70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆ: ರಿಷಬ್ ಶೆಟ್ಟಿ ಉತ್ತಮ ನಟ

70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆ ಆಗಿದ್ದು, ರಿಷಬ್ ಶೆಟ್ಟಿ ತಮ್ಮ ಕಾಂತಾರ ಚಿತ್ರದ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಈ ಮೂಲಕ ರಿಷಬ್ ಶೆಟ್ಟಿ ಕನ್ನಡಕ್ಕೆ ಪ್ರಶಸ್ತಿ  ತಂದ ನಾಲ್ಕನೆಯ ಅತ್ಯುತ್ತಮ ನಟ ಎನಿಸಿಕೊಂಡಿದ್ದಾರೆ.  ‘ನಾನು ಅವನಲ್ಲ ಅವಳು’ ಚಿತ್ರದ ಅಭಿನಯಕ್ಕೆ ಸಂಚಾರಿ ವಿಜಯ್  ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದರು. ಇದಕ್ಕೂ ಮೊದಲು ತಬರನ ಕಥೆ ಹಾಗೂ ಚೋಮನ ದುಡಿ ಚಿತ್ರಕ್ಕೆ ಪ್ರಶಸ್ತಿ ಬಂದಿವೆ.  ಕನ್ನಡಕ್ಕೆ ನಾಲ್ಕನೆ ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ. 

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಆಗಸ್ಟ್ 16 ರಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಘೋಷಿಸಿದೆ. ಕನ್ನಡದ ಕಾಂತಾರ, ಕೆಜಿಎಫ್ ಚಿತ್ರಗಳು ತಲಾ ಎರಡು ಪ್ರಶಸ್ತಿ ಹಾಗೂ ಮದ್ಯಂತರ, ಅತ್ಯುತ್ತಮ ಸಂಕಲನ ಸುರೇಶ್ ಅರಸ್ ಅವರಿಗೆ ಪ್ರಶಸ್ತಿ ಪ್ರಕಟವಾಗಿದೆ.

ಜನಪ್ರಿಯ ಅಥವಾ ಫೀಚರ್ ಫಿಲಂ ಮಾತ್ರವಲ್ಲಡೆ ಡಾಕ್ಯುಮೆಂಟರಿ, ಕಿರುಚಿತ್ರ, ಅನಿಮೇಟೆಡ್ ಸಿನಿಮಾ, ಆರ್ಟ್ ಸಿನಿಮಾ ಇನ್ನಿತರೆ ಮಾದರಿಯ ಸಿನಿಮಾಗಳಿಗೆ ನಾನ್ ಫೀಚರ್ ಕ್ಯಾಟಗರಿ ಅಡಿಯಲ್ಲಿ ಪ್ರಶಸ್ತಿ ನೀಡಲಾಗುತ್ತದೆ.  ನಾನ್ ಫೀಚರ್ ಫಿಲಂ ಕ್ಯಾಟಗರಿಯಲ್ಲಿ 17 ಭಾಷೆಗಳ 130 ಸಿನಿಮಾಗಳು ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದವು. ನಾನ್ ಫೀಚರ್ ಸಿನಿಮಾ ವಿಭಾಗದಲ್ಲಿ 18 ಕ್ಯಾಟಗರಿಯಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ. ಇದರ ಜೊತೆಗೆ ಸಿನಿಮಾ ಬರವಣಿಗೆಗೆ ಸಂಬಂಧಿಸಿದ ಎರಡು ಪ್ರಶಸ್ತಿಗಳನ್ನು ನೀಡಲಾಗಿದೆ.

ವಿಜೇತರ ಪಟ್ಟಿ

ಅತ್ಯುತ್ತಮ ಚಿತ್ರ: ಆಟ್ಟಂ
ಅತ್ಯುತ್ತಮ ನಟಿ: ಮಾನ್ಸಿ ಪರಾಖ್
ಅತ್ಯುತ್ತಮ ಪೋಷಕ ನಟಿ: ನೀನಾ ಗುಪ್ತಾ
ಅತ್ಯುತ್ತಮ ಮನರಂಜನಾ ಚಿತ್ರ: ಕಾಂತಾರ
ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ನಟಿ: ನಿತ್ಯಾ ಮೆನನ್ (ತಮಿಳು: ತಿರುಚಿತ್ರಂಬಲಂ)
ಅತ್ಯುತ್ತಮ ತೆಲುಗು ಪ್ರಾದೇಶಿಕ ಸಿನಿಮಾ- ಕಾರ್ತಿಕೇಯ 2
ವಿಶೇಷ ಪ್ರಶಸ್ತಿ: ನಟ ಮನೋಜ್ ಬಾಜ್ಪೇಯಿ- ಚಿತ್ರ: ಗುಲ್ಮೋಹರ್
ಅತ್ಯುತ್ತಮ ಚೊಚ್ಚಲ ನಿರ್ದೇಶಕ- ಬಸ್ತಿ ದಿನೇಶ್ ಶೆಣೈ (ಮಧ್ಯಂತರ-ಕಿರುಚಿತ್ರ-ಕನ್ನಡ)

ಅತ್ಯುತ್ತಮ ಸಾಹಸ ನಿರ್ದೇಶನ: ಕೆಜಿಎಫ್: ಚಾಪ್ಟರ್ 2
ಅತ್ಯುತ್ತಮ ಕನ್ನಡ ಪ್ರಾದೇಶಿಕ ಸಿನಿಮಾ- ಕೆಜಿಎಫ್: ಚಾಪ್ಟರ್ 2
ಅತ್ಯುತ್ತಮ ಮರಾಠಿ ಪ್ರಾದೇಶಿಕ ಸಿನಿಮಾ- ವಾಲ್ವಿ
ಅತ್ಯುತ್ತಮ ಗಾಯಕ: ಅರಿಜಿತ್ ಸಿಂಗ್ (ಬ್ರಹ್ಮಾಸ್ತ್ರ)
ಅತ್ಯುತ್ತಮ ತಮಿಳು ಪ್ರಾದೇಶಿಕ ಸಿನಿಮಾ- ಪೊನ್ನಿಯಿನ್ ಸೆಲ್ವನ್ 1

ಅತ್ಯುತ್ತಮ ಛಾಯಾಗ್ರಹಣ: ರವಿ ವರ್ಮನ್ (ಪೊನ್ನಿಯಿನ್ ಸೆಲ್ವನ್ 1)
ಅತ್ಯುತ್ತಮ ಸಂಗೀತ ನಿರ್ದೇಶನ (ಹಿನ್ನೆಲೆ ಸಂಗೀತ): ಎ ಆರ್ ರೆಹಮಾನ್ (ಪೊನ್ನಿಯಿನ್ ಸೆಲ್ವನ್
ಅತ್ಯುತ್ತಮ ಸಂಗೀತ ನಿರ್ದೇಶನ: ಪ್ರೀತಂ (ಬ್ರಹ್ಮಾಸ್ತ್ರ)
ಅತ್ಯುತ್ತಮ ನೃತ್ಯ ನಿರ್ದೇಶನ: ತಿರುಚಿತ್ರಂಬಲಂ (ತಮಿಳು)

ನಾನ್ ಫೀಚರ್

ವಿಶೇಷ ಪ್ರಶಸ್ತಿ: ಬಿರುಬಾಲ (ಅಸ್ಸಾಮಿ), ಹಾರ್ಗಿಲ (ಅಸ್ಸಾಮಿ)

ಅತ್ಯುತ್ತಮ ಚಿತ್ರಕತೆ: ಕೌಶಿಕ್ ಸರ್ಕಾರ್ (ಮೊನೊ ನೊ ಅವೇರ್)

ಅತ್ಯುತ್ತಮ ನರೇಷನ್: ಸುಮಂತ್ ಶಿಂಧೆ (ಮರ್ಮರ್ಸ್ ಆಫ್ ಜಂಗಲ್) ಮರಾಠಿ ಡಾಕ್ಯುಮೆಂಟರಿ

ಅತ್ಯುತ್ತಮ ಸಂಗೀತ: ವಿಶಾಲ್ ಭಾರಧ್ವಜ (ಫುರ್ಸತ್)

ಅತ್ಯುತ್ತಮ ಎಡಿಟಿಂಗ್ : ಸುರೇಶ್ ಅರಸ್ (ಮಧ್ಯಂತರ) ಕನ್ನಡ ಕಿರುಚಿತ್ರ

ಅತ್ಯುತ್ತಮ ಶಬ್ದ ವಿನ್ಯಾಸ: ಮಾನಸ ಚೌಧರಿ (ಯಾನ) ಹಿಂದಿ/ ಮಾಲ್ವಿ

ಅತ್ಯುತ್ತಮ ಸಿನಿಮಾಟೊಗ್ರಫಿ: ಸಿದ್ಧಾರ್ಥ್ ದಿವಾನ್ (ಮೊನೊ ನೊ ಅವೇರ್) ಹಿಂದಿ/ ಇಂಗ್ಲೀಷ್

ಅತ್ಯುತ್ತಮ ನಿರ್ದೇಶಕ: ಮಿರಿಯಮ್ ಚಾಂಡಿ ಮೆನಚೆರಿ (ಫ್ರಂ ದಿ ಶಾಡೊ) ಬೆಂಗಾಲಿ

ಅತ್ಯುತ್ತಮ ಕಿರುಚಿತ್ರ (30 ನಿಮಿಷ): ಶುನ್ಯುತ (ಅಸ್ಸಾಮಿ)

ಅತ್ಯುತ್ತಮ ಅನಿಮೇಟೆಡ್ : ಎ ಕೊಕೊನೆಟ್ ಟ್ರೀ (ಮೂಕಿ ಸಿನಿಮಾ)

ಸಾಮಾಜಿ ಸಂದೇಶ ನೀಡುವ ಅತ್ಯುತ್ತಮ ಸಿನಿಮಾ: ಗರಿಯಾಲ್-ಇಂಗ್ಲೀಷ್ (ಆಕಾಂಕ್ಷಾ ಸೂದ್ ಸಿಂಗ್)

ಅತ್ಯುತ್ತಮ ಡಾಕ್ಯುಮೆಂಟರಿ: ಮರ್ಮಸ್ ಆಫ್​ ದಿ ಜಂಗಲ್ (ಮರಾಠಿ)

ಅತ್ಯುತ್ತಮ ಕಲಾ ಮತ್ತು ಸಂಸ್ಕೃತಿ ಸಿನಿಮಾ: ರಂಗ ವೈಭವ-ಕನ್ನಡ, ವರ್ಸ-ಮರಾಠಿ

ಅತ್ಯುತ್ತಮ ಐತಿಹಾಸಿಕ ಸಿನಿಮಾ: ಅನಾಕಿ ಏಕ್ ಮಹೆಂಜೊದಾರೊ (ಮರಾಠಿ)

ಅತ್ಯುತ್ತಮ ನಾನ್ ಫೀಚರ್ ಸಿನಿಮಾ: ಆಯ್ನ (ಉರ್ದು)

ಸಿನಿಮಾ ಬರವಣಿಗೆ

ಅತ್ಯುತ್ತಮ ಸಿನಿಮಾ ವಿಮರ್ಶೆ: ದೀಪಕ್ ದುವಾ (ಹಿಂದಿ)

ಅತ್ಯುತ್ತಮ ಸಿನಿಮಾ ಪುಸ್ತಕ: ಕಿಶೋರ್ ಕುಮಾರ್ (ಅನಿರುದ್ಧ ಭಟ್ಟಾಚಾರ್ಯ)

Be the first to comment

Leave a Reply

Your email address will not be published. Required fields are marked *

Translate »
error: Content is protected !!