ನವ್ಯಶ್ರೀ

ಕಲಾಸೇವೆಯಲ್ಲಿ 25 ವರ್ಷಗಳ ಸಾರ್ಥಕತೆಯಲ್ಲಿ ನವ್ಯಶ್ರೀ

ಆದಿಶಕ್ತಿ ಸ್ಕೂಲ್ ಆಫ್ ಭರತನಾಟ್ಯಂ ವತಿಯಿಂದ ಜಯನಗರದ ಜೆಎಸ್ಎಸ್ ಆಡಿಟೋರಿಯಂನಲ್ಲಿ ಏಪ್ರಿಲ್ 26ರಂದು ನಾಟ್ಯ ರಂಜಿನಿ ಮಾಲಾ ಕಾರ್ಯಕ್ರಮವನ್ನು ಪ್ರಸಿದ್ಧ ನೃತ್ಯಗಾರ್ತಿ ಚಾರ್ಲ್ಸ್ ಮಾ ಅವರ ಶಿಷ್ಯೆಯಾಗಿರುವ ನವ್ಯಶ್ರೀ ಬಿ ಎನ್ ಅವರು ಆಯೋಜಿಸಿದ್ದಾರೆ.

ನವ್ಯಶ್ರೀ 2000 ಇಸವಿಯಿಂದ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಅದೇ ವರ್ಷ ರಂಗಪ್ರವೇಶ ಕೂಡ ಮಾಡಿದ್ದಾರೆ.

ಇವರ ಅಜ್ಜಿಗೆ ಭರತನಾಟ್ಯ ಕಲಿಯುವ ಆಸೆ ಇದ್ದರೂ ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳನ್ನು ಹೊರಗಡೆ ಕಳಿಸುತ್ತಿರಲಿಲ್ಲ. ಆದರೆ ಮೊಮ್ಮಗಳ ಮೂಲಕ ಅವರು ಭರತನಾಟ್ಯಕ್ಕೆ ಪ್ರೋತ್ಸಾಹ ನೀಡಿ, ಅಜ್ಜನ ಪಿಂಚಣಿ ಹಣದಿಂದ ಭರತನಾಟ್ಯ ಕಲಿಯಲು ಶುಲ್ಕ ಪಾವತಿಸಿದರು. ತಮ್ಮ ಅಜ್ಜಿಯ ಕನಸಿನಂತೆ ಭರತನಾಟ್ಯ ಅಭ್ಯಾಸ ಮಾಡಿರುವ ನವ್ಯಶ್ರೀ ರವರಿಗೆ, ತಾಯಿಯ ಪ್ರೋತ್ಸಾಹ ಹೆಚ್ಚಿನ ಬಲ ಸಿಕ್ಕಂತಾಗಿದೆ.

ನವ್ಯಶ್ರೀ ಅವರು ವಿಪ್ರೋದಲ್ಲಿ ಎಚ್ ಆರ್ ಆಗಿ ಕೆಲಸ ಮಾಡುತ್ತಿದ್ದು, ಭರತನಾಟ್ಯದಲ್ಲಿ ಹಲವು ಸೋಲೋ ಕಾರ್ಯಕ್ರಮಗಳನ್ನು ನೀಡಿದ್ದಾರೆ.
2020ರಲ್ಲಿ ಸಿದ್ಧಿ ಧಾತ್ರಿ ನಾಟ್ಯ ಶಾಲೆಯನ್ನು ಆರಂಭಿಸಿ, ಸುಮಾರು 20 ಮಕ್ಕಳು ಇವರ ಜೊತೆಗೆ ಕಲಿಯುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!