸಂಯೋಜಿಸಿದ್ದರೆ, ಕೆ.ಎನ್.ರಾಜ್‍ಗೌಡ ಛಾಯಾಗ್ರಹಣ, ಪಿ.ಮರಿಸ್ವಾಮಿ ಸಂಕಲನ, ಅಲ್ಟಿಮೇಟ್ ಶಿವು ಸಾಹಸವಿದೆ. ನವ ಇತಿಹಾಸ ಚಿತ್ರವನ್ನು ನೋಡಿಯಾದರೂ ಹೆಣ್ಣಿನ ಭ್ರೂಣ ಹತ್ಯೆ ನಿಂತರೆ ಚಿತ್ರತಂಡದವರ ಪ್ರಯತ್ನಕ್ಕೆ ಫಲ ಸಿಕ್ಕಂತಾಗುತ್ತದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!